ಮಡಿಕೇರಿ: ಸ್ವಚ್ಛ ಭಾರತ್ ಮಿಷನ್ ಅಭಿಯಾನದಡಿ ರಾಷ್ಟ್ರಮಟ್ಟದಲ್ಲಿ ನಡದ ಸ್ಪರ್ಧೆಯಲ್ಲಿ ಮೊದಲ 10 ಸ್ಥಾನಗಳಲ್ಲಿ ಕೊಡಗು ಜಿಲ್ಲೆ ಸ್ಥಾನಗಳಿಸಿ ಅಥಿತೇಯ ಸಾಧನೆ ತೋರಿದೆ.
ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಮಂತ್ರಾಲ ಯವು ರಾಷ್ಟ್ರ ವ್ಯಾಪಿ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶ ಗಳಲ್ಲಿ ಸ್ವಚ್ಚ ಭಾರತ್ ಮಿಷನ್‍ನಡಿಯಲ್ಲಿ ಕ್ರಿಯಾತ್ಮಕ ಹಾಗೂ ತೀವ್ರ ರೀತಿಯಲ್ಲಿ ಒಡಿಎಫ್ ಸುಸ್ಥಿರತೆ, ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ, ಎರಡು ಗುಂಡಿ ಶೌಚಾಲಯ ನಿರ್ಮಾಣ ಕುರಿತು ಮಾಹಿತಿ ಸಂವಹನ ಮತ್ತು ಶಿಕ್ಷಣ ಕಾರ್ಯಕ್ರಮ ಗಳನ್ನು ಜಿಲ್ಲೆಯ ಪ್ರತಿನಿಧಿಗಳು ಹಾಗೂ ವಿವಿಧ ಸ್ವಯಂ ಸಂಸ್ಥೆಗಳು, ಸ್ತ್ರೀ ಶಕ್ತಿ, ಸ್ವಸಹಾಯ ಮತ್ತು ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಜಾಗೃತಿ ಕಾರ್ಯಕ್ರಮವನ್ನು ಗ್ರಾಮದ ತಳಮಟ್ಟದ ಕುಟುಂಬ ಗಳಿಗೆ ತಲುಪಿಸುವಂತೆ ವಿವಿಧ ಚಟುವಟಿಕೆಗಳನ್ನು ನ.9 ರಿಂದ ನ.19 ರವೆರೆಗೆ ಆಯೋಜಿಸಲಾಗಿತ್ತು.
ಅದರಂತೆ ರಾಷ್ಟ್ರದ ಒಟ್ಟು 25 ರಾಜ್ಯಗಳು 412 ಜಿಲ್ಲೆಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸ್ಪರ್ಧೆಯಲ್ಲಿ ಭಾಗವಹಿ ಸಿದ್ದವು. ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಮಂತ್ರಾಲಯ ಪ್ರಶಸ್ತಿ ಪರಿಶೀಲನಾ ಸಮಿತಿಯು ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ರಾಜ್ಯ, ಜಿಲ್ಲೆ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಚಟುವಟಿಕೆಗಳನ್ನು ಪರಿಶೀಲಿಸಿ ಸ್ಪರ್ಧೆ ವಿಜೇತರನ್ನು ಆಯ್ಕೆ ಮಾಡಿದೆ. ಅದರಂತೆ ರಾಷ್ಟ್ರ ಮಟ್ಟದಲ್ಲಿ ಮೊದಲ 10 ಸ್ಥಾನಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಿ ಪ್ರಶಸ್ತಿ ನೀಡಿದ್ದು, ಆ ಮೊದಲ 10 ಸ್ಥಾನದಲ್ಲಿ ಕೊಡಗು ಜಿಲ್ಲೆ ಸ್ಥಾನ ಪಡೆದಿರುವುದು ವಿಶೇಷವಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಕೆ.ಲಕ್ಷ್ಮಿಪ್ರಿಯ ತಿಳಿಸಿದ್ದಾರೆ.
ಪಶ್ಚಿಮ ಬಂಗಾಳದ ಬಾಂಕುರ ಜಿಲ್ಲೆ, ಜಮ್ಮು ಮತ್ತು ಕಾಶ್ಮೀರದ ಗಂಡೆರ್‍ಬಾಲ್, ಉತ್ತರ ಪ್ರದೇಶದ ಗಾಜಿಯ ಬಾದ್, ಜಾರ್ಖಂಡ್ ರಾಜ್ಯದ ಹಜರಿಬಾದ್, ಬಿಹಾರ್ ರಾಜ್ಯದ ಜೇಹನಬಾದ್, ಒರಿಸ್ಸಾದ ಕಂಧಾಮಲ್, ಕರ್ನಾ ಟಕದ ಕೊಡಗು, ಝಾರ್ಖಂಡ್‍ನ ಲೊಹರ್‍ದಾಗ, ಪಶ್ಚಿಮ ಬಂಗಾಳದ ಮುರ್ಷಿದಾಬಾದ್, ತಮಿ ಳುನಾಡಿನ ಸೇಲಂ, ಮಹಾರಾಷ್ಟ್ರದ ಸಂಗಲಿ, ಮೇಘಾಲಯದ ನ್ಶೆರುತ್ಯ ಕಾಶಿ ಬೆಟ್ಟ ಇವುಗಳು ಪ್ರಶಸ್ತಿ ಪಡೆದ ಜಿಲ್ಲೆಗಳಾಗಿವೆ.