ನಾಳೆ ನಕ್ಸಲ್ ಮುಖಂಡ ರೂಪೇಶ್ ಮಡಿಕೇರಿ ನ್ಯಾಯಾಲಯಕ್ಕೆ ಹಾಜರು
ಕೊಡಗು

ನಾಳೆ ನಕ್ಸಲ್ ಮುಖಂಡ ರೂಪೇಶ್ ಮಡಿಕೇರಿ ನ್ಯಾಯಾಲಯಕ್ಕೆ ಹಾಜರು

October 28, 2018

ಮಡಿಕೇರಿ: ನಕ್ಸಲ್ ಮುಖಂಡ ರೂಪೇಶ್‍ನನ್ನು ಕೇರಳಾ ಪೊಲೀಸರು ಅ.29ರಂದು ಮಡಿಕೇರಿ ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ನಾಳೆ (ಅ.28) ಕೇರಳ ಕಾರಾಗೃಹ ದಿಂದ ಮಡಿಕೇರಿಗೆ ರೂಪೇಶ್‍ನನ್ನು ಅಲ್ಲಿನ ಪೊಲೀಸರು ಕರೆ ತರಲಿದ್ದು, ಮಡಿಕೇರಿ ಜೈಲಿನಲ್ಲಿ ಇರಿಸಲಿದ್ದಾರೆ.

ಮಡಿಕೇರಿ ನ್ಯಾಯಾಲಯಕ್ಕೆ ಅ.29ರಂದು ಹಾಜರುಪಡಿ ಸಿದ ನಂತರ ಮತ್ತೇ ಆತನನ್ನು ಕೇರಳಾಗೆ ಕರೆದೊಯ್ಯಲಿದ್ದಾರೆ. 2010ರಲ್ಲಿ ಭಾಗಮಂಡಲ ಸಮೀಪದ ತೇರಂಗಾಲ ಗ್ರಾಮಕ್ಕೆ ಭೇಟಿ ನೀಡಿದ್ದ ನಕ್ಸಲ್ ಮುಖಂಡ ವಿಕ್ರಂ ಗೌಡ ನೇತೃತದ ತಂಡದಲ್ಲಿ ರೂಪೇಶ್ ಇದ್ದನೆಂದು ಹೇಳಲಾಗಿದ್ದು, ಆ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಲ್ಲದೆ, 2016ರಲ್ಲಿ ಶಾಸಕ ಕೆ.ಜಿ.ಬೋಪಯ್ಯ ಅವರ ಸ್ವಗ್ರಾಮದವಾದ ಕಾನೂರಿಗೆ ಕೂಡ ರೂಪೇಶ್ ಭೇಟಿ ನೀಡಿದ್ದ ಎಂದು ಸಹ ಪ್ರಕರಣ ದಾಖಲಾಗಿದೆ. ಈ ಪ್ರಕ ರಣಗಳ ವಿಚಾರಣೆಗಾಗಿ ರೂಪೇಶ್‍ನನ್ನು ಸೋಮವಾರ ಮಡಿ ಕೇರಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿದೆ. ಈ ಸಂಬಂಧ ಸೂಕ್ತ ರಕ್ಷಣೆ ಒದಗಿಸುವಂತೆ ಕೇರಳಾ ಪೊಲೀಸರು ಮಡಿಕೇರಿ ಜಿಲ್ಲಾ ಪೊಲೀಸರಿಗೆ ಮನವಿ ಸಲ್ಲಿಸಿದ್ದಾರೆ.

Translate »