ನಿಯಂತ್ರಣ ತಪ್ಪಿ ಉರುಳಿಬಿದ್ದ ಕಾರು; ಠಾಣೆಗೆ ಒಯ್ಯುವ ವೇಳೆ ಸಾರಿಗೆ ಬಸ್ ಡಿಕ್ಕಿ
ಕೊಡಗು

ನಿಯಂತ್ರಣ ತಪ್ಪಿ ಉರುಳಿಬಿದ್ದ ಕಾರು; ಠಾಣೆಗೆ ಒಯ್ಯುವ ವೇಳೆ ಸಾರಿಗೆ ಬಸ್ ಡಿಕ್ಕಿ

January 4, 2019

ಸುಂಟಿಕೊಪ್ಪ: ಚಾಲಕನ ನಿಯಂತ್ರಣ ತಪ್ಪಿ ಕಾಫಿ ತೋಟಕ್ಕೆ ನುಗ್ಗಿದ ಕಾರನ್ನು ಕ್ರೇನ್ ಮೂಲಕ ಸ್ಥಳಾಂತರಿಸುವ ಸಂದರ್ಭ ಕೆಎಸ್‍ಆರ್‍ಟಿಸಿ ಬಸ್‍ಗೆ ಡಿಕ್ಕಿಯಾದ ಘಟನೆ ವರದಿಯಾಗಿದೆ.

ಮಂಗಳೂರಿನಿಂದ ಮೈಸೂರು ಕಡೆಗೆ ತೆರಳುತ್ತಿದ್ದ ಕಾರು (ಕೆ.ಎ.47. ಎಂ.6446) ಜ.3 ರಂದು ರಾತ್ರಿ 11.30ರ ಸಮಯದಲ್ಲಿ ಶಾಂತಗಿರಿ ಸಮೀಪವಿರುವ ಕೂರ್ಗಳ್ಳಿ ತೋಟದೊಳಗೆ ಚಾಲಕನ ನಿಯಂ ತ್ರಣ ತಪ್ಪಿ ನುಗ್ಗಿದೆ. ಇದರಿಂದ ಕಾರು ಚಾಲಕ ತೀವ್ರವಾಗಿ ಗಾಯ ಗೊಂಡಿದ್ದು, ಮಂಗಳೂರು ಆಸ್ಪತ್ರೆಗೆ ಸಾಗಿಸಲಾಗಿದೆ. ಕಾರಿನಲ್ಲಿದ್ದ ಇನ್ನುಳಿದವರು ಸಣ್ಣಪುಟ್ಟ ಗಾಯಕ್ಕೊಳಗಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸುಂಟಿಕೊಪ್ಪ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಕಾರನ್ನು ಠಾಣೆಗೆ ಸ್ಥಳಾಂತರಿಸುವ ಸಂದರ್ಭ ಕ್ರೇನ್ ಮೂಲಕ ಹೊರಕ್ಕೆ ತಂದು ಹೆದ್ದಾರಿ ಮೂಲಕ ಸುಂಟಿಕೊಪ್ಪ ಠಾಣೆಗೆ ತರಲಾಗುತ್ತಿತ್ತು. ಈ ವೇಳೆ ಕಾರಿನ ಮುಂಭಾಗಕ್ಕೆ ಕಟ್ಟಿದ್ದ ಬೆಲ್ಟ್ ಕಳಚಿಕೊಂಡಿದೆ.

ಇದರಿಂದ ಕ್ರೇನ್‍ನ ಮುಂಭಾಗದಲ್ಲಿ ಕಾರು ರಸ್ತೆಯ ಬಲಭಾಗಕ್ಕೆ ತಿರುಗಿದೆ. ಇದೇ ಸಂದರ್ಭದಲ್ಲಿ ಸುಂಟಿಕೊಪ್ಪದಿಂದ ಮಲ್ಲಪುರಂಗೆ ತೆರಳುತ್ತಿದ್ದ ಕೆಎಸ್‍ಆರ್‍ಟಿಸಿ ಬಸ್‍ನ ಬಲಭಾಗಕ್ಕೆ ತಿರುಗಿದೆ. ಇದರಿಂದ ಸ್ಥಳಾಂತರಿಸುತ್ತಿದ್ದ ಕಾರಿಗೆ ಸಾರಿಗೆ ಬಸ್ ಡಿಕ್ಕಿ ಹೊಡಿದಿದೆ. ಅದೃಷ್ಟವಶಾತ್ ಯಾವ ಅಪಾಯವೂ ಸಂಭವಿಸಿಲ್ಲ.

Translate »