Tag: Ambareesh

ಜಿಲ್ಲಾದ್ಯಂತ ಅಂಬಿ 12ನೇ ದಿನದ ಕಾರ್ಯ ಆಚರಣೆ
ಮಂಡ್ಯ

ಜಿಲ್ಲಾದ್ಯಂತ ಅಂಬಿ 12ನೇ ದಿನದ ಕಾರ್ಯ ಆಚರಣೆ

December 6, 2018

ಮಂಡ್ಯ: ದಿವಂಗತ ಮಾಜಿ ಸಚಿವ ರೆಬಲ್ ಸ್ಟಾರ್ ಅಂಬರಿಶ್ ಅವರ 12ನೇ ದಿನದ ಪುಣ್ಯ ತಿಥಿಯನ್ನು ಅಂಬರೀಶ್ ಅಭಿಮಾನಿಗಳು ಜಿಲ್ಲಾದ್ಯಂತ ಬುಧವಾರ ಆಚರಿಸಿದರು. ಮಂಡ್ಯ, ಮದ್ದೂರು, ಪಾಂಡವಪುರ, ಶ್ರೀರಂಗಪಟ್ಟಣ ತಾಲೂಕು ಕೇಂದ್ರಗಳು ಮಾತ್ರವಲ್ಲದೆ ಹಳ್ಳಿ ಹಳ್ಳಿಗಳಲ್ಲಿಯೂ ಅಂಬ ರೀಶ್ ತಿಥಿ ಕಾರ್ಯದ ವಿಧಿ ವಿಧಾನಗಳನ್ನು ಆಚರಿಸುವ ಮೂಲಕ ಅನ್ನದಾನ ನಡೆಸಿರುವ ಬಗ್ಗೆ ವರದಿಯಾಗಿದೆ. ಮಂಡ್ಯ ತಾಲೂಕಿನ ಉಪ್ಪುರುಕನ ಹಳ್ಳಿ ಯಲ್ಲಿ ಬಿಜೆಪಿ ಶಿವಕುಮಾರಾಧ್ಯ ಮತ್ತು ಪಕ್ಷಾತೀತವಾಗಿ ಅಂಬಿ ಅಭಿಮಾನಿಗಳು ಅಂಬರೀಶ್ ಭಾವಚಿತ್ರವನ್ನಿಟ್ಟು ತಿಥಿ ಕಾರ್ಯ ಮಾಡಿರುವ ಅಭಿಮಾನಿಗಳು….

ಸಂಗಮದಲ್ಲಿ ಅಭಿಷೇಕ್‍ಗೌಡರಿಂದ ಅಸ್ಥಿ ವಿಸರ್ಜನೆ ಕಾವೇರಿ ಮಡಿಲಲ್ಲಿ ಅಂಬಿ ಅಸ್ಥಿ ಲೀನ
ಮಂಡ್ಯ

ಸಂಗಮದಲ್ಲಿ ಅಭಿಷೇಕ್‍ಗೌಡರಿಂದ ಅಸ್ಥಿ ವಿಸರ್ಜನೆ ಕಾವೇರಿ ಮಡಿಲಲ್ಲಿ ಅಂಬಿ ಅಸ್ಥಿ ಲೀನ

November 29, 2018

ಮಂಡ್ಯ: ಅನಾರೋಗ್ಯದಿಂದ ಶನಿವಾರ ಅಗಲಿದ ಮಾಜಿ ಸಚಿವ, ರೆಬೆಲ್ ಸ್ಟಾರ್ ಅಂಬರೀಶ್ ಅವರ ಅಸ್ಥಿಯನ್ನು ಶ್ರೀರಂಗಪಟ್ಟಣದಲ್ಲಿರುವ ಸಂಗಮದಲ್ಲಿ ಬುಧವಾರ ವಿಸರ್ಜನೆ ಮಾಡಲಾಯಿತು. ಮಧ್ಯಾಹ್ನ ಬೆಂಗಳೂರಿನಿಂದ ಮೂರು ಮಡಿಕೆಗಳಲ್ಲಿ ತರಲಾಗಿದ್ದ ಅಸ್ಥಿಯನ್ನು ಶಾಸ್ತ್ರೋಕ್ತವಾಗಿ ಅಂಬರೀಶ್ ಪುತ್ರ ಅಭಿಷೇಕ್ ಗೌಡ ಅವರು ವಿಸರ್ಜನೆ ಮಾಡಿದರು. ಒಟ್ಟು ಆರು ಮಡಿಕೆಗಳಲ್ಲಿ ಅಂಬರೀಶ್ ಅಸ್ಥಿಯನ್ನು ಸಂಚಯನ ಮಾಡಲಾಗಿತ್ತು. ಈ ಪೈಕಿ ಮೂರು ಮಡಿಕೆಗಳಲ್ಲಿರುವ ಅಸ್ಥಿ ಯನ್ನು ಇಂದು ಶ್ರೀರಂಗಪಟ್ಟಣದ ಸಂಗಮದಲ್ಲಿ ವಿಸರ್ಜನೆ ಮಾಡಲಾಯಿತು. ಇನ್ನುಳಿದ 3 ಮಡಿಕೆಯಲ್ಲಿರುವ ಅಸ್ಥಿಯ ಪೈಕಿ ಒಂದು ಬೆಂಗಳೂರಿನ…

