ಪ್ರತ್ಯೇಕ ಕಳವು ಪ್ರಕರಣ: ಆರೋಪಿಗಳು ಪೊಲೀಸರ ವಶಕ್ಕೆ
ಮೈಸೂರು

ಪ್ರತ್ಯೇಕ ಕಳವು ಪ್ರಕರಣ: ಆರೋಪಿಗಳು ಪೊಲೀಸರ ವಶಕ್ಕೆ

January 4, 2019

ಮೈಸೂರು: ಎರಡು ಪ್ರತ್ಯೇಕ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಮೈಸೂರಿನ ದೇವರಾಜ ಠಾಣೆ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಸಯ್ಯಾಜಿರಾವ್ ರಸ್ತೆಯಲ್ಲಿ ವ್ಯಕ್ತಿಯೊಬ್ಬರ ಪರ್ಸ್ ಕಳ್ಳತನ ಹಾಗೂ ಖಾಸಗಿ ಹೋಟೆಲ್‍ನಲ್ಲಿ ಗ್ರಾಹಕರೊಬ್ಬರ ಹಣ ಕಳವು ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರು, ಆರೋಪಿಗಳನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿ ದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.

ಸಯ್ಯಾಜಿರಾವ್ ರಸ್ತೆಯಲ್ಲಿ ಇಂದ್ರ ಕೆಫೆ ಹೋಟೆಲ್ ಬಳಿ ಗುರುವಾರ ಬೆಳಿಗ್ಗೆ ಅನುದೀಪ್ ಎಂಬುವರು ಕಾರು ನಿಲ್ಲಿಸಿ, ಕೆಳಗಿಳಿಯುವ ಸಂದರ್ಭದಲ್ಲಿ ಹೋಂಡಾ ಆಕ್ಟೀವಾ ಸ್ಕೂಟರ್‍ನಲ್ಲಿ ಬಂದ ಖದೀಮನೋರ್ವ ಪರ್ಸ್ ಕಿತ್ತುಕೊಂಡು ಪರಾರಿಯಾಗಿದ್ದನು. ಸ್ಕೂಟರ್‍ನ ನಂಬರ್ ಬರೆದುಕೊಂಡಿದ್ದ ಅನುದೀಪ್, ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದರು.

ಹಾಗೆಯೇ ಖಾಸಗಿ ಹೋಟೆಲ್‍ನಲ್ಲಿ ಉಳಿದು ಕೊಂಡಿದ್ದ ಮುಂಬೈ ಮೂಲದ ಕೀರ್ತಿಶೇತ್ ಎಂಬು ವರು ಹಣ ಕಳುವಾಗಿರುವುದಾಗಿ ದೂರಿದ್ದರು. ಕಳೆದ ಡಿಸೆಂಬರ್ 13ರಂದು ಮಧ್ಯಾಹ್ನ ಹೋಟೆಲ್‍ನಲ್ಲಿ ರೂಂ ಪಡೆದು, ತಂಗಿದ್ದರು. ಡಿ.15ರಂದು ರೂಂ ಖಾಲಿ ಮಾಡಲು ಬಿಲ್ ಪಾವತಿಸಿದ ಬಳಿಕ ತಮ್ಮ ಬ್ಯಾಗನ್ನು ಪರಿಶೀಲಿಸಿದ್ದರು. ಆಗ 100ರೂ.ನ 3 ಬಂಡಲ್, 50 ರೂ.ನ 1 ಬಂಡಲ್ ಹಾಗೂ 2 ಸಾವಿರ ರೂ.ನ ಬಂಡಲ್‍ನಲ್ಲಿ ತಲಾ 20ರಿಂದ 25 ನೋಟುಗಳು ಕಳುವಾಗಿವೆ. ಹೋಟೆಲ್‍ನ ಯಾರೋ ಸಿಬ್ಬಂದಿ ಕಳವು ಮಾಡಿರುವುದಾಗಿ ಅನುಮಾನ ವ್ಯಕ್ತಪಡಿಸಿದ್ದರು. ಅಂದು ರೈಲಿಗೆ ಹೋಗಲು ಸಮಯವಾಗಿದ್ದರಿಂದ ಎಂದು ಹೋಟೆಲ್‍ನ ರಿಸೆಪ್ಷನಿಸ್ಟ್‍ಗೆ ಈ ಬಗ್ಗೆ ದೂರು ನೀಡಿ, ತೆರಳಿದ್ದರು. ಈ ಸಂಬಂಧ ಹೋಟೆಲ್‍ನ ಸೇಲ್ಸ್ ಅಂಡ್ ಮಾರ್ಕಟಿಂಗ್ ವಿಭಾಗದ ಶಿವಕುಮಾರ್ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.

Translate »