ನವೆಂಬರ್ 1ರಂದು ಅಪ್ಪಚ್ಚಕವಿ 150ನೇ ಜನ್ಮೋತ್ಸವ
ಕೊಡಗು

ನವೆಂಬರ್ 1ರಂದು ಅಪ್ಪಚ್ಚಕವಿ 150ನೇ ಜನ್ಮೋತ್ಸವ

October 28, 2018

ಮಡಿಕೇರಿ:  ಕೊಡಗಿನ ಆದಿಕವಿ, ವರಕವಿ ಹರದಾಸ ಅಪ್ಪನೆರವಂಡ ಅಪ್ಪಚ್ಚಕವಿ ಅವರ 150ನೇ ಜನ್ಮೋತ್ಸವವನ್ನು ಕಕ್ಕಬ್ಬೆಯಲ್ಲಿ ನ.1 ರಂದು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಆಚರಿಸುವ ಮೂಲಕ, ಕವಿಯ ಸಾಹಿತ್ಯ ಶ್ರೀಮಂತಿಕೆಯ ಕುರಿತು ಜನರಲ್ಲಿ ಅರಿವು ಮೂಡಿಸಲಾಗುವುದು ಎಂದು ‘ಹರದಾಸ ಅಪ್ಪಚ್ಚ ಕವಿಯ 150ನೇ ಜನ್ಮೋತ್ಸವ ಸಮಿತಿ’ಯ ಪ್ರಮುಖರಾದ ಯು.ಎಂ.ಪೂವಯ್ಯ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಮಡಿಕೇರಿಯ ತಿರಿಬೊಳ್‍ಚ ಕೊಡವ ಸಂಘ, ಬಲ್ಲಮಾವಟಿಯ ಜನಮನ ಕಲಾಸಂಘ, ಕೊಡವ ಮಕ್ಕಡ ಕೂಟ, ಕಕ್ಕಬ್ಬೆ ಕೇಂದ್ರ ವಿದ್ಯಾಸಂಸ್ಥೆ ಮತ್ತು ಕಕ್ಕ ಬ್ಬೆಯ ದಿ ಹೈಲ್ಯಾಂಡರ್ಸ್ ಫ್ಯಾಮಿಲಿ ಕ್ಲಬ್‍ನ ಸಂಯುಕ್ತಾಶ್ರಯದಲ್ಲಿ ಕೊಡಗಿನ ಷೇಕ್ಸ್‌ಪಿಯರ್ ಎಂದೇ ಖ್ಯಾತರಾದ ಅಪ್ಪಚ್ಚಕವಿಯವರ ಜನ್ಮೋತ್ಸವವನ್ನು ಕಕ್ಕಬ್ಬೆಯ ಪ್ರೌಢ ಶಾಲೆಯಲ್ಲಿ ಬೆಳಗ್ಗೆ 9 ರಿಂದ ಸಂಜೆ 5.30 ಗಂಟೆಯವರೆಗೆ ಸರಳ ಮತ್ತು ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದರು.

ಕವಿಯ ಜನ್ಮೋತ್ಸವದ ಪ್ರಯುಕ್ತ ಅಂದು ಬೆಳಗ್ಗೆ 9 ಗಂಟೆಗೆ ಕಕ್ಕಬ್ಬೆಯ ನೆಲಜಿ ಜಂಕ್ಷನ್ ನಿಂದ ಪ್ರೌಢಶಾಲೆಯವರೆಗೆ ಸಾಂಪ್ರದಾಯಿಕ ಮೆರವಣಿಗೆ ನಡೆಯಲಿದೆ.

