ವಿರಾಜಪೇಟೆ: ಆದಿಕವಿ ಹರ ದಾಸ ಅಪ್ಪನೆರವಂಡ ಅಪ್ಪಚ್ಚಕವಿಯ 150ನೇ ಹುಟ್ಟು ಹಬ್ಬ ಹಾಗೂ 75ನೇ ಪುಣ್ಯ ದಿನಾಚರಣೆಯನ್ನು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆ ಸಂಯುಕ್ತ ಆಶ್ರಯದಲ್ಲಿ ನ.21 ರಂದು ಗೋಣಿಕೊಪ್ಪ ಅತ್ತೂರು ನ್ಯಾಷನಲ್ ಅಕಾಡೆಮಿ ಶಾಲಾ ಆವ ರಣದಲ್ಲಿ ತೂಕ್ ಬೊಳಕ್ ಕಲೆ, ಕ್ರೀಡೆ, ಸಾಹಿತ್ಯ ಅಕಾಡೆಮಿ ನೇತೃತ್ವದಲ್ಲಿ ನಡೆ ಯಲಿದೆ ಎಂದು ಅಪ್ಪಚ್ಚಕವಿ ಪುತ್ಥಳಿ ಸ್ಥಾಪಕ ಅಧ್ಯಕ್ಷ ಮುಲ್ಲೇಂಗಡ ಶಂಕರಿ ಪೊನ್ನಪ್ಪ ತಿಳಿಸಿದ್ದಾರೆ.
ವೀರಾಜಪೇಟೆಯಲ್ಲಿ ಸುದ್ದಿಗೋಷ್ಠಿ ಯನ್ನುದ್ದೇಶಿಸಿ ಮಾತನಾಡಿದ ಅವರು, ನ.21 ರಂದು ಬೆಳಿಗ್ಗೆ 9 ಗಂಟೆಗೆ ವಿರಾಜ ಪೇಟೆ ಪಟ್ಟಣದ ದೊಡ್ಡಟ್ಟಿ ಚೌಕಿಯಲ್ಲಿ ರುವ ಅಪ್ಪಚ್ಚ ಕವಿಯ ಪುತ್ಥಳಿಗೆ ದೀಪ ಬೆಳಗಿಸಿ ಮಾಲಾರ್ಪಣಾ ಕಾರ್ಯಕ್ರಮಕ್ಕೆ ಅರಮೇರಿ ಮಠದ ಶ್ರೀ ಶಾಂತಮಲ್ಲಿ ಕಾರ್ಜುನ ಸ್ವಾಮಿ ಹಾಗೂ ಮನೆಯಪಂಡ ದೇಚಮ್ಮ ಕಾಳಪ್ಪ, ಮಗ್ಗುಲ ಗ್ರಾಮದ ಪುಲಿಯಂಡ ಪೊನ್ನಪ್ಪ, ಬಿಳುಗುಂದದ ಕಲೀಮುಲ್ಲ ಖಾನ್, ಭಾಗ್ಯಲಕ್ಷ್ಮಿ ಸಂಸ್ಥೆಯ ಕೋಲತಂಡ ಡಬ್ಲ್ಯೂ. ಬೋಪಯ್ಯ, ನ್ಯಾಷನಲ್ ಅಕಾಡೆಮಿ ಶಾಲೆಯ ಅಪ್ಪ ನೆರವಂಡ ಶಾಂತಿ ಅಚ್ಚಪ್ಪ, ಸಿಎನ್‍ಸಿಯ ನಂದಿನೆರವಂಡ ನಾಚಪ್ಪ, ವಿರಾಜಪೇ ಟೆಯ ಮಂಡೇಪಂಡ ಸುಜಾ ಕುಶಾಲಪ್ಪ ಮುಂತಾದವರು ಭಾಗವಹಿಸಲಿದ್ದಾರೆ. ನಂಜರಾಯಪಟ್ಟಣ ವಿಎಸ್‍ಎಸ್‍ಎನ್ ಅಧ್ಯಕ್ಷ ಬಲ್ಲಡಿಚಂಡ ಮುರುಳಿ ಮೆರ ವಣಿಗೆಗೆ ಚಾಲನೆ ನೀಡಲಿದ್ದಾರೆ ಎಂದು ಶಂಕರಿ ಪೊನ್ನಪ್ಪ ಹೇಳಿದರು.
