87 ತಹಶೀಲ್ದಾರ್ ವರ್ಗಾವಣೆ, 103   ಪರೀಕ್ಷಾರ್ಥ ತಹಶೀಲ್ದಾರ್‍ಗಳ ಸ್ಥಳ ನಿಯುಕ್ತಿ
ಮೈಸೂರು

87 ತಹಶೀಲ್ದಾರ್ ವರ್ಗಾವಣೆ, 103 ಪರೀಕ್ಷಾರ್ಥ ತಹಶೀಲ್ದಾರ್‍ಗಳ ಸ್ಥಳ ನಿಯುಕ್ತಿ

January 4, 2019

ಮೈಸೂರು: ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ತಹಶೀಲ್ದಾರ್‍ಗಳ ವರ್ಗಾವರ್ಗಿಯ ಜೊತೆಗೆ ಪರೀಕ್ಷಾರ್ಥ ತಹಶೀಲ್ದಾರ್‍ಗಳಿಗೆ ಸ್ಥಳ ನಿಯುಕ್ತಿಗೊಳಿಸಿ, ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಮೈಸೂರು ಜಿಲ್ಲಾಧಿಕಾರಿಗಳ ಕಚೇರಿ ಶಿಷ್ಟಾಚಾರ ತಹಶೀಲ್ದಾರ್ ಎಸ್.ಎನ್.ನರಗುಂದ ಹುಣಸೂರು ತಾಲೂಕಿಗೆ ವರ್ಗಾವಣೆ ಯಾಗಿದ್ದು, ಅವರ ಸ್ಥಳಕ್ಕೆ ಹುಣಸೂರು ತಹಶೀಲ್ದಾರ್ ಮೋಹನ್ ಕುಮಾರ್ ಅವರನ್ನು ನಿಯುಕ್ತಿಗೊಳಿಸಲಾಗಿದೆ. ಮೈಸೂರು ತಾಲೂಕಿನ ಹೆಚ್ಚುವರಿ ತಹಶೀಲ್ದಾರ್ ಹೆಚ್.ಆರ್.ಚಂದ್ರ ಕುಮಾರ್ ಮೈಸೂರು ನಗರಪಾಲಿಕೆ ತಹಶೀಲ್ದಾರ್ ಸ್ಥಾನಕ್ಕೆ, ತಿ.ನರಸೀಪುರ ತಹಶೀಲ್ದಾರ್ ಪರಮೇಶ್ ಜಿಲ್ಲಾಧಿಕಾರಿಗಳ ಕಚೇರಿ ಚುನಾವಣಾ ತಹಶೀಲ್ದಾರ್ ಸ್ಥಾನಕ್ಕೆ, ಪಿರಿಯಾಪಟ್ಟಣ ತಹಶೀಲ್ದಾರ್ ಜೆ.ಮಹೇಶ್ ಕೊಡಗು ಜಿಲ್ಲೆ ಕುಶಾಲನಗರ ತಾಲೂಕು ವಿಶೇಷ ತಹಶೀಲ್ದಾರ್ ಸ್ಥಾನಕ್ಕೆ ವರ್ಗಾವಣೆಗೊಂಡಿದ್ದಾರೆ.

ಹಾಸನ ತಾಲೂಕಿನ ತಹಶೀಲ್ದಾರ್ ಆರ್.ಬಿ.ಶಿವಶಂಕರಪ್ಪ ಹಾಸನ ಜಿಲ್ಲಾಧಿಕಾರಿಗಳ ಕಚೇರಿ ಪುರಸಭೆ ತಹಶೀಲ್ದಾರ್, ಚನ್ನರಾಯಪಟ್ಟಣ ತಹಶೀಲ್ದಾರ್ ಸೋಮಶೇಖರ್ ಹಾಸನ ಜಿಲ್ಲಾಧಿಕಾರಿ ಕಚೇರಿ ಚುನಾವಣಾ ತಹಶೀಲ್ದಾರ್, ಹೊಳೆನರಸೀ ಪುರದ ತಹಶೀಲ್ದಾರ್ ವೈ.ಎಂ.ರೇಣುಕುಮಾರ್ ಚಿಕ್ಕಮಗಳೂರು ತರೀಕೆರೆ ತಾಲೂಕು ತಹಶೀಲ್ದಾರ್, ಮಂಡ್ಯ ಜಿಲ್ಲೆ ನಾಗಮಂಗಲ ತಹಶೀಲ್ದಾರ್ ಎಂ.ನಂಜುಂಡಯ್ಯ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಹಶೀಲ್ದಾರ್ ಆಗಿ, ಹಾಸನ ಜಿಲ್ಲೆ ಆಲೂರು ತಹಶೀಲ್ದಾರ್ ಶಾರದಮ್ಮ ಹಾಸನ ಜಿಲ್ಲಾಧಿಕಾರಿಗಳ ಕಚೇರಿ ಮುಜರಾಯಿ ತಹಶೀಲ್ದಾರ್, ಸ್ಥಳ ನಿರೀಕ್ಷಣೆಯಲ್ಲಿದ್ದ ಜೆ.ಮಹೇಶ್ ಚಾಮರಾಜನಗರ ಜಿಲ್ಲೆ ಯಳಂದೂರು ತಾಲೂಕು ತಹಶೀಲ್ದಾರ್ ಗ್ರೇಡ್-2, ಮಂಡ್ಯ ಮುಜರಾಯಿ ತಹಶೀಲ್ದಾರ್ ಕೆ.ಕೃಷ್ಣ ಅವರು ಜಿಲ್ಲಾಧಿಕಾರಿಗಳ ಕಚೇರಿ ಸಹಾಯಕ ಸ್ಥಾನಕ್ಕೆ ವರ್ಗಾವಣೆಯಾಗಿದ್ದಾರೆ.