ವಿವಿಧ ಸ್ಪರ್ಧೆ: ಕಾರ್ಯಕ್ರಮದಲ್ಲಿ ಅಪ್ಪಚ್ಚ ಕವಿಯಿಂದ ರಚಿಸಲ್ಪಟ್ಟ ಹಾಡುಗಳ ಗಾಯನ ಸ್ಪರ್ಧೆ, ಕೊಡವ ನಾಟಕ ಸ್ಪರ್ಧೆ, ‘ನಾ ಕಂಡ ಅಪ್ಪಚ್ಚ ಕವಿ’ ವಿಷಯದ ಕುರಿತ ಪ್ರಬಂಧ ಸ್ಪರ್ಧೆ, ಅಪ್ಪಚ್ಚ ಕವಿಯ ರೀತಿಯಲ್ಲಿ ವೇಷ ಭೂಷಣಗಳನ್ನು ಧರಿಸುವ ಛದ್ಮವೇಷ ಸ್ಪರ್ಧೆ, ಅಪ್ಪಚ್ಚ ಕವಿಯಿಂದ ರಚಿಸಲ್ಪಟ್ಟ ಹಾಡು ಗಳಿಗೆ ನೃತ್ಯ ಮಾಡುವ ಸ್ಪರ್ಧೆ, ಏಕಪಾತ್ರಾಭಿನಯ, ಕವಿಯ ಬದುಕಿನ ಯಾವುದೇ ಒಂದು ಘಟ್ಟವನ್ನು ಆಧರಿಸಿದ ಹರಿಕಥೆ, ಕೊಡವ ಆರ್ಕೆಸ್ಟ್ರಾ ಹೀಗೆ ವೈವಿಧ್ಯಮಯ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

ಸಂಜೆ ಅಪ್ಪಚ್ಚ ಕವಿಯ ಕುರಿತಾದ ಅಲ್ಲಾರಂಡ ವಿಠಲ ನಂಜಪ್ಪ ಅವರಿಂದ ನಿರ್ಮಿಸಲ್ಪಟ್ಟ ಸಾಕ್ಷ್ಯಚಿತ್ರ ಪ್ರದರ್ಶನ ವಾಗಲಿದೆ ಎಂದು ಪೂವಯ್ಯ ಮಾಹಿತಿ ನೀಡಿದರು. ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಈ ಹಿಂದೆ ಅ.26 ಕಡೆಯ ದಿನವೆಂದು ನಿಗದಿಗೊಳಿಸಲಾಗಿತ್ತಾದರು, ಇದೀಗ ಅವಧಿ ಯನ್ನು ವಿಸ್ತರಿಸಲಾಗಿದೆ. ಆಸಕ್ತರು ನ.1 ರಂದು ಬೆಳಗ್ಗೆ 10.30ರ ಒಳಗಾಗಿ ಪ್ರಬಂಧ ಮತ್ತು ಆರ್ಕೆಸ್ಟ್ರಾ ಹೊರತು ಪಡಿಸಿ ಉಳಿದ ಸ್ಪರ್ಧೆ ಗಳಿಗೆ ಸ್ಥಳದಲ್ಲೆ ಹೆಸರನ್ನು ನೋಂದಾಯಿ ಸಿಕೊಳ್ಳಬಹುದೆಂದು ತಿಳಿಸಿದರು.

ಪುಸ್ತಕ ಬಿಡುಗಡೆ: ಸಮಾರಂಭದಲ್ಲಿ ಅಪ್ಪಚ್ಚಕವಿ ಅವರು ರಚಿಸಿರುವ ಹಾಡು ಗಳು, ಗಾದೆಗಳು ಹಾಗೂ ಪರಿಚಯವನ್ನೊ ಳಗೊಂಡ 80 ಪುಟಗಳ ‘ಅಪ್ಪಚ್ಚಕವಿರ ನೆಪ್ಪು’ ಎನ್ನುವ ಕಿರು ಹೊತ್ತಿಗೆಯನ್ನು ಹೊರ ತರಲಾಗುತ್ತಿದೆ. ಇದರಲ್ಲಿನ ಮಾಹಿತಿಯನ್ನು ತಾವೇ ಸಂಗ್ರಹಿಸಿದ್ದು, ಕೊಡವ ಮಕ್ಕಡ ಕೂಟದ ಸಹಕಾರದೊಂದಿಗೆ ಪುಸ್ತಕ ಅನಾ ವರಣಗೊಳ್ಳುತ್ತಿದೆ ಎಂದರು. ಇದೇ ಸಂದರ್ಭ ಕೊಡವ ಭಾಷೆಯ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಅವ ಕಾಶವನ್ನು ಕಲ್ಪಿಸಲಾಗಿದೆ ಎಂದು ಯು.ಎಂ. ಪೂವಯ್ಯ ತಿಳಿಸಿದರು.

