ಸಿವಿಲ್ ಪೊಲೀಸ್ ಪೇದೆ ನೇಮಕಾತಿ ಪ್ರವೇಶ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ
ಕೊಡಗು

ಸಿವಿಲ್ ಪೊಲೀಸ್ ಪೇದೆ ನೇಮಕಾತಿ ಪ್ರವೇಶ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ

November 26, 2018

ಹಾಸನ: ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದ ಪ್ರಕರಣ ಜನ ಮಾನಸದಿಂದ ಮರೆಯಾಗುವ ಮುನ್ನವೇ ಸಿವಿಲ್ ಪೊಲೀಸ್ ಕಾನ್ಸ್ ಟೇಬಲ್ ನೇಮಕಾತಿ ಪ್ರವೇಶ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದು, ಅದನ್ನು ಅಭ್ಯರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಕಿಂಗ್‍ಪಿನ್ ಸೇರಿದಂತೆ 117 ಮಂದಿಯನ್ನು ಹಾಸನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಹಿನ್ನೆಲೆಯಲ್ಲಿ ನ.25 ರಂದು ನಡೆಯಬೇಕಾ ಗಿದ್ದ ಸಿವಿಲ್ ಪೊಲೀಸ್ ಕಾನ್ಸ್‍ಟೇಬಲ್ ಪ್ರವೇಶ ಪರೀಕ್ಷೆಯನ್ನು ದಿನಾಂಕ ಸೂಚಿ ಸದೇ ಪೊಲೀಸ್ ನೇಮಕಾತಿ ವಿಭಾಗದ ಎಡಿ ಜಿಪಿ ಅವರು ಮುಂದೂಡಿ, ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ.

ವಿವರ: ಸಿವಿಲ್ ಪೊಲೀಸ್ ಕಾನ್ಸ್ ಟೇಬಲ್ ಪ್ರವೇಶ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿ, ಅದನ್ನು ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಜಾಲದ ರೂವಾರಿ ಬೆಂಗಳೂರಿನ ಶಿವಕುಮಾರ ಸ್ವಾಮಿ ಹಾಸನ ಮತ್ತು ಕೊಡಗು ಗಡಿ ಭಾಗ ದಲ್ಲಿ ಮಾರಾಟ ಮಾಡುತ್ತಿದ್ದಾನೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು.

ಈ ಹಿನ್ನೆಲೆಯಲ್ಲಿ ಸಿಸಿಬಿ ಹಿರಿಯ ಅಧಿಕಾರಿಗಳಾದ ಬಿ.ಆರ್.ವೇಣು ಗೋಪಾಲ್ ಮತ್ತು ಬಿ.ಬಾಲರಾಜು ಅವರ ನೇತೃತ್ವದಲ್ಲಿ 2 ವಿಶೇಷ ತಂಡ ಗಳನ್ನು ರಚಿ ಸಲಾಗಿತ್ತು. ಈ ತಂಡವು ಮಾಹಿತಿದಾರರ ನೆರವಿನೊಂದಿಗೆ ಕಾರ್ಯಾಚರಣೆ ಆರಂಭಿಸಿತ್ತು. ಕೊಡಗು ಜಿಲ್ಲೆ ಸೋಮ ವಾರಪೇಟೆ ತಾಲೂಕಿನ ಶನಿವಾರಸಂತೆಯ ಕಲ್ಮಠದ ಶ್ರೀ ನಂಜುಂಡೇಶ್ವರ ವಿದ್ಯಾ ಮಂದಿರದ ಬಳಿ ಉತ್ತರ ಕರ್ನಾಟಕ ದಿಂದ ಆಗಮಿಸಿದ್ದ ನೂರಾರು ಮಂದಿ ಜಮಾಯಿಸಿದ್ದಾರೆ ಎಂಬ ಮಾಹಿತಿ ಪಡೆದ ಪೊಲೀಸರ ತಂಡ ಇಂದು ಬೆಳಿಗ್ಗೆ ಅಲ್ಲಿ ದಾಳಿ ಮಾಡಿತು.

ಈ ವೇಳೆ ಜಾಲದ ಪ್ರಮುಖ ರೂವಾರಿ ಶಿವಕುಮಾರಸ್ವಾಮಿ ಮತ್ತು ಬಸವರಾಜು ಎಂಬುವರು ಉತ್ತರ ಕರ್ನಾಟಕದಿಂದ ಆಗಮಿಸಿದ್ದ ಸಿವಿಲ್ ಪೊಲೀಸ್ ಕಾನ್ಸ್‍ಟೇಬಲ್ ಹುದ್ದೆಯ ಅಭ್ಯರ್ಥಿಗಳಿಗೆ ಪ್ರಶ್ನೆ ಪತ್ರಿಕೆ ಮತ್ತು ಉತ್ತರವಿರುವ ಪ್ರತಿಗಳನ್ನು ಹಣ ಪಡೆದು ವಿತರಿಸುತ್ತಿರುವುದು ಕಂಡು ಬಂದಿದೆ. ಪೊಲೀ ಸರು ದಾಳಿ ನಡೆಸುತ್ತಿದ್ದಂತೆಯೇ ಬಸವರಾಜು ಸ್ಥಳದಿಂದ ಪರಾರಿಯಾಗಿ ದ್ದಾನೆ. ಶಿವಕುಮಾರಸ್ವಾಮಿಯನ್ನು ಬಂಧಿಸಿದ ಪೊಲೀಸರು, ಆತನ ಬಳಿ ಇದ್ದ ಪ್ರಶ್ನೆ ಪತ್ರಿಕೆ ಮತ್ತು ಉತ್ತರಗಳ ಜೆರಾಕ್ಸ್ ಪ್ರತಿಗಳನ್ನು ವಶಪಡಿಸಿ ಕೊಂಡರು. ಪ್ರಶ್ನೆ ಪತ್ರಿಕೆ ಖರೀದಿಗೆ ಬಂದಿದ್ದ 116 ಅಭ್ಯರ್ಥಿಗಳನ್ನು ಬಂಧಿಸಿದ್ದು, 4 ಮಿನಿ ಬಸ್, 1 ಇನ್ನೋವಾ ಕಾರು, 7 ಚಾಲಕರು ಹಾಗೂ ಕ್ಲೀನರ್‍ಗಳನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.

ಪ್ರಕರಣದ ಕಿಂಗ್‍ಪಿನ್ ಶಿವಕುಮಾ ರಸ್ವಾಮಿ ಪ್ರಶ್ನೆ ಪತ್ರಿಕೆಗಾಗಿ ಅಭ್ಯರ್ಥಿಗ ಳಿಂದ 6 ರಿಂದ 8 ಲಕ್ಷ ರೂ. ಪಡೆಯು ತ್ತಿದ್ದ ಎಂಬುದು ಪ್ರಾಥಮಿಕ ತನಿಖೆ ಯಿಂದ ಗೊತ್ತಾಗಿದೆ. ಈ ಸಂಬಂಧ ಬೆಂಗಳೂರಿನ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Translate »