ಪುಟ್ಟ ವಯಸ್ಸಲ್ಲೇ ಅಪ್ರತಿಮ ಸಾಧನೆ ತೋರಿದ ಕೊಡಗು ಬಾಲಕನ ಹೆಸರು ವಂಡರ್ ಬುಕ್ ಆಫ್ ರೆಕಾರ್ಡ್, ಭಾರತ್ ವಲ್ರ್ಡ್ ರೆಕಾರ್ಡ್‍ನಲ್ಲಿ ದಾಖಲು
ಕೊಡಗು

ಪುಟ್ಟ ವಯಸ್ಸಲ್ಲೇ ಅಪ್ರತಿಮ ಸಾಧನೆ ತೋರಿದ ಕೊಡಗು ಬಾಲಕನ ಹೆಸರು ವಂಡರ್ ಬುಕ್ ಆಫ್ ರೆಕಾರ್ಡ್, ಭಾರತ್ ವಲ್ರ್ಡ್ ರೆಕಾರ್ಡ್‍ನಲ್ಲಿ ದಾಖಲು

November 26, 2018

ಸೋಮವಾರಪೇಟೆ, ನ.25- ಪುಟ್ಟ ಬಾಲಕ ಅಸಾಧಾರಣ ನೆನಪಿನ ಶಕ್ತಿಯಿಂದ ಗಮನ ಸೆಳೆದು ಅಂತರಾಷ್ಟ್ರೀಯ ಮಟ್ಟದಲ್ಲಿ ದಾಖಲೆ ಬರೆದಿದ್ದಾನೆ.

ಹೆಸರು ಅನ್ಷ್ (ANSH) 4 ವರ್ಷ. ಇದೀಗ ಶಿಶು ವಿಹಾರ ಸೇರಿರುವ ಪೋರ ಈಗಾಗಲೇ ಅಂತರಾಷ್ಟ್ರೀಯ ವಂಡರ್ ಬುಕ್ಕ್ ಆಫ್ ರೆಕಾರ್ಡ್ ಹಾಗೂ ಭಾರತ್ ವಲ್ರ್ಡ್ ರೆಕಾರ್ಡ್ ಬುಕ್‍ನಲ್ಲಿ ತನ್ನ ಸಾಧ ನೆಯ ಹೆಸರನ್ನು ದಾಖಲಿಸಿ ಕೊಂಡಿದ್ದಾನೆ.

2.2 ವರ್ಷದಲ್ಲೆ ಮಗನ ನೆನಪಿನ ಶಕ್ತಿ ಯನ್ನು ಅರಿತ ತಾಯಿ ಆಶಾ ಹಾಗೂ ತಂದೆ ಅಶ್ವಿನ್ ಆತನ ಪ್ರತಿಭೆಗೆ ಮತ್ತಷ್ಟು ಸಾಮಥ್ರ್ಯ ತುಂಬುವ ಕಾರ್ಯ ಮಾಡಿ ದರು. ಆರಂಭದಲ್ಲಿ ತಮ್ಮ ಕಾಫಿ ತೋಟ ಗಳಿರುವ ಗ್ರಾಮಗಳ ಹೆಸರನ್ನು ಹೇಳುತ್ತಿ ರುವ ಮಗನನ್ನು ಗಮನಿಸಿದ ಇವರು. ನಂತರ ರಾಷ್ಟ್ರಗಳು, ಅವುಗಳ ರಾಜದಾ ನಿಗಳ ಹೆಸರನ್ನು ಹೇಳಿಕೊಟ್ಟು ಪುನಃ ಕೇಳಿದಾಗ ತಪ್ಪಿಲ್ಲದೆ ಹೇಳುವುದನ್ನು ಕಲಿತ ಬಾಲಕ 120 ರಾಷ್ಟ್ರಗಳ ಹೆಸರು ಅವುಗಳ ರಾಜಧಾನಿ ಹೆಸರುಗಳನ್ನು ಪಟ ಪಟನೆ ಹೇಳುವ ಮೂಲಕ ದಾಖಲೆ ಬರೆದಿದ್ದಾನೆ.

