ಪೌರಕಾರ್ಮಿಕನನ್ನು ಮ್ಯಾನ್‍ಹೋಲ್‍ಗೆ ಇಳಿಸಿ ಸ್ವಚ್ಛತೆ: ಬೇಲೂರು ಪುರಸಭಾ ಅಧಿಕಾರಿಗಳ ವಿರುದ್ಧ ಸಾರ್ವಜನಿಕರ ಆಕ್ರೋಶ
ಹಾಸನ

ಪೌರಕಾರ್ಮಿಕನನ್ನು ಮ್ಯಾನ್‍ಹೋಲ್‍ಗೆ ಇಳಿಸಿ ಸ್ವಚ್ಛತೆ: ಬೇಲೂರು ಪುರಸಭಾ ಅಧಿಕಾರಿಗಳ ವಿರುದ್ಧ ಸಾರ್ವಜನಿಕರ ಆಕ್ರೋಶ

November 23, 2018

ಬೇಲೂರು: ಸುಪ್ರೀಂ ಕೋರ್ಟ್ ಮತ್ತು ರಾಜ್ಯ ಸರ್ಕಾರದ ಆದೇಶವನ್ನು ಉಲ್ಲಂಘಿಸಿ ಪೌರಕಾರ್ಮಿಕರನ್ನು ಮ್ಯಾನ್ ಹೋಲ್‍ಗೆ ಇಳಿಸಿ ಸ್ವಚ್ಛತೆ ಮಾಡಿರುವ ಪ್ರಕರಣ ಇಲ್ಲಿನ ಪುರಸಭೆಯಲ್ಲಿ ನಡೆದಿದೆ.

ಪುರಸಭೆ ಮುಖ್ಯಾಧಿಕಾರಿ ಎಸ್.ಎಸ್. ಮಂಜುನಾಥ್ ಅವರ ಸೂಚನೆಯ ಮೇರೆಗೆ ಆರೋಗ್ಯಾಧಿಕಾರಿ ಎಸ್.ವೆಂಕಟೇಶ್ ಪೌರ ಕಾರ್ಮಿಕರನ್ನು ಮ್ಯಾನ್‍ಹೋಲ್‍ಗೆ ಇಳಿಸಿ ಸ್ವಚ್ಛಗೊಳಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಪಟ್ಟಣದ ನೆಹರು ನಗರ ಬಡಾವಣೆಯ ಈಶ್ವರ ದೇವ ಸ್ಥಾನದ ಸಮೀಪವಿರುವ ಮ್ಯಾನ್ ಹೋಲ್‍ನಲ್ಲಿ ಪೌರರ್ಕಾಮಿಕರನ್ನು ಇಳಿಸಿ ಸ್ವಚ್ಛಗೊಳಿಸಲಾಗಿದೆ. ಮ್ಯಾನ್ ಹೋಲ್ ಸ್ವಚ್ಛಗೊಳಿಸುವಾಗ ಪೌರ ಕಾರ್ಮಿಕ ಯಾವುದೇ ರೀತಿಯ ಸ್ವಚ್ಛತಾ ಪರಿಕರಗಳನ್ನು ತೊಟ್ಟಿಲ್ಲ.