ಅಂಬರೀಶ್ ನಿಧನಕ್ಕೆ ಸುತ್ತೂರು ಶ್ರೀಗಳ ಸಂತಾಪ
ಮೈಸೂರು

ಅಂಬರೀಶ್ ನಿಧನಕ್ಕೆ ಸುತ್ತೂರು ಶ್ರೀಗಳ ಸಂತಾಪ

November 26, 2018

ಮೈಸೂರು: ಅಂಬರೀಶ್ ಅವರು ನಿಧನರಾದುದು ಅತೀವ ವಿಷಾ ದದ ಸಂಗತಿ ಎಂದು ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳು ಅತೀವ ಸಂತಾಪ ವ್ಯಕ್ತಪಡಿಸಿದ್ದಾರೆ. ಅವರು ಹುಟ್ಟಿದ್ದು, ಬೆಳೆದದ್ದು, ವ್ಯಾಸಂಗ ಮಾಡಿದ್ದು ಎಲ್ಲಾ ಮೈಸೂರಿನಲ್ಲಿ. ಅನಂತರ `ಮಂಡ್ಯದ ಗಂಡು’ ಎಂದು ಖ್ಯಾತರಾದರು. ಸುಪ್ರಸಿದ್ಧ ಚಲನಚಿತ್ರ ನಿರ್ದೇಶಕರಾದ ಪುಟ್ಟಣ್ಣ ಕಣಗಾಲ್, ಇವರಲ್ಲಿದ್ದ ಪ್ರತಿಭೆ ಯನ್ನು ಗಮನಿಸಿ `ನಾಗರಹಾವು’ ಚಿತ್ರದಲ್ಲಿ ಪಾತ್ರ ನೀಡಿ, ರಾತ್ರೋರಾತ್ರಿ ಕರ್ನಾಟಕದ ಆಕರ್ಷಣೆಯ ಕೇಂದ್ರಬಿಂದುವನ್ನಾಗಿ ಮಾಡಿ ದರು. ಕನ್ನಡ, ತಮಿಳು, ತೆಲುಗು, ಮಲ ಯಾಳಂ, ಹಿಂದಿ ಹೀಗೆ ಹಲವಾರು…

ರೆಬೆಲ್ ಸ್ಟಾರ್ ಅಂಬರೀಶ್‍ಗೆ ಆತಿಥ್ಯ: ಇನ್ನು ನೆನಪಷ್ಟೆ!
ಮೈಸೂರು

ರೆಬೆಲ್ ಸ್ಟಾರ್ ಅಂಬರೀಶ್‍ಗೆ ಆತಿಥ್ಯ: ಇನ್ನು ನೆನಪಷ್ಟೆ!