ಇದೀಗ 4ನೇ ವರ್ಷಕ್ಕೆ ಕಾಲಿಟ್ಟಿರುವ ಅನ್ಷ್ ಇದೀಗ ದೇಶದ 28 ರಾಜ್ಯಗಳ ರಾಜಧಾನಿ ಹೆಸರು, ಹಲವು ಶ್ಲೋಕಗ ಳನ್ನು ಹೇಳುವುದರೊಂದಿಗೆ ಹತ್ತಾರು ಸಾಮಾನ್ಯ ಜ್ಞಾನ ಪ್ರಶ್ನೆಗಳನ್ನು ಉತ್ತರಿ ಸುತ್ತಾನೆ. ಈತನ ಪ್ರತಿಭೆಯನ್ನು ಗಮ ನಿಸಿದ ವಂಡರ್ ಬುಕ್ ಆಫ್ ರೆಕಾರ್ಡ್ ಸಂಸ್ಥೆಯವರು ಸಂದರ್ಶನ ನಡೆಸಿ ಅಸಾಧಾರಣ ನೆನಪಿನ ಶಕ್ತಿಯುಳ್ಳ ಮಗು ಎಂದು ದಾಖಲಿಸಿಕೊಂಡು ಜುಲೈ 2018ರಲ್ಲಿ ಪ್ರಮಾಣ ಪತ್ರ ನೀಡಿದ್ದಾರೆ. ಅಲ್ಲದೆ ಅಕ್ಟೋಬರ್ 2018ರಲ್ಲಿ ಭಾರತ್ ವಲ್ರ್ಡ್ ರೆಕಾರ್ಡ್ ಸಂಸ್ಥೆಯವರು ಸಹ ಈತನ ಸಾಧನೆಯನ್ನು ದಾಖಲಿಸಿ ಕೊಂಡು ಪ್ರಮಾಣ ಪತ್ರ ನೀಡಿದ್ದಾರೆ.

ಇಲ್ಲಿನ ಮಡಿಕೇರಿ ರಸ್ತೆಯಲ್ಲಿರುವ ಸಂತೋಷ್ ಟೆಕ್ಸ್‍ಟೆಲ್ಸ್ ಮಾಲೀಕ ಹಾಗೂ ಕಾಫಿ ಬೆಳೆಗಾರರಾದ ಅಶ್ವಿನ್ ಹಾಗು ಆಶಾ ದಂಪತಿಗಳ ಪುತ್ರನಾಗಿರುವ ಅನ್ಷ್. ಈ ವಯಸ್ಸಿನಲ್ಲಿಯೆ ಪದ್ಯಗಳು, ಕಥೆಗ ಳನ್ನು ಕೇಳುವುದರಲ್ಲಿ ಅತ್ಯಂತ ಆಸಕ್ತಿ ತೋರುತ್ತಿದ್ದನು. ಮಗನ ಈ ಸಾಧನೆ ಮತ್ತು ಆಸಕ್ತಿಯಿಂದ ಉತ್ತೇಜಿತರಾಗಿರುವ ತಾಯಿ ಆಶಾ ತನ್ನ ಮಗ ಒಬ್ಬ ಸುಶಿ ಕ್ಷಿತನಾಗುವುದರೊಂದಿಗೆ ವಿಜ್ಞಾನಿಯಾ ಗಬೇಕು. ದೇಶಕ್ಕಾಗಿ ದುಡಿಯಬೇಕು. ದೀನ, ದುರ್ಬಲರಿಗೆ ಸಹಾಯ ಮಾಡುವಂತಾ ಗಬೇಕೆಂದು ಮಹದಾಸೆ ಹೊಂದಿದ್ದಾರೆ.

Translate »