ಕೋಗೋಡು ಅಂಗನವಾಡಿ ಮೇಲ್ಛಾವಣಿಯಲ್ಲಿ ಹಾವು ಪ್ರತ್ಯಕ್ಷ
ಹಾಸನ

ಕೋಗೋಡು ಅಂಗನವಾಡಿ ಮೇಲ್ಛಾವಣಿಯಲ್ಲಿ ಹಾವು ಪ್ರತ್ಯಕ್ಷ

November 23, 2018

ಬೇಲೂರು: ತಾಲೂಕಿನ ಕೋಗೋಡು ಗ್ರಾಮದ ಅಂಗನವಾಡಿಯ ಮೇಲ್ಛಾವಣಿಯ ಹಂಚಿನಡಿ ಹಾವು ಕಾಣಿಸಿಕೊಂಡು ಕೆಲಕಾಲ ಭಯದ ವಾತಾವರಣ ನಿರ್ಮಾಣವಾಗಿತ್ತು.

ಗುರುವಾರ ಮಧ್ಯಾಹ್ನ ಮಕ್ಕಳ ಊಟದ ಸಮಯದಲ್ಲಿ ಈ ಘಟನೆ ಸಂಭವಿ ಸಿದ್ದು ಭಯಭೀತರಾದ ಮಕ್ಕಳು ಶಿಕ್ಷಕಿ ಯರು ಜೋರಾಗಿ ಕೂಗಿಕೊಂಡು ಹೊರಗೆ ಓಡಿ ಬಂದಿದ್ದಾರೆ. ಹಸಿವಿನಿಂದ ಊಟಕ್ಕೆ ಕೂತ ಮಕ್ಕಳು ಹಾವಿನ ಭಯಕ್ಕೆ ಹೊರಗೆ ಬಂದು ಅಳುತ್ತಾ ನಿಂತಿರುವುದನ್ನು ಕಂಡು ಗ್ರಾಮದ ತುಂಗರಾಜು, ರುದ್ರೇಶ, ಹಾಲಪ್ಪ ಅಂಗನವಾಡಿಯ ಬಳಿ ಬಂದು ಹಾವನ್ನು ಓಡಿಸಿದ್ದಾರೆ.

ದಪ್ಪ ಹಾಗೂ ಉದ್ದವಾಗಿದ್ದ ಕೆರೆ ಹಾವನ್ನು ಸಮೀಪದಲ್ಲಿ ನೋಡಿ ಹೆದರಿದ್ದ ಮಕ್ಕಳು ಹಾಗೂ ಶಿಕ್ಷಕಿ ಮತ್ತು ಸಹಾಯಕಿ ಪುನಃ ಅಂಗನವಾಡಿಯೊಳಗೆ ಹೋಗಲು ಹಿಂಜರಿದಿದ್ದಾರೆ. ಈ ಸಂದರ್ಭಲ್ಲಿ ಗ್ರಾಮದ ಸಂತೋಷ್ ಮಾತನಾಡಿ, ಈಗಿರುವ ಅಂಗನ ವಾಡಿ ಕಟ್ಟಡ ಜೀರ್ಣಾವಸ್ಥೆಯಲ್ಲಿದ್ದು ಅಗಲೋ ಈಗಲೋ ಬೀಳುವ ಆತಂಕದ ನಡುವೆ ಮಕ್ಕಳು ಓದಬೇಕಿದೆ. ಕಟ್ಟಡದ ಸುತ್ತಲೂ ಗಿಡಗಂಟಿಗಳು ಬೆಳೆದು ಹಾವು ಹುಪ್ಪಟೆಗಳ ವಾಸಸ್ಥಾನವಾಗಿದೆ. ಸುತ್ತಲೂ ಅಸ್ವಚ್ಛತೆ ತಾಂಡವಾಡುತ್ತಿದ್ದು ಶೌಚಾಲಯ ಗೋಡೆಗಳು ಬಿರುಕು ಬಿಟ್ಟಿದ್ದು, ಬಾಗಿಲು ಮುರಿದು ಹೋಗಿದೆ. ಈದಿನ ಹಾವು ಅಂಗನವಾಡಿಗೆ ಬಂದಿದ್ದು ನಾಳೆಯಿಂದ ಪೆÇೀಷಕರು ಹೆದರಿಕೆಯಲ್ಲೇ ಮಕ್ಕಳನ್ನು ಕಳಿಸಬೇಕಿದೆ. ಈಗಲಾದರೂ ಸಮಾಜ ಕಲ್ಯಾಣ ಶಿಶು ಅಭಿವೃದ್ಧಿ ಇಲಾಖೆ ಎಚ್ಚೆತ್ತು ಅಂಗನವಾಡಿ ಕಟ್ಟಡ ದುರಸ್ತಿಗೆ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.

Translate »