ಸನ್ಮಾನ: ‘ಕೊಡವ ಅರಿವೋಲೆ’ ಎನ್ನುವ ಶೀರ್ಷಿಕೆಯಡಿ ಕೊಡವ ಭಾಷೆಯ ಅಂದಾಜು 14 ಸಾವಿರ ಶಬ್ದಗಳಿಗೆ ಕನ್ನಡ ಮತ್ತು ಇಂಗ್ಲೀಷ್‍ನಲ್ಲಿ ಅರ್ಥವನ್ನು ನೀಡುವ ಅರ್ಥಕೋಶವನ್ನು ರಚಿಸಿರುವ ಡಾ. ಬೊವ್ವೇರಿಯಂಡ ಸಿ.ಉತ್ತಯ್ಯ ಹಾಗೂ ತಂಗಮ್ಮ ಉತ್ತಯ್ಯ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಗುತ್ತದೆ. ಈ ದಂಪತಿಗಳು ರಚಿಸಿದ ಶಬ್ದಕೋಶವನ್ನು 2016 ರಲ್ಲಿ ಮಂಗಳೂರು ವಿವಿಯ ಕೊಡವ ಅಧ್ಯ ಯನ ಪೀಠ ಹೊರ ತಂದಿದೆ ಎಂದು ಮಾಹಿತಿ ನೀಡಿದರು.

ಬಲ್ಲಮಾವಟಿಯ ಜನಮನ ಕಲಾ ಸಂಘದ ಅಧ್ಯಕ್ಷರಾದ ನೆರವಂಡ ಉಮೇಶ್ ಮಾತನಾಡಿ, ಕೊಡಗಿನ ಆದಿಕವಿ ಹರ ದಾಸ ಅಪ್ಪಚ್ಚ ಕವಿಯವರು ಅತ್ಯಂತ ಮಹ ತ್ವದ ಸಾಹಿತ್ಯವನ್ನು ರಚಿಸಿದ್ದಾರಾದರೂ, ಅವರು ಮತ್ತು ಅವರ ಸಾಹಿತ್ಯದ ಕುರಿತು ಜನವಲಯದಲ್ಲಿ ಹೆಚ್ಚಿನ ಅರಿವು ಇಲ್ಲ ವಾಗಿದೆ. ಈ ಹಿನ್ನೆಲೆಯಲ್ಲಿ ಇಂತಹ ಕಾರ್ಯಕ್ರಮಗಳ ಮೂಲಕ ಕವಿಯನ್ನು ಮತ್ತು ಅವರ ಸಾಹಿತ್ಯವನ್ನು ಜನವಲ ಯಕ್ಕೆ ಪರಿಚಯಿಸುವ ಪ್ರಯತ್ನ ನಡೆ ಯಲಿದೆ ಎಂದರು.

ತಿರಿಬೊಳ್‍ಚ ಕೊಡವ ಸಂಘದ ಅಧ್ಯ ಕ್ಷರಾದ ಉಳ್ಳಿಯಡ ಡಾಟಿ ಪೂವಯ್ಯ ಮಾತನಾಡಿ, ಹದರಾಸ ಅಪ್ಪಚ್ಚ ಕವಿ ಅವರು ಗದ್ಯ ಮತ್ತು ಪದ್ಯ ವಿಭಾಗಗಳಲ್ಲಿ ಅತ್ಯುತ್ಕøಷ್ಟ ಸಾಹಿತ್ಯವನ್ನು ರಚಿಸಿದ್ದು, ಅಂತಹ ಶ್ರೇಷ್ಠ ಸಾಹಿತಿಗಳು ಈ ನೆಲದಲ್ಲಿ ಮತ್ತೆ ಹುಟ್ಟಿ ಬರಬೇಕೆಂದರು. ಕೊಡವ ಭಾಷೆ ಮತ್ತು ಸಾಹಿತ್ಯದ ಅಭಿವೃದ್ಧಿಗೆ ಪೂರಕವಾಗಿ ಕವಿಯ ಜನ್ಮೋತ್ಸವವನ್ನು ಆಚರಿಸಲಾಗುತ್ತಿದೆ ಎಂದು ಡಾಟಿ ಪೂವಯ್ಯ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ, ಕಕ್ಕಬ್ಬೆಯ ದಿ ಹೈಲ್ಯಾಂಡರ್ಸ್ ಫ್ಯಾಮಿಲಿ ಕ್ಲಬ್‍ನ ಬಾಚಮಂಡ ಲವ ಚಿಣ್ಣಪ್ಪ ಹಾಗೂ ಕಲಿಯಂಡ ಸಂಪನ್ ಅಯ್ಯಪ್ಪ ಉಪಸ್ಥಿತರಿದ್ದರು.

Translate »