ಸಚಿವ ರೇವಣ್ಣರ ಮಲತಾಯಿ ಧೋರಣೆ ಪ್ರಶ್ನಿಸದ ಶಾಸಕ ಶಿವಲಿಂಗೇಗೌಡ ತಾಲೂಕು ಬಿಜೆಪಿ ಅಧ್ಯಕ್ಷ ಜಿ.ವಿ.ಟಿ.ಬಸವರಾಜು ಆರೋಪ
ಹಾಸನ

ಸಚಿವ ರೇವಣ್ಣರ ಮಲತಾಯಿ ಧೋರಣೆ ಪ್ರಶ್ನಿಸದ ಶಾಸಕ ಶಿವಲಿಂಗೇಗೌಡ ತಾಲೂಕು ಬಿಜೆಪಿ ಅಧ್ಯಕ್ಷ ಜಿ.ವಿ.ಟಿ.ಬಸವರಾಜು ಆರೋಪ

November 23, 2018

ಅರಸೀಕೆರೆ: ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ.ರೇವಣ್ಣನವರ ಅರಸೀ ಕೆರೆ ಕ್ಷೇತ್ರದ ಮಲತಾಯಿ ಧೊರಣೆಯನ್ನು ಪ್ರಶ್ನಿಸಲಾಗದ ಶಾಸಕ ಕೆ.ಎಂ.ಶಿವಲಿಂಗೇ ಗೌಡ ಮೂಕ ಪ್ರೇಕ್ಷಕರಾಗಿ ಕೈ ಕಟ್ಟಿ ಕುಳಿತಿದ್ದಾರೆ ಎಂದು ತಾಲೂಕು ಬಿಜೆಪಿ ಅಧ್ಯಕ್ಷ ಜಿ.ವಿ.ಟಿ ಬಸವರಾಜು ನೇರ ಆರೋಪ ಮಾಡಿದರು.

ನಗರದಲ್ಲಿ ಬುಧವಾರದಂದು ಏರ್ಪಡಿ ಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾ ಡಿದ ಅವರು, ಇತ್ತೀಚೆಗೆ ನಡೆದ ರಾಜ್ಯ ಸಂಪುಟ ಸಭೆಯಲ್ಲಿ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಮೊಸಳೆ ಹೊಸಹಳ್ಳಿಯಲ್ಲಿ ಎಂಜಿನಿಯ ರಿಂಗ್ ಕಾಲೇಜನ್ನು ಸ್ಥಾಪನೆ ಮಾಡಲು ನಿರ್ಧಾರ ಮಾಡಲಾಗಿದೆ. ಈ ವಿಚಾರ ಸ್ವಾಗತಾ ರ್ಹವಾದರೂ ಇಂತಹ ಕಾಲೇಜುಗಳಿಂದ ವಂಚಿತವಾಗಿರುವ ಅರಸೀಕೆರೆ ಕ್ಷೇತ್ರಕ್ಕೆ ಯಾಕೆ ಸ್ಥಾಪಿಸಲು ಶಿವಲಿಂಗೇಗೌಡರು ಪ್ರಯತ್ನಿಸ ಲಿಲ್ಲ. ಈಗಾಗಲೇ ಹಾಸನ ನಗರದಲ್ಲಿ ನಾಲ್ಕು ಇಂಜಿನಿಯರಿಂಗ್ ಕಾಲೇಜುಗಳು ಕಾರ್ಯ ನಿರ್ವಹಿಸುತ್ತಿವೆ. ಅವಶ್ಯಕತೆ ಇಲ್ಲದಿದ್ದರೂ ನೂತನ ಕಾಲೇಜನ್ನು ಹೊಳೆನರಸೀಪುರ ಕ್ಷೇತ್ರಕ್ಕೆ ನೀಡುವ ಆಗತ್ಯವೇನಿತ್ತು ಎಂದು ಪ್ರಶ್ನಿಸಿದರು.

ಹಿಂದೆ ಬಿಜೆಪಿ ಮತ್ತು ಕಾಂಗ್ರೆಸ್ ಸರ್ಕಾರ ಗಳು ಇದ್ದಾಗ ಸಾವಿರಾರು ಕೋಟಿ ರೂಪಾಯಿ ಗಳ ಶಾಶ್ವತ ಯೋಜನೆಗಳನ್ನು ಕ್ಷೇತ್ರಕ್ಕೆ ತಂದ ಇದೇ ಶಾಸಕರು ಇಂದು ತಮ್ಮದೇ ಜೆಡಿಎಸ್ ಪಕ್ಷದ ಮುಖ್ಯಮಂತ್ರಿ ಮತ್ತು ರಾಜ್ಯ ಸರ್ಕಾರವಿದ್ದರೂ ಒಂದೂ ರೂಪಾಯಿ ಹಣವನ್ನು ಬಿಡುಗಡೆ ಮಾಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದರು.

