ಭಾಗಮಂಡಲದಲ್ಲಿ ಅತಿರುದ್ರ ಮಹಾಯಾಗಕ್ಕೆ ಸಿದ್ಧತೆ ಕಾವೇರಿಗೆ ನಮನ ಸಲ್ಲಿಸುವುದು ಭಕ್ತರ ಕರ್ತವ್ಯ
ಕೊಡಗು

ಭಾಗಮಂಡಲದಲ್ಲಿ ಅತಿರುದ್ರ ಮಹಾಯಾಗಕ್ಕೆ ಸಿದ್ಧತೆ ಕಾವೇರಿಗೆ ನಮನ ಸಲ್ಲಿಸುವುದು ಭಕ್ತರ ಕರ್ತವ್ಯ

January 4, 2019

ಮಡಿಕೇರಿ: ದೇಶದ ಎಲ್ಲಿಯೂ ಮಹಾನದಿಯನ್ನು ಕುಲದೇವತೆ ಎಂದು ಪೂಜಿಸದಿರುವಂತಹ ಸಂದರ್ಭ ಸಂಸ್ಕೃತಿಯನ್ನು ಹೊಂದಿರುವ ಕೊಡಗಿನ ಜನರು ಪ್ರಕೃತಿ ದೈವಿಯಾದ ಕಾವೇರಿಗೆ ಸೂಕ್ತ ನಮನಗಳನ್ನು ಹೋಮ ಯಾಗಾದಿಗಳ ಮೂಲಕ ಸಲ್ಲಿಸಬೇಕಾದ ಅನಿವಾರ್ಯತೆಯಿದೆ ಎಂದು ಹೆಸರಾಂತ ದೈವಜ್ಞ ವಿಷ್ಣು ಪ್ರಸಾದ್ ಹೆಬ್ಬಾರ್ ಅಭಿಪ್ರಾಯಪಟ್ಟಿದ್ದಾರೆ.

ನಗರದ ಗಾಂಧಿ ಮೈದಾನದ ಬಳಿಯಲ್ಲಿನ ಕಾಫಿ ಕೃಪಾ ಕಟ್ಟಡದಲ್ಲಿರುವ ನಮಾಮಿ ಕಾವೇರಿ ಮಾತೆ ಅತಿರುದ್ರ ಮಹಾಯಾಗ ಸಮಿತಿ ಕಛೇರಿಯಲ್ಲಿ ನಡೆದ ಯಾಗ ಸಂಬಂ ಧಿತ ಪೂರ್ವಭಾವಿ ಸಭೆಯಲ್ಲಿ ಮಾತನಾ ಡಿದ ವಿಷ್ಣುಪ್ರಸಾದ್ ಹೆಬ್ಬಾರ್, ಜೀವನದಿ ಯಾಗಿ ಕೊಡಗಿನಲ್ಲಿ ಉಗಮಿಸಿ ಹಲವಾರು ರಾಜ್ಯಗಳಿಗೆ ನೀರುಣಿಸಿ ಲೋಕಪಾವನಿ ಯಾಗಿರುವ ಕಾವೇರಿಗೆ ಗೊತ್ತಿದ್ದೋ ಗೊತ್ತಿ ಲ್ಲದೆಯೇ ಅನೇಕ ಅಪಚಾರಗಳನ್ನು ನಾವು ಮಾಡಿದ್ದೇವೆ. ಹೀಗಿರುವಾಗ ಪ್ರಕೃತಿ ಕೂಡ ಕೆಲವೊಂದು ಸಂದರ್ಭ ಮಾನವ ಕುಲಕ್ಕೆ ತೊಂದರೆ ನೀಡುತ್ತದೆ. ಇಂಥ ಸಂದರ್ಭ ಗಳಲ್ಲಿ ಪ್ರಕೃತಿ ದೇವಿಗೆ ಅಗತ್ಯವಾದ ಪೂಜೆ, ಹವನಾದಿಗಳನ್ನು ಕೈಗೊಳ್ಳಬೇಕಾಗುತ್ತದೆ. ಇಂಥವುಗಳ ಪೈಕಿ ಯಾಗಗಳಲ್ಲಿಯೇ ಶ್ರೇಷ್ಠ ವಾದ ಅತಿರುದ್ರ ಮಹಾಯಾಗವನ್ನು ನಮಾಮಿ ಕಾವೇರಿ ಮಾತೆ ಸಮಿತಿ ಕೈಗೊಂಡಿರುವುದು ಸಕಾಲಿಕವಾಗಿದೆ ಎಂದು ಅಭಿಪ್ರಾಯಪಟ್ಟರು.