ಪೌರಕಾರ್ಮಿಕ ನನ್ನು ಮ್ಯಾನ್‍ಹೋಲ್‍ಗೆ ಇಳಿಸಿದ ಸಂದ ರ್ಭದಲ್ಲಿ ಪುರಸಭೆಯ ಆರೋಗ್ಯಾಧಿ ಕಾರಿ ಎಸ್.ವೆಂಕಟೇಶ್ ಮೇಲೆ ನಿಂತು ನೋಡುತ್ತಿದ್ದು, ಮುಖ್ಯಾಧಿಕಾರಿ ಎಸ್.ಎಸ್. ಮಂಜುನಾಥ್ ಅವರ ಸೂಚನೆಯ ಮೇರೆಗೆ ಖುದ್ದು ಆರೋಗ್ಯಾಧಿಕಾರಿ ಎಸ್.ವೆಂಕ ಟೇಶ್ ಪೌರಕಾರ್ಮಿಕನನ್ನು ಮ್ಯಾನ್ ಹೋಲ್‍ಗೆ ಇಳಿಸಿ ಸ್ವಚ್ಛತೆ ಮಾಡಿಸಿದ್ದಾರೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದ ವಿವಿದೆಡೆ ಪೌರಕಾರ್ಮಿಕ ರನ್ನು ಮ್ಯಾನ್‍ಹೋಲ್‍ಗೆ ಇಳಿಸಿದ ಸಂದ ರ್ಭದಲ್ಲಿ ಸಾವು ನೋವುಗಳು ಸಂಭವಿ ಸಿದ ಘಟನೆಗಳು ಹಲವು ನಡೆದಿದ್ದರೂ ಅದನ್ನು ಗಣನೆÀಗೆ ತೆಗೆದುಕೊಳ್ಳದ ಬೇಲೂರು ಪುರಸಭೆಯ ಅಧಿಕಾರಿಗಳು ಪೌರ ಕಾರ್ಮಿಕರನ್ನು ಮ್ಯಾನ್‍ಹೊಲ್‍ಗೆ ಇಳಿಸುವ ಸಾಹಸ ಮೆರೆದಿರುವುದು ಅಚ್ಚರಿಗೆ ಕಾರಣವಾಗಿದೆ.

ಪುರಸಭೆಯ ಅಧಿಕಾರಿಗಳು ಪೌರ ಕಾರ್ಮಿಕರನ್ನು ಮ್ಯಾನ್‍ಹೋಲ್‍ಗೆ ಇಳಿಸಿ ಸ್ವಚ್ಛತೆ ಮಾಡಿರುವುದು ಖಂಡನೀಯ. ಮ್ಯಾನ್‍ಹೋಲ್‍ಗೆ ಇಳಿಸುವುದು ಕ್ರಿಮಿ ನಲ್ ಅಪರಾಧವಾಗಿದೆ. ಮ್ಯಾನ್‍ಹೋಲ್‍ಗೆ ಇಳಿಸಿರುವುದು ಕಂಡುಬಂದರೆ ಸಫಾಯಿ ಕರ್ಮಚಾರಿ ಆಯೋಗದ ಕಾರ್ಯ ದರ್ಶಿಗೆ ಸ್ವಯಂಪ್ರೇರಿತ ದೂರು ದಾಖಲಿ ಸುವಂತೆ ಸೂಚಿಸುವುದಾಗಿ ಸಫಾಯಿ ಕರ್ಮಚಾರಿ ಆಯೋಗದ ಮಾಜಿ ಅಧ್ಯಕ್ಷ ಎಂ.ಆರ್.ವೆಂಕಟೇಶ್ ತಿಳಿಸಿದರು.ಪೌರ ಕಾರ್ಮಿಕರನ್ನು ಮ್ಯಾನ್‍ಹೋಲ್‍ಗೆ ಇಳಿಸದಂತೆ ಸುಪ್ರೀಂ ಕೋರ್ಟ್ ಸ್ಪಷ್ಟ ಆದೇಶ ನೀಡಿದೆ. ರಾಜ್ಯ ಸರ್ಕಾರ ಈ ಬಗ್ಗೆ ಕಾನೂನನ್ನೇ ರೂಪಿಸಿದೆ.

ಪೌರಕಾರ್ಮಿಕರನ್ನು ಮ್ಯಾನ್ ಹೋಲ್‍ಗೆ ಇಳಿಸಿ ಸ್ವಚ್ಛತೆ ಮಾಡಿಸದಂತೆ ತಾಲೂಕು ಜಿಲ್ಲಾ ಮಟ್ಟದಲ್ಲಿ ಕಾರ್ಯ ಕ್ರಮ ನಡೆಸಿ ಜಾಗೃತಿ ಮೂಡಿಸಲಾಗಿದೆ. ಹೀಗಿದ್ದರೂ ಬೇಲೂರು ಪುರಸಭೆ ಯವರು ಪೌರಕಾರ್ಮಿಕರನ್ನು ಮ್ಯಾನ್ ಹೋಲ್‍ಗೆ ಇಳಿಸಿರುವುದು ಸರಿಯಲ್ಲ. ಇದೊಂದು ಅನಿಷ್ಟ ಪದ್ಧತಿಯಾಗಿದೆ ಎಂದು ತಿಳಿಸಿದರು.

Translate »