November 26, 2018

ಮೈಸೂರು: ಒರಟು ಮಾತು, ಕೆಂಗಣ್ಣಿನಲ್ಲಿ ಗದರಿಸುತ್ತಿದ್ದ ಅಂಬ ರೀಶ್ ಗುಂಡಿಗೆಯೊಳಗಿದ್ದ ಮನಸ್ಸು ಮಾತ್ರ ಮಲ್ಲಿಗೆಯಷ್ಟೇ ಮೃದುವಾಗಿತ್ತು. ಯಾವುದನ್ನೂ ತಲೆಗೆ ಹಚ್ಚಿಕೊಳ್ಳದೆ ಎಲ್ಲರನ್ನೂ ಒಂದೇ ರೀತಿ ಕಾಣುತ್ತಿದ್ದ ಸ್ನೇಹಜೀವಿ ಅವರಾಗಿದ್ದರು. ದೇಶ-ವಿದೇಶಗಳಲ್ಲಿ ಸ್ನೇಹಸೌಧ ಕಟ್ಟಿರುವ ಅಂಬರೀಶ್, ನಡೆದು ಬಂದ ಹಾದಿಯನ್ನೂ ಎಂದೂ ಮರೆತವರಲ್ಲ. ಐಷಾರಾಮಿ ಜಗತ್ತು ಮುಂದಿದ್ದರೂ, ಹಿಂದಿನ ನಂಟನ್ನು ಕಾಪಾಡಿಕೊಂಡು ಬಂದಿದ್ದರು. ಹಾಗೆಯೇ ಮೈಸೂರಿನಲ್ಲಿ ಅಂಬರೀಶ್‍ಗೆ ಪ್ರಿಯವಾದ ಸಾಕಷ್ಟು ಸ್ಥಳಗಳಿದ್ದು, ಅಲ್ಲೆಲ್ಲಾ ಈಗ ಉಳಿದಿರುವುದು ಅಂಬಿಯ ನೆನಪು ಮಾತ್ರ. ಮೊದಲ ಕಸ್ಟಮರ್: ಮೈಸೂರಿನ ಮಂಡಿ ಮೊಹಲ್ಲಾದಲ್ಲಿರುವ ಹನುಮಂತು…

ದುಖಃದಲ್ಲೂ ಅಪ್ಪನಂತೆಯೇ ಮಾನವೀಯತೆ ಮೆರೆದ ಅಭಿಷೇಕ್..!
ಮೈಸೂರು

ದುಖಃದಲ್ಲೂ ಅಪ್ಪನಂತೆಯೇ ಮಾನವೀಯತೆ ಮೆರೆದ ಅಭಿಷೇಕ್..!

November 26, 2018

ಮಂಡ್ಯ:  ನಟ ಅಂಬರೀಶ್ ಅಂತಿಮಯಾತ್ರೆ ಹಲವು ವಿಶೇಷತೆಗಳಿಗೂ ಸಾಕ್ಷಿಯಾಯಿತು. ಅಪ್ಪನಂತೆ ಮಗನೂ ಸಹ ವಿಕಲಾಂಗನೋರ್ವನಿಗೆ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದರೆ, ಭದ್ರತೆಯ ನಡುವೆಯೂ ಹೆಲಿಕಾಪ್ಟರ್‍ನತ್ತ ನುಗ್ಗಲೆತ್ನಿಸಿದ ವ್ಯಕ್ತಿಯೋರ್ವನಿಗೆ ಪೊಲೀಸರು ಗೂಸಾ ಕೊಟ್ಟ ಘಟನೆಯೂ ಜರುಗಿತು. ದುಖಃದಲ್ಲೂ ವಿಕಲಚೇತನನಿಗೆ ಹೆಲ್ಪ್..!? : ನಟ ಅಂಬರೀಶ್ ಇನ್ನು ನೆನಪು ಮಾತ್ರ. ಸಿನಿಮಾ, ರಾಜಕೀಯ ಸೇರಿದಂತೆ ಇನ್ನಿತರ ಕ್ಷೇತ್ರಗಳಲ್ಲಿ ಅವರು ಅವರದ್ದೇ ಛಾಪು ಮೂಡಿಸಿದ್ದರು. ಸ್ಟೈಲ್, ಮಾತು, ಸ್ನೇಹ, ಮಾನವೀಯತೆಗೆ ಅಂಬರೀಶ್ ಇನ್ನೊಂದು ಹೆಸರಾಗಿದ್ದರು. ಅಭಿಮಾನಿಗಳು ಅವರಿಗೆ ಕಲಿಯುಗದ ಕರ್ಣ…

