ಪೌರಕಾರ್ಮಿಕರ ನೇಮಕಾತಿಯಲ್ಲಿ ಅನ್ಯಾಯ: ಆರೋಪ ಡಿಸಿ ಕಚೇರಿ, ನಗರಸಭೆ ಮುಂದೆ ಪೌರಕಾರ್ಮಿಕರ ಪ್ರತಿಭಟನೆ
ಹಾಸನ

ಪೌರಕಾರ್ಮಿಕರ ನೇಮಕಾತಿಯಲ್ಲಿ ಅನ್ಯಾಯ: ಆರೋಪ ಡಿಸಿ ಕಚೇರಿ, ನಗರಸಭೆ ಮುಂದೆ ಪೌರಕಾರ್ಮಿಕರ ಪ್ರತಿಭಟನೆ

November 23, 2018

ಹಾಸನ:  20 ವರ್ಷಕ್ಕಿಂತ ಹೆಚ್ಚು ಕೆಲಸ ಮಾಡಿದವ ರನ್ನು ಕಡೆಗಣಿಸುವ ಮೂಲಕ ಅರ್ಹತೆ ಇರುವ ಹಿರಿಯ ಪೌರಕಾರ್ಮಿಕರಿಗೆ ಅನ್ಯಾಯ ಎಸಗಲಾಗಿದೆ ಎಂದು ಪೌರಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದಿಂದ ಕಾರ್ಮಿಕರು ಜಿಲ್ಲಾಧಿಕಾರಿ ಕಚೇರಿ ಮತ್ತು ನಗರಸಭೆ ಮುಂದೆ ಪ್ರತಿಭಟನೆ ನಡೆಸಿದರು.

ನಗರಸಭೆಯಲ್ಲಿ ಖಾಲಿ ಇರುವ ಪೌರ ಕಾರ್ಮಿಕ ಹುದ್ದೆಗಳ ನೇಮಕಾತಿ ಸಂಬಂಧ 27 ಜನರ ತಾತ್ಕಾಲಿಕ ಆಯ್ಕೆ ಪಟ್ಟಿ ಬಿಡು ಗಡೆಯಾಗಿದ್ದು, 20 ವರ್ಷಕ್ಕಿಂತ ಹೆಚ್ಚು ಕೆಲಸ ಮಾಡಿದವರನ್ನು ಕಡೆಗಣಿಸಿ ಹಿರಿ ಯರನ್ನು ಕೈ ಬಿಡುವ ಮೂಲಕ ಅನ್ಯಾಯ ಎಸಗಲಾಗಿದ್ದು, ಪಟ್ಟಿಯನ್ನು ಪುನರ್ ಪರಿಶೀಲಿಸಿ ಆರ್ಹರಿಗೆ ಮಾತ್ರ ಅವಕಾಶ ಮಾಡಿಕೊಡಬೇಕೆಂದು ಒತ್ತಾಯಿಸಿದರು. ನಗರಸಭೆಯಲ್ಲಿ ಖಾಲಿ ಇರುವ ನೇರ ನೇಮಕಾತಿ, ಪೌರಕಾರ್ಮಿಕ ಹುದ್ದೆಗಳನ್ನು ಕ್ಷೇಮಾಭಿವೃದ್ಧಿ, ದಿನಗೂಲಿ, ಗುತ್ತಿಗೆ, ಹೊರಗುತ್ತಿಗೆ ಹಾಗೂ ಸಮಾನ ಕೆಲಸಕ್ಕೆ ಸಮಾನ ವೇತನ ಇತ್ಯಾದಿ ಆಧಾರದ ಮೇಲೆ ನೇಮಕಾತಿ ಮಾಡುವ ವಿಚಾರವಾಗಿ 2018 ಅಕ್ಟೋಬರ್ 9 ರಂದು ನಡೆದ ಜಿಲ್ಲಾ ಮಟ್ಟದ ಆಯ್ಕೆ ಸಮಿತಿಯ ತೀರ್ಮಾನದಂತೆ ಒಟ್ಟು 27 ಮಂದಿಯ ಆಯ್ಕೆ ಮಾಡ ಲಾಗಿದೆ ಎಂದರು. ಆಯ್ಕೆಯಲ್ಲಿ 20 ವರ್ಷಕ್ಕೂ ಹೆಚ್ಚು ಕೆಲಸ ಮಾಡಿದವ ರನ್ನು ಕಡೆಗಣಿಸಲಾಗಿದ್ದು, ಕೇವಲ 2 ವರ್ಷ, 5 ವರ್ಷ ಕೆಲಸ ಮಾಡಿದವರಿಗೆ ಅವಕಾಶ ಮಾಡಿಕೊಡುವ ಮೂಲಕ ಆಯ್ಕೆಯಲ್ಲಿ ಲೋಪ ಎಸಗಲಾಗಿದೆ ಎಂದು ಖಂಡಿಸಿದರು.