ಫೆಬ್ರವರಿ 15 ರಿಂದ 23 ರವರೆಗೆ ಆಯೋ ಜಿಸಿರುವ ಅತಿರುದ್ರಮಹಾಯಾಗಕ್ಕೆ ಸಂಬಂ ಧಿಸಿದಂತೆ ಭಾಗಮಂಡಲದಲ್ಲಿನ ಮಂಡೀರ ಕುಟುಂಬಸ್ಥರ ವಿಶಾಲವಾದ ಜಾಗದಲ್ಲಿ ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ. ಯಾಗಕ್ಕೆ ಅಗತ್ಯವಿರುವ 200 ವೈದಿಕರಿಗೆ ತಗುಲುವ 50 ಲಕ್ಷ ರು.ವೆಚ್ಚಗಳನ್ನು ತಾನು ಭರಿಸು ವುದಾಗಿಯೂ ವಿಷ್ಣುಪ್ರಸಾದ್ ಹೆಬ್ಬಾರ್ ತಿಳಿಸಿದರು. ತಲಕಾವೇರಿ, ಭಗಂಡೇಶ್ವರÀ ಕ್ಷೇತ್ರಗಳು ಈಶ್ವರ, ಅಗಸ್ತ್ಯ, ಕಾವೇರಿ ಸೇರಿದ ಮೂರು ಶಕ್ತಿದೇವರುಗಳು ನೆಲೆಗೊಂಡಿ ರುವ ಶಕ್ತಿ ಕ್ಷೇತ್ರವಾಗಿದೆ. ಇಲ್ಲಿ ನಡೆಯಲಿ ರುವ ಅತಿರುದ್ರ ಮಹಾಯಾಗಕ್ಕೆ ನಿಸ್ವಾರ್ಥ ವಾಗಿ ಕೈ ಜೋಡಿಸಬೇಕೆಂದೂ ಹೆಬ್ಬಾರ್ ಕೊಡಗಿನ ಭಕ್ತಾಧಿಗಳಲ್ಲಿ ಮನವಿ ಮಾಡಿ ದರು. ಧರ್ಮಸ್ಥಳ ಶ್ರೀಕ್ಷೇತ್ರ ಧರ್ಮಾಧಿ ಕಾರಿ ಡಾ.ವೀರೇಂದ್ರ ಹೆಗ್ಗಡೆ ಮಾರ್ಗದ ರ್ಶನದಲ್ಲಿ ಈಗಾಗಲೇ 250 ಭಜನಾ ತಂಡ ಗಳು ಸಿದ್ಧವಾಗಿದ್ದು, ಉಳಿದ ವ್ಯವಸ್ಥೆಗಳು ಹಂತಹಂತವಾಗಿ ನಡೆಯಬೇಕಾಗಿದೆ ಎಂದೂ ವಿಷ್ಣುಪ್ರಸಾದ್ ಹೆಬ್ಬಾರ್ ತಿಳಿಸಿದರು.

ನಮಾಮಿ ಕಾವೇರಿ ಮಾತೆ ಸಮಿತಿಯ ಅಧ್ಯಕ್ಷ ಕೋಡಿ ಪೊನ್ನಪ್ಪ ಮಾತನಾಡಿ, ಕೊಡಗಿನ ಗ್ರಾಮೀಣ ಪ್ರದೇಶಗಳಲ್ಲಿ ಯಾಗದ ಬಗ್ಗೆ ಸೂಕ್ತ ತಿಳುವಳಿಕೆ ಉಂಟು ಮಾಡಿ ಭಕ್ತವೃಂದವನ್ನು ಯಾಗದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತಾಗಬೇಕೆಂದು ಸಲಹೆ ನೀಡಿದರು. ಯಾಗಕ್ಕಾಗಿ ಮಡಿ ಕೇರಿ ತಾಲೂಕಿನಿಂದ ಮನುಮುತ್ತಪ್ಪ, ರಾಬಿನ್ ದೇವಯ್ಯ, ಸೋಮವಾರಪೇಟೆ ತಾಲೂಕಿ ನಿಂದ ಬಿ.ಜೆ.ದೀಪಕ್, ತಾಕೇರಿ ಪೊನ್ನಪ್ಪ, ವಿರಾಜಪೇಟೆಯಿಂದ ಚಲನ್‍ಕುಮಾರ್ ಸಂಚಾಲಕತ್ವದಲ್ಲಿ ಸಮಿತಿ ರಚಿಸಲಾಗು ತ್ತಿದೆ ಎಂದು ಕೋಡಿ ಪೊನ್ನಪ್ಪ ಮಾಹಿತಿ ನೀಡಿದರು. ಭಾಗಮಂಡಲದಲ್ಲಿನ ಮಂಡೀರ ಕುಟುಂಬದವರಿಗೆ ಸೇರಿದ ಭತ್ತದ ಗದ್ದೆ ಯನ್ನು ಸಮತಟ್ಟುಗೊಳಿಸಿ ಹೊಸ ರೂಪು ನೀಡಲಾಗುತ್ತದೆ ಎಂದೂ ಅವರು ತಿಳಿಸಿದರು.