ಅಂಬಿಗೆ ಗಣ್ಯರ ಕಂಬನಿ
ಮೈಸೂರು

ಅಂಬಿಗೆ ಗಣ್ಯರ ಕಂಬನಿ

November 26, 2018

ಅಂಬರೀಶ್ ಅವರ ನಿಧನ ನನಗೆ ಬಹಳ ನೋವುಂಟು ಮಾಡಿದೆ. ನನಗೆ ಮಾತ್ರವಲ್ಲದೇ ರಾಜ್ಯದ ಜನತೆಗೂ ಈ ಅಕಾಲಿಕ ಸಾವು ನೋವು ತಂದಿದೆ. ಅಂಬರೀಶ್ ಓರ್ವ ಸ್ನೇಹಜೀವಿ. ಅವರಿಗೆ ಇದ್ದಷ್ಟು ಸ್ನೇಹಿತರು ಬೇರೆ ಯಾರಿಗೂ ಇರಲು ಸಾಧ್ಯವಿಲ್ಲ. ಅವರು ನನಗೆ 1973 ರಿಂದಲೂ ಸ್ನೇಹಿತರು. ಅವರು ಮತ್ತು ನಾನು ಪರಸ್ಪರ ಗೌರವಿಸುತ್ತಿದ್ದೆವು. ಅಂಬರೀಶ್ ಚಿತ್ರರಂಗದ ದಿಗ್ಗಜರಲ್ಲಿ ಒಬ್ಬರು. ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಚಿತ್ರರಂಗದಲ್ಲಿ ಅವರು ಟ್ರಬಲ್ ಶೂಟರ್ ಆಗಿದ್ದರು. ಯಾವುದೇ ಸಮಸ್ಯೆ ಇದ್ದರೂ ಅವರ ಮುಖಂ ಡತ್ವದಲ್ಲೇ ಇತ್ಯರ್ಥವಾಗುತ್ತಿತ್ತು….

ಅಂಬರೀಶ್, ಜಾಫರ್ ಷರೀಫ್‍ಗೆ ಅಂತಿಮ ನಮನ
ಮೈಸೂರು

ಅಂಬರೀಶ್, ಜಾಫರ್ ಷರೀಫ್‍ಗೆ ಅಂತಿಮ ನಮನ

November 26, 2018

ಮೈಸೂರು: ಮಾಜಿ ಸಚಿವ, ನಟ ಅಂಬರೀಶ್ ಹಾಗೂ ಮಾಜಿ ರೈಲ್ವೆ ಸಚಿವ ಸಿ.ಕೆ. ಜಾಫರ್ ಷರೀಫ್ ಅವರ ನಿಧನದ ಹಿನ್ನೆಲೆಯಲ್ಲಿ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಅವರು ಇಬ್ಬರು ನಾಯಕರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಅಂತಿಮ ನಮನ ಸಲ್ಲಿಸಿದರು. ಚಾಮರಾಜ ಜೋಡಿ ರಸ್ತೆಯ ಶಾಂತಲಾ ಚಿತ್ರಮಂದಿ ರದ ಸಿಗ್ನಲ್ ಬಳಿ ನಿಲ್ಲಿಸಿದ್ದ ಬೃಹತ್ ಕಟೌಟ್‍ಗೆ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಪುಷ್ಪಾರ್ಚನೆ ಮಾಡಿದರು. ಈ ವೇಳೆ ಮೈಸೂರು ಪಾಲಿಕೆ ಸದಸ್ಯ ಲೋಕೇಶ್ ಪಿಯಾ ಸೇರಿದಂತೆ ಇತರೆ ಕಾಂಗ್ರೆಸ್ ಕಾರ್ಯಕರ್ತರು…

