ಆಲನಹಳ್ಳಿ ಪೊಲೀಸರಿಂದ ಇಬ್ಬರು ಸರಗಳ್ಳರ ಸೆರೆ
ಮೈಸೂರು

ಆಲನಹಳ್ಳಿ ಪೊಲೀಸರಿಂದ ಇಬ್ಬರು ಸರಗಳ್ಳರ ಸೆರೆ

November 23, 2018

ಮೈಸೂರು: ಇಬ್ಬರು ಸರಗಳ್ಳರನ್ನು ಬಂಧಿಸಿರುವ ಮೈಸೂರಿನ ಆಲನಹಳ್ಳಿ ಠಾಣೆ ಪೊಲೀಸರು, 10.60. ಲಕ್ಷ ರೂ. ಮೌಲ್ಯದ, 332 ಗ್ರಾಂ ತೂಗುವ 8 ಸರಗಳು ಹಾಗೂ ಕೃತ್ಯಕ್ಕೆ ಬಳಸಿದ್ದ 2 ಸ್ಕೂಟರ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

ಮೈಸೂರಿನ ಎನ್.ಆರ್.ಮೊಹಲ್ಲಾ ನಿವಾಸಿ ಶಬ್ಬೀರ್ ಅಹಮದ್ ಮಗ ಮೊಹ ಮದ್ ಸಾಧು(21) ಹಾಗೂ ಉದಯಗಿರಿ `ಸಿ’ ಬ್ಲಾಕ್ ನಿವಾಸಿ ಲೇಟ್ ಮೊಹಮದ್ ಅನ್ವರ್ ಮಗ ಮೊಹಮದ್ ಮುಯೀಜ್ (24) ಬಂಧಿತ ಖದೀಮರು.

ಆಲನಹಳ್ಳಿ ಠಾಣಾ ವ್ಯಾಪ್ತಿಯ ಶುಕ್ರೋ ದಯ ಸರ್ಕಲ್‍ನ ಪಾರ್ಕ್ ಬಳಿ ಕಾರ್ಯಾಚರಣೆ ನಡೆಸಿದ ಪೊಲೀಸರು, ನವೆಂಬರ್ 18ರಂದು ಆರೋಪಿಗಳನ್ನು ಬಂಧಿಸಿ ಅವರಿಂದ 8 ಚಿನ್ನದ ಸರ ಹಾಗೂ 2 ಸ್ಕೂಟರ್‍ಗಳನ್ನು ವಶಪಡಿಸಿ ಕೊಂಡರು. ನವೆಂಬರ್ 13ರಂದು ಸಂಜೆ ಆಲನಹಳ್ಳಿ ವಾಟರ್ ಟ್ಯಾಂಕ್ ಬಳಿ ಎಸ್.ಮಂಜುಳಾರಿಂದ 59 ಗ್ರಾಂ ಸರ ಕಿತ್ತುಕೊಂಡು ಪರಾರಿಯಾಗಿದ್ದ ಖದೀ ಮರು, ನಿರ್ಜನ ಪ್ರದೇಶದಲ್ಲಿ ಓಡಾಡುವ ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡಿಕೊಂಡು ಸುಜುಕಿ ಆಕ್ಸೆಸ್ ಅಥವಾ ಹೋಂಡಾ ಆಕ್ಟಿವಾ ವಾಹನ ಬಳಸಿ ಮೈಸೂರಿನ ಜಯಲಕ್ಷ್ಮೀಪುರಂ, ಹೆಬ್ಬಾಳು, ನಜರ್‍ಬಾದ್, ವಿವಿ ಪುರಂ ಠಾಣಾ ವ್ಯಾಪ್ತಿಯಲ್ಲಿ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದರು ಎಂಬುದು ವಿಚಾ ರಣೆ ವೇಳೆ ತಿಳಿದು ಬಂದಿತು.

ಆರೋಪಿಗಳ ಬಂಧನದಿಂದ ಒಟ್ಟು 8 ಚಿನ್ನದ ಸರ ಕಳವು ಪ್ರಕರಣ ಪತ್ತೆ ಯಾದಂತಾಗಿದೆ. ಡಿಸಿಪಿ ಡಾ. ವಿಕ್ರಂ ವಿ.ಅಮಟೆ ಮಾರ್ಗದರ್ಶನದಲ್ಲಿ ದೇವ ರಾಜ ಉಪ ವಿಭಾಗದ ಎಸಿಪಿ ಗಜೇಂದ್ರ ಪ್ರಸಾದ್ ನೇತೃತ್ವದಲ್ಲಿ ನಡೆಸಿದ ಪತ್ತೆ ಕಾರ್ಯಾಚರಣೆಯಲ್ಲಿ ಇನ್ಸ್‍ಪೆಕ್ಟರ್ ಕೆ.ಎಂ.ಮಂಜು, ಸಿಬ್ಬಂದಿಗಳಾದ ಶಿವ ಪ್ರಸಾದ್, ಚೌಡಪ್ಪ, ಮಲ್ಲಿಕಾರ್ಜುನ ಸ್ವಾಮಿ, ಸತೀಶ, ಉಮೇಶ, ಮಾಣಿಕ್, ರಂಗನಾಥ, ಮಹೇಶ, ಭಾಸ್ಕರ್ ಅವರು ಭಾಗವಹಿಸಿದ್ದರು.

 

Translate »