ಸಮಿತಿ ಕಾರ್ಯಾಧ್ಯಕ್ಷ ಎಂ.ಬಿ. ದೇವಯ್ಯ ಮಾತನಾಡಿ, ಪ್ರಕೃತಿಯೊಂದಿಗೆ ಬಾಳಿ ಬದುಕುತ್ತಿರುವ ಜನರ ರಕ್ಷಣೆಯೂ ಮುಖ್ಯವಾಗುತ್ತದೆ. ಹೀಗಾಗಿ ಇಂಥ ಯಾಗಾ ದಿಗಳಿಗೆ ಪ್ರಾಮುಖ್ಯತೆಯಿದೆ. ಕೊಡಗಿನ ಜನತೆ ಯಾಗದ ದಿನಗಳಲ್ಲಿ ಭಾಗಮಂಡ ಲಕ್ಕೆ ಬಂದು ದೇವರ ಕೃಪೆಗೆ ಪಾತ್ರರಾಗು ವಂತೆ ಮನವಿ ಮಾಡಿದರು. ಮುನಿಸಿ ಕೊಂಡಿರುವ ಶಿವನನ್ನು ಸಂತೃಪ್ತಿಗೊಳಿ ಸುವ ಕಾರ್ಯವೂ ಯಾಗಾದಿಗಳ ಮೂಲಕ ನಡೆಯುವಂತಾಗಬೇಕೆಂದು ದೇವಯ್ಯ ಹೇಳಿದರು.

ನಮಾಮಿ ಕಾವೇರಿ ಮಾತೆ ಸಮಿತಿ ಮಾರ್ಗದರ್ಶಕ ಮಂಡಳಿ ಸದಸ್ಯ ಚಕ್ಕೇರ ಮನು ಕಾವೇರಪ್ಪ ಮಾತನಾಡಿ, ತಾಯಿ ಕಾವೇರಿ ಮೂಲಕ ಕೊಡಗಿನ ಎಲ್ಲಾ ಜನತೆ ಒಂದಾಗುವುದರೊಂದಿಗೆ ಇಡೀ ಕೊಡ ಗಿಗೆ ಶಕ್ತಿ ತುಂಬ ಬೇಕಾಗಿದೆ. ಮಂಡಿರ ಕುಟುಂಬದ ಜಾಗದಲ್ಲಿ ಫೆ. 15 ರಿಂದ 23 ರವರೆಗೆ 9 ದಿನಗಳ ಕಾಲ ಯಾಗ ನಡೆಯಲಿದ್ದು, ಜಿಲ್ಲೆಯ ಜನತೆ ಸಕ್ರಿಯ ವಾಗಿ ಪಾಲ್ಗೊಳ್ಳುವ ಮೂಲಕ 9 ದಿನವೂ ಸ್ವಯಂಸೇವಕರಾಗಿ ಭಾಗವಹಿಸಬೇಕು ಎಂದು ಹೇಳಿದರು.

ಸಭೆಯಲ್ಲಿ ಮಾತನಾಡಿದ ಸಂಚಾಲಕ ವಸಂತ್ ಭಟ್ ತೊಡಿಕಾನ, ಈಗಾಗಲೇ ಮಂಡ್ಯ, ಮೈಸೂರು, ಚಾಮರಾಜನಗರದ ಕಾವೇರಿ ಭಕ್ತರು ಹೊರೆ ಕಾಣಿಕೆಗಳೊಂ ದಿಗೆ ಯಾಗಕ್ಕೆ ಬಂದು ಕಾವೇರಿ ಮಾತೆಯ ಋಣ ತೀರಿಸುವ ನಿಟ್ಟಿನಲ್ಲಿ ಮುಂದಾಗು ವುದಾಗಿ ಭರವಸೆ ನೀಡಿದ್ದಾರೆ. ಶ್ರೀರಂಗ ಪಟ್ಟಣದ ಪ್ರಸಿದ್ದ ದೈವಜ್ಞ ಭಾನುಪ್ರಕಾಶ್ ಶರ್ಮಾ ಕೂಡ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಹೇಳಿದ್ದಾರೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಪ್ರಮುಖರಾದ ರಾಬಿನ್ ದೇವಯ್ಯ, ಬಿ.ಬಿ.ಭಾರತೀಶ್, ರವಿಕುಶಾ ಲಪ್ಪ, ಟಿ.ಎಸ್.ನಾರಾಯಣಾಚಾರ್, ಎಂ.ಎಂ.ರವೀಂದ್ರ, ಚಂದ್ರಮೋಹನ್, ಅಪ್ಪಣ್ಣ, ಕೆ.ಕೆ.ದಿನೇಶ್, ಕಛೇರಿ ವ್ಯವಸ್ಥಾಪಕ ಉಡೋತ್ ಚಂದ್ರ, ಜಪ್ಪು ಅಚ್ಚಪ್ಪ, ಚಲನ್‍ಕುಮಾರ್, ರವಿಕಾಳಪ್ಪ, ಮನು ಮುತ್ತಪ್ಪ, ಜೀವನ್, ಉಮೇಶ್ ಹಾಗೂ ಇತರರು ಪಾಲ್ಗೊಂಡಿದ್ದರು.

Translate »