ವಿರಾಜಪೇಟೆ: ಕನ್ನಡದ ಭೂಮಿಯಲ್ಲಿ ಕನಕದಾಸರು ಮತ್ತು ಅಪ್ಪಚ್ಚಕವಿ ಅವರು ಮಾನವೀಯ ಮೌಲ್ಯದ ಧರ್ಮಗಳನ್ನು ಈ ಸಮಾಜಕ್ಕೆ ತೋರಿಸುವಂ ತಹ ಕೀರ್ತನೆ, ಸಾಹಿತ್ಯ, ಕಲೆ, ಸಂಸ್ಕøತಿವನ್ನು ನೀಡಿದ್ದಾರೆ ಎಂದು ರಾಷ್ಟ್ರೀಯ ಸಂತ ಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸಮನ್ವಯಾಧಿಕಾರಿ ಕಾ.ತ.ಚಿಕ್ಕಣ್ಣ ಹೇಳಿದರು.
ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜು ವಿರಾಜಪೇಟೆ ಸಂಯುಕ್ತ ಆಶ್ರಯದಲ್ಲಿ ಕಾಲೇ ಜಿನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ‘ಕನಕದಾಸರು ಮತ್ತು ಅಪ್ಪಚ್ಚಕವಿ-ತೌಲನಿಕ ಅಧ್ಯಯನ ವಿಚಾರ ಸಂಕಿ ರಣ’ದಲ್ಲಿ ತಂಬೂರಿ ನುಡಿಸುವ ಮೂಲಕ ಕಾರ್ಯ ಕ್ರಮ ಉದ್ಘಾಟಿಸಿದ ಕಾ.ತ.ಚಿಕ್ಕಣ್ಣ ಮಾತನಾಡಿ, ಕನಕ ದಾಸರು ಸಮಾಜದಲ್ಲಿ ಎಲ್ಲವನ್ನು ತೊರೆದು ದಾಸನಾಗಿ 300ಕ್ಕೂ ಹೆಚ್ಚು ಕೀರ್ತನೆಗಳನ್ನು ರಚಿಸಿದಂತ ಮಹಾನ್ ದಾಸರು-ಕವಿಗಳ ಪರಂಪರೆ ಕೀರ್ತನೆ ಮತ್ತು ಅವರ ಚಿಂತ ನೆಯನ್ನು ಅರ್ಥಮಾಡಿಕೊಂಡು ಯುವ ಸಮೂಹ ತಮ್ಮಲ್ಲಿರುವ ಕಲ್ಮಶಗಳನ್ನು ತೊಳೆದು ಜ್ಞಾನದ ಕಡೆಗೆ ಗಮನ ಹರಿಸುವಂತಾಗಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಅಡ್ಡಂಡ ಸಿ.ಕಾರ್ಯಪ್ಪ ಮಾತನಾಡಿ, ಕೊಡಗಿನ ಮಹಾನ್ ಅಪ್ಪಚ್ಚಕವಿ ಸಂಸ್ಕøತವನ್ನೇ ಬಂಡ ವಾಳ ಮಾಡಿಕೊಂಡು 4ನೇ ತರಗತಿ ವ್ಯಾಸಂಗ ಮಾಡಿ ದರು. ಪರಂಪರೆಯ ಸಾಹಿತ್ಯವನ್ನು ಬರೆದಂತಹ ಕವಿ. ಕೊಡವ ಭಾಷೆಗೆ ಬರೆದಂತಹ ಶ್ರೀಮಂತ ಸಾಹಿತ್ಯಗಳು ಇತರ ಭಾಷೆಗಳಿಗೂ ಅನುವಾದವಾಗುತ್ತಿದೆ. ತಂಬೂರಿ ಹಿಡಿದ ಕನಕದಾಸರು 530 ವರ್ಷ, ಪುಸ್ತಕ ಹಿಡಿದ ಅಪ್ಪಚ್ಚಕವಿ 150 ವರ್ಷ ಇವರಿಬ್ಬರ ಗುರಿ ಪ್ರೀತಿ ವಿಶ್ವಾಸ ವನ್ನು ಗೆಲ್ಲಲು ನಡೆದವರು. ಅಪ್ಪಚ್ಚಕವಿ ಹಿರಿಯರಿಗೆ ಸದಾ ಗೌರವ ನೀಡುವಂತ ಮೃದು ಸ್ವಭಾವದವರಾಗಿದ್ದು, ಅವರ ವಿಚಾರಗಳನ್ನು ನಾವುಗಳು ಪಾಲಿಸಬೇಕಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶು ಪಾಲ ಡಾ.