ಹೀಗೆಯೇ ಪರೀಕ್ಷಾರ್ಥ ತಹಶೀಲ್ದಾರ್ ಗಳನ್ನು ಕರ್ತವ್ಯ ಸ್ಥಳವನ್ನು ನಿಯುಕ್ತಿಗೊಳಿಸಲಾಗಿದ್ದು, ಕೆ.ಎಂ. ಮಹೇಶ್‍ಕುಮಾರ್ ಮೈಸೂರು ತಾಲೂಕು ಹೆಚ್ಚುವರಿ ತಹಶೀಲ್ದಾರ್(ಗ್ರೇಡ್-1), ವರ್ಷ ಮೈಸೂರು ಉಪವಿಭಾಗಾಧಿ ಕಾರಿ ಕಚೇರಿಗೆ, ಎಂ.ಮಂಜುಳಾ ಕೆ.ಆರ್.ನಗರ ತಾಲೂಕಿಗೆ, ಎನ್.ಶ್ವೇತಾ ಪಿರಿಯಾಪಟ್ಟಣಕ್ಕೆ, ಎಂ.ಕೆ.ನಿಶ್ಚಯ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ, ಪಿ.ಎನ್.ನಾಗಪ್ರಶಾಂತ ತಿ.ನರಸೀ ಪುರಕ್ಕೆ, ಎಂ.ಶ್ರೀನಿವಾಸಯ್ಯ ಹಾಸನ ತಾಲೂಕಿಗೆ, ಜೆ.ಬಿ.ಮಾರುತಿ ಚನ್ನರಾಯಪಟ್ಟಣಕ್ಕೆ, ಕೆ.ಆರ್.ಶ್ರೀನಿವಾಸ ಹೊಳೆನರಸೀಪುರಕ್ಕೆ, ಜಿ.ಮೇಘನಾ ಬೇಲೂರಿಗೆ, ಟಿ.ಎಸ್.ಶಿವರಾಜು ಅರಕಲಗೂಡಿಗೆ, ಎಂ.ಶಿವಮೂರ್ತಿ ಮಂಡ್ಯದ ಕೆ.ಆರ್.ಪೇಟೆಗೆ, ಎಂ.ವಿ.ರೂಪಾ ನಾಗಮಂಗಲಕ್ಕೆ, ಐ.ಇ.ಬಸವರಾಜ ಪಾಂಡವಪುರಕ್ಕೆ, ವಿ.ಗೀತಾ ಮದ್ದೂರಿಗೆ, ಕುನಾಲ್ ಚಾಮರಾಜನಗರದ ಕೊಳ್ಳೆಗಾಲಕ್ಕೆ, ಬಿ.ಎಂ.ಗೋವಿಂದರಾಜು ವಿರಾಜಪೇಟೆ ತಹಶೀಲ್ದಾರ್ ಹುದ್ದೆಗೆ ನಿಯುಕ್ತಿಗೊಳಿಸಲಾಗಿದೆ.
ಇವರನ್ನೊಳಗೊಂಡಂತೆ ರಾಜ್ಯದಲ್ಲಿ ಒಟ್ಟು 87 ತಹಶೀಲ್ದಾರ್ ಗಳ ವರ್ಗಾವಣೆ ಹಾಗೂ 103 ಪರೀಕ್ಷಾರ್ಥ ತಹಶೀಲ್ದಾರ್‍ಗಳಿಗೆ ಸ್ಥಳ ನಿಯುಕ್ತಿಗೊಳಿಸಲಾಗಿದೆ.

Translate »