ಕರ್ನಾಟಕ ಕೊಡವ ಸಾಹಿತ್ಯ ಅಕಾ ಡೆಮಿ ಅಧ್ಯಕ್ಷ ಪಿ.ಕೆ.ಪೊನ್ನಪ್ಪ ಮಾತನಾಡಿ, ಅಪ್ಪನೆರವಂಡ ಕುಂಞಪ್ಪ ದ್ವಾರವನ್ನು ಜಿಲ್ಲಾಧಿಕಾರಿ ಶ್ರೀವಿದ್ಯಾ ಉದ್ಘಾಟಿಸಲಿ ದ್ದಾರೆ. ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವ ಜಯಮಾಲ ವೇದಿಕೆಯನ್ನು ಉದ್ಘಾ ಟಿಸಲಿದ್ದಾರೆ, ಪ್ರವಾಸೋದ್ಯಮ ಮತ್ತು ರೇಷ್ಮೆ ಸಚಿವ ಸಾ.ರಾ.ಮಹೇಶ್ ಕಾರ್ಯ ಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಾಹಿತಿಗಳಾದ ಮೊಣ್ಣಂಡ ಶೋಭಾ ಸುಬ್ಬಯ್ಯ, ಶಾಸಕ ಕೆ.ಜಿ. ಬೋಪಯ್ಯ, ವಿಧಾನ ಪರಿಷತ್ ಸದಸ್ಯ ರಾದ ವೀಣಾ ಅಚ್ಚಯ್ಯ, ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್ ಅವರುಗಳು ಭಾಗವಹಿಸಲಿದ್ದಾರೆ.
ಈ ಸಂದರ್ಭ ಕವಿ ಪ್ರತಿಮೆ ಸ್ಥಾಪಕ ರಾದ ಮುಲ್ಲೇಂಗಡ ಶಂಕರಿ ಪೊನ್ನಪ್ಪ, ಮೈಸೂರು ಶಿಲ್ಪಿ ಅಪ್ಪನೆರವಂಡ ಕಿರಣ್ ಸುಬ್ಬಯ್ಯ, ಕಬ್ಬಚ್ಚೀರ ಪಟ್ಟೇದಾರ ಜೋಯಪ್ಪ ಹಾಗೂ ಇತರರಿಗೆ ಸನ್ಮಾನ ನಡೆಯಲಿದೆ ಎಂದರು. ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯ ನಾಳಿಯಮಂಡ ಉಮೇಶ್ ಕೇಚ ಮಯ್ಯ ಮಾತನಾಡಿ, ಕಾರ್ಯಕ್ರಮದಲ್ಲಿ ಸಾರ್ವಜನಿಕರು ಮತ್ತು ಮಕ್ಕಳಿಂದ ನೃತ್ಯ, ಉಮ್ಮತ್ತಾಟ್, ಬೊಳಕಟ್, ಸಾಮೂಹಿಕ ವಾಲಗತಾಟ್, ದುಡಿಕೊಟ್ಟ್ ಪಾಟ್ ಕಾರ್ಯ ಕ್ರಮ ನಡೆಯಲಿದೆ ಎಂದರು.
ಗೋಷ್ಟಿಯಲ್ಲಿ ನ್ಯಾಷ್‍ನಲ್ ಅಕಾಡೆಮಿ ಶಾಲೆಯ ಅಪ್ಪನೆರವಂಡ ಶಾಂತಿ ಅಚ್ಚಪ್ಪ, ಪಿ.ಪಿ.ಪೊನ್ನಪ್ಪ ಇತರರು ಉಪಸ್ಥಿತರಿದ್ದರು.