ಟಿ.ಕೆ.ಬೋಪಯ್ಯ ಮಾತನಾಡಿ, ಕನಕದಾಸರು ಸಮಾಜದಲ್ಲಿರುವಂತ ಅಸಮಾಧಾನವನ್ನು ಹೋಗಲಾಡಿಸಿ ಕೀರ್ತನೆಗಳನ್ನು ರಚಿಸಿದಂತ ಮಹಾನ್‍ದಾಸರು. ಹಾಗೂ ಅಪ್ಪಚ್ಚಕವಿ ಅವರು ಬರೆದಂತ ಸಾಹಿತ್ಯ ಎಂದೆಂದಿಗೂ ಮರೆ ಯಬಾರದು. ವಿದ್ಯಾರ್ಥಿಗಳು ಇದನ್ನು ಅರಿತುಕೊಂಡು ಇವರ ವಿಚಾರಗಳನ್ನು ಮೈಗೂಡಿಸಿಕೊಳ್ಳುವಂತಾಗಬೇಕು ಎಂದರು. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಿ.ಕೆ.ಉಷಾ ಅವರು ಕನಕದಾಸರು ಮತ್ತು ಅಪ್ಪಚ್ಚ ಕವಿ ಅವರ ಬಗ್ಗೆ ಮಾತನಾಡಿ ಸ್ವಾಗತಿಸಿದರು. ಉಪನ್ಯಾಸಕಿ ಗೀತನಾಯ್ಡು ನಿರೂಪಿಸಿದರು. ಬಳಿಕ ಹರದಾಸ ಅಪ್ಪಚ್ಚ ಕವಿಯ ಮೇಲೆ ದಾಸ ಸಾಹಿತ್ಯದ ಪ್ರಭಾವ ಎಂಬುದರ ಬಗ್ಗೆ ಮಡಿಕೇರಿಯ ಪ್ರೊ.ಸಿದ್ದರಾಜು ಬೆಲ್ಲಯ್ಯ ಮತ್ತು ಸಮಕಾ ಲೀನ ಸಂವೇದನೆಗಳು; ಕನಕ ದಾಸರು ಮತ್ತು ಅಪ್ಪಚ್ಚ ಕವಿ ಗೋಷ್ಠಿ ಕಾರ್ಯಕ್ರಮದಲ್ಲಿ ಮಡಿಕೇರಿಯ ಡಾ.ಎಂ.ಕೆ. ಮಾಧವ, ಮಡಿಕೇರಿಯ ನಾಗೇಶ್ ಕಾಲೂರು ಅವರಿಂದ ಕನಕದಾಸ ಮತ್ತು ಅಪ್ಪಚ್ಚಕವಿ ಕೃತಿಗಳಲ್ಲಿ ಜಾನಪ ದೀಯ ನೆಲೆಗಳು. ಗೋಣಿಕೊಪ್ಪಲಿನ ಡಾ.ಎಂ.ಪಿ.ರೇಖಾ ಅವರಿಂದ ಕನಕ ಮತ್ತು ಅಪ್ಪಚ್ಚಕವಿ ಕೃತಿಗಳ ತೌಲನಿಕ ನೋಟ; ಸಾಮಾಜಿಕ ಮತ್ತು ಪಾರಮಾರ್ಥಿಕ ಹಿನ್ನಲೆ ಯಲ್ಲಿ ಎಂಬುದರ ಬಗ್ಗೆ ಗೋಷ್ಠಿ ನಡೆಯಿತು.
ವಿಶೇಷ ಆಹ್ವಾನಿತರಾಗಿ ಅಮ್ಮಣಿಚಂಡ ಪ್ರವೀಣ್, ಸ್ಮಿತಾ ಅಮೃತರಾಜ್, ಚೇಂದೀರ ನಿರ್ಮಲಾ ಬೋಪಣ್ಣ, ಡಾ. ಕಾವೇರಿ ಪ್ರಕಾಶ್, ಕಿಗ್ಗಾಲು ಗಿರೀಶ್, ಡಾ.ಸುಭಾಷ್ ನಾಣಯ್ಯ, ಡಾ.ಡಿ.ಕೆ.ಸರಸ್ವತಿ ಮುಂತಾದವರು ಉಪಸ್ಥಿತರಿದ್ದರು. ನಂತರ ರಂಗಭೂಮಿ ಪ್ರತಿಷ್ಠಾನದ ವತಿಯಿಂದ ಕನಕ-ಅಪ್ಪಚ್ಚಕವಿ ಗಾನಯಾನ ಕಾರ್ಯಕ್ರಮದಲ್ಲಿ ಮದ್ರೀರ ಸಂಜುಬೆಳ್ಯಪ್ಪ, ಚೇಂದೀರ ನಿರ್ಮಲಾ ಬೋಪಣ್ಣ, ಅಂಗಿರ ಕುಸುಮ್ ಮಾದಪ್ಪ ಅವರುಗಳಿಂದ ಗಾಯನ ಕಾರ್ಯಕ್ರಮ ನಡೆಯಿತು.