ಅರಸೀಕೆರೆ ತಾಲೂಕನ್ನು ಸಂಪೂರ್ಣ ವಾಗಿ ನಿರ್ಲಕ್ಷಿಸಿದ್ದರೂ ಇದನ್ನು ಪ್ರಶ್ನಿಸದ ಈ ಕ್ಷೇತ್ರದ ಹ್ಯಾಟ್ರಿಕ್ ಶಾಸಕರು, ಸದನ ದಲ್ಲಿ ಗಂಟೆ ಗಟ್ಟಲೆ ಮಾತನಾಡಿ ಗ್ಲಿಸರಿನ್ ಕಣ್ಣೀರು ಹಾಕುವ ಸದನದ ಶೂರರಾಗಿ ದ್ದಾರೆ ಎಂದ ಅವರು, ಒಂದು ವೇಳೆ ಶಾಸಕ ಕೆ.ಎಂ.ಶಿವಲಿಂಗೇಗೌಡರು ಅಸಹಾಯಕ ರಾಗಿದ್ದಲ್ಲಿ ತಾಲೂಕು ಬಿಜೆಪಿ ಘಟಕವು ಅವರೊಂದಿಗೆ ಹೋರಾಟಕ್ಕೆ ಇಳಿದು ಬೆಂಬಲ ಸೂಚಿಸಲಿದೆ. ಇನ್ನು ಮುಂದಾ ದರೂ ಶಾಸಕರು ಕ್ಷೇತ್ರದ ಅಭಿವೃದ್ಧಿ ಬಗ್ಗೆ ಒತ್ತು ನೀಡದಿದ್ದಲ್ಲಿ ಇವರ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಉಗ್ರ ಪ್ರತಿ ಭಟನೆ ಮಾಡಲಾಗುವುದು ಎಂದ ಹೇಳಿದರು.

ಜಿಲ್ಲಾ ಬಿಜೆಪಿ ವಕ್ತಾರ ಎನ್.ಡಿ. ಪ್ರಸಾದ್ ಮಾತನಾಡಿ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಮತ್ತು ಅವರ ಕುಟುಂಬದವರಿಂದ ಅರಸೀಕೆರೆ ತಾಲೂಕು ಬಲಿಪಶುವಾಗುತ್ತಿದೆ. ಜಿಲ್ಲಾ ಸದನ ಮತ್ತು ಮುಖ್ಯಮಂತ್ರಿಗಳ ಮುಂದೆ ಕ್ಷೇತ್ರದ ಅಭಿ ವೃದ್ಧಿ ಬಗ್ಗೆ ಗಮನ ಸೆಳೆಯಲಾಗದೆ ಶಾಸಕರು ಇಂದು ಸಂಪೂರ್ಣ ಕೈ ಚೆಲ್ಲಿ ಕುಳಿತಿದ್ದಾರೆ. ಶಾಶ್ವತ ಕುಡಿಯುವ ನೀರು, ಒಳ ಚರಂಡಿ ಮತ್ತು ರಸ್ತೆಗಳ ಅಭಿವೃದ್ಧಿ ವಿಚಾರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಅಂದಿನ ಸರ್ಕಾರಗಳ ಸಾವಿರಾರು ಕೋಟಿ ರೂಪಾಯಿ ಗಳ ಕೊಡುಗೆ ದೊಡ್ಡ ಪ್ರಮಾಣದಲ್ಲಿದೆ. ಆದರೆ ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚು ಗಮನ ಹರಿಸಬೇಕಾದ ಶಾಸಕರು ಇಂದು ಉಸ್ತು ವಾರಿ ಸಚಿವ ಹೆಚ್.ಡಿ.ರೇವಣ್ಣ ಮಾಡು ತ್ತಿರುವ ಮಲತಾಯಿ ಧೋರಣೆಯನ್ನು ಸಹಿಸಿಕೊಂಡು ಕ್ಷೇತ್ರದ ಜನತೆಗೆ ದ್ರೋಹ ವನ್ನು ಬಗೆಯುತ್ತಿದೆ ಎಂದರು. ಜಿಲ್ಲಾ ಬಿಜೆಪಿ ಘಟಕ ಕಾರ್ಯದರ್ಶಿ ಲಾಳನಕೆರೆ ಯೋಗೀಶ್, ತಾಲೂಕು ಘಟಕದ ಕಾರ್ಯ ದರ್ಶಿ ಚಲ್ಲಾಪುರ ಬಸವರಾಜು, ನಗರ ಸಭಾ ಸದಸ್ಯ ಗಿರೀಶ್ ಉಪಸ್ಥಿತರಿದ್ದರು.

Translate »