ಕಳೆದ 20 ವರ್ಷಕ್ಕಿಂತ ಹೆಚ್ಚು ಕಾಲ ಕೆಲಸ ಮಾಡಿದವರನ್ನು ಮೊದಲು ಪರಿ ಗಣಿಸಿ ಅರ್ಹತೆ ಆಧಾರದ ಮೇಲೆ ಆಯ್ಕೆ ಮಾಡಬೇಕೆಂದು ಆಗ್ರಹಿಸಿದರು. ಇವರಲ್ಲಿ ಕೆಲವರು ಹೆಚ್ಚು ವಯಸ್ಸಿನವರಾಗಿದ್ದು, ಸುಳ್ಳು ಪ್ರಮಾಣ ಪತ್ರ ನೀಡಿ ಕಡಿಮೆ ವಯಸ್ಸು ಬರೆಸಿದ್ದಾರೆ. ಇನ್ನೂ ಕೆಲವರು ಕಡಿಮೆ ವಯಸ್ಸಿನವರು ಹೆಚ್ಚು ವಯಸ್ಸು ನೀಡಿದ್ದಾರೆ. ಪಟ್ಟಿಯಲ್ಲಿ ಅರ್ಹತೆ ಇರುವ ಕೆಲವೇ ಕೆಲವು ಜನರು ಮಾತ್ರ ಇದ್ದು, ನಿಜವಾಗಿಯೂ ಕೆಲಸ ಮಾಡಿದ ಹಿರಿಯ ಪೌರಕಾರ್ಮಿಕರನ್ನು ಕೈ ಬಿಟ್ಟು ಅನ್ಯಾಯ ಎಸಗಲಾಗಿದೆ. ಕೂಡಲೇ ಈ ಪಟ್ಟಿಯನ್ನು ಕೈಬಿಟ್ಟು ಹೊಸ ಪಟ್ಟಿಯನ್ನು ಬಿಡುಗಡೆ ಮಾಡಿ ಇಲ್ಲವೇ ಹಲವು ವರ್ಷ ದುಡಿದ ನಮಗೆ ಮೋಸ ಆಗದ್ದು, ಸರಿಪಡಿಸ ದಿದ್ದರೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಸಿದರು.

ಬೇಲೂರು ಪುರಸಭೆ ಅಧಿಕಾರಿಗಳ ಮೇಲೆ ಕ್ರಮಕ್ಕೆ ಆಗ್ರಹ: ಬೇಲೂರು ತಾಲೂಕು ನೆಹರು ಬಡಾವಣೆಯ ಈಶ್ವರ ದೇವಸ್ಥಾನ ಸಮೀಪ ಇರುವ ಮ್ಯಾನ್‍ಹೋಲ್‍ನಲ್ಲಿ ಉಮೇಶ್ ಎಂಬ ಪೌರಕಾರ್ಮಿಕನನ್ನು ಇಳಿಸಿ ಬರಿಗೈಯಲ್ಲಿ ಮಲ ಎತ್ತಿಸಿರುವುದು ತಿಳಿದಿದೆ. ಈ ಸಂದರ್ಭ ಪುರಸಭೆಯ ಆರೋಗ್ಯಾಧಿಕಾರಿ ಕೂಡ ಅಲ್ಲಿ ಇದ್ದ ರೆಂದು ಪ್ರಕಟವಾಗಿದೆ. ರಾಜ್ಯದ ವಿವಿದೆಡೆ ಮ್ಯಾನ್‍ಹೋಲ್‍ನಲ್ಲಿ ಇಳಿದು ಪೌರ ಕಾರ್ಮಿಕರು ಮೃತಪಟ್ಟಿರುವ ಘಟನೆಗಳು ಬಹಿರಂಗವಾಗಿರುವ ವಿಷಯ. ಸುಪ್ರೀಂ ಕೋರ್ಟ್ ಪೌರಕಾರ್ಮಿಕರು ಮಲ ಹೊರುವ ಅಥವಾ ಎತ್ತುವ ಹಾಗೂ ಮ್ಯಾನ್ ಹೋಲ್‍ಗೆ ಇಳಿದು ಕೆಲಸ ಮಾಡುವು ದನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಹೀಗಿದ್ದರೂ ಇಲ್ಲಿ ಇಳಿಸಿರುವುದು ಕಾನೂನಿಗೆ ವಿರುದ್ಧವಾಗಿದ್ದು, ಅಧಿಕಾರಿಗಳು ಅಮಾನ ವೀಯತೆ ಮೆರೆದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸುಪ್ರೀಂಕೋರ್ಟ್ ಮತ್ತು ರಾಜ್ಯ ಸರ್ಕಾರದ ಆದೇಶದ ಸ್ಪಷ್ಟ ಉಲ್ಲಂ ಘನೆಯಾಗಿರುವುದು ಕಂಡು ಬರುತ್ತದೆ ಎಂದರು. ಘಟನೆಗೆ ಕಾರಣರಾದವರನ್ನು ಕೂಡಲೇ ಅಮಾನತು ಮಾಡಬೇಕು ಈ ಬಗ್ಗೆ ತನಿಖೆ ನಡೆಸಿ ಸೂಕ್ತ ಪರಿಹಾರ ಕಲ್ಪಿಸಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಪೌರಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಸಂಘಟನಾ ಕಾರ್ಯ ದರ್ಶಿ ಮಾರ, ಖಜಾಂಚಿ ಮುನಿಯಪ್ಪ, ಗೌರವ ಸಲಹೆಗಾರ ವಿಮಲ್ ಕುಮಾರ್, ನಿರ್ದೇಶಕ ಶಿವಪ್ಪ, ಶಿವಸ್ವಾಮಿ, ದೇವರಾಜು ಇತರರು ಇದ್ದರು.

Translate »