ಅಂಬರೀಶ್‍ಗೆ ಭಾವಪೂರ್ಣ ಶ್ರದ್ಧಾಂಜಲಿ
ಮೈಸೂರು

ಅಂಬರೀಶ್‍ಗೆ ಭಾವಪೂರ್ಣ ಶ್ರದ್ಧಾಂಜಲಿ

November 26, 2018

ತಿ.ನರಸೀಪುರ: ಕಳೆದ ರಾತ್ರಿಯಷ್ಟೇ ಹೃದಯಾಘಾತದಿಂದ ನಿಧನರಾದ ಮಾಜಿ ಸಂಸದ, ಸಚಿವ ಹಾಗೂ ಮೇರುನಟ ಅಂಬರೀಶ್ ಅವರ ನಿಧನಕ್ಕೆ ಪಟ್ಟಣದಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು. ಪಟ್ಟಣದ ಹಳೇ ತಿರುಮಕೂಡಲು ವೃತ್ತ ದಲ್ಲಿ ಜಮಾವಣೆಗೊಂಡ ಅಭಿಮಾನಿಗಳು ಹಾಗೂ ನಿವಾಸಿಗಳು ಅಕಾಲಿಕ ಮರಣ ಹೊಂದಿದ್ದ ಊರಿನ ಮೊಮ್ಮಗ ಹಿರಿಯ ರಾಜಕಾರಣಿ ಹಾಗೂ ಚಿತ್ರನಟ ನಟ ಅಂಬ ರೀಶ್ ಅವರ ಎತ್ತರದ ಕಟೌಟ್‍ಗೆ ಹಾರ ಹಾಕಿ ಪೂಜೆ ಸಲ್ಲಿಸಿ, ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು. ಪಿಟೀಲು ಚೌಡಯ್ಯ ವಂಶಸ್ಥರಾದ, ಕಸಬಾ ಪಿಎಸಿಸಿಎಸ್ ನಿರ್ದೇಶಕ…

ಮಂಜಿನ ನಗರಿಯಲ್ಲಿ ಅಂಬರೀಶ್ ಹೆಜ್ಜೆ…
ಕೊಡಗು

ಮಂಜಿನ ನಗರಿಯಲ್ಲಿ ಅಂಬರೀಶ್ ಹೆಜ್ಜೆ…

November 26, 2018

ಮಡಿಕೇರಿ:  ಕನ್ನಡ ಚಿತ್ರೋದ್ಯ ಮದ ಹೆಸರಾಂತ ಹಿರಿಯ ನಟ, ಮಾಜಿ ಸಚಿವ, ಕಾಂಗ್ರೆಸ್‍ನ ಹಿರಿಯ ಮುಖಂಡ, ಮಂಡ್ಯದ ಗಂಡು ಅಂಬರೀಷ್ ಅವರ ಅಗಲಿಕೆಗೆ ಕೊಡಗು ಜಿಲ್ಲೆ ಕೂಡ ಕಂಬನಿ ಮಿಡಿದಿದೆ. ಕೊಡಗು ಜಿಲ್ಲೆಯೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದ ಅಂಬ ರೀಷ್ ತಮ್ಮ ಬಿಡುವಿನ ಸಮಯವನ್ನು ಕಳೆಯಲು ಜಿಲ್ಲೆಯನ್ನೇ ಆಯ್ಕೆ ಮಾಡಿ ಕೊಳ್ಳುತ್ತಿದ್ದರು. ಸುಂಟಿಕೊಪ್ಪ ನಿವಾಸಿ, ಉಪಾಸಿ ಸಂಸ್ಥೆಯ ಮಾಜಿ ಅಧ್ಯಕ್ಷ, ಉದ್ಯಮಿ, ಕಾಫಿ ಬೆಳೆಗಾರ ವಿನೋದ್ ಶಿವಪ್ಪ ಅವರ ಸಹೋ ದರ ಆನಂದ್ ಬಸಪ್ಪ, ಕೆಪಿಸಿಸಿ ಮುಖಂಡ…

‘ಮಂಡ್ಯದ ಗಂಡು’ ಅಂಬಿಗೆ ಭಾವಪೂರ್ಣ ಶ್ರದ್ಧಾಂಜಲಿ
ಮಂಡ್ಯ

‘ಮಂಡ್ಯದ ಗಂಡು’ ಅಂಬಿಗೆ ಭಾವಪೂರ್ಣ ಶ್ರದ್ಧಾಂಜಲಿ

November 26, 2018

ಮಂಡ್ಯ : ಮಂಡ್ಯದ ಗಂಡು, ಚಿತ್ರ ನಟ, ರೆಬೆಲ್‍ಸ್ಟಾರ್ ಹಾಗೂ ಮಾಜಿ ಸಚಿವ ಅಂಬರೀಶ್ ನಿಧನಕ್ಕೆ ಅವರ ಅಭಿಮಾನಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳು ಜಿಲ್ಲಾದ್ಯಂತ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಮಂಡ್ಯ, ಮದ್ದೂರು, ಮಳವಳ್ಳಿ, ನಾಗಮಂಗಲ, ಕೆ.ಆರ್.ಪೇಟೆ, ಶ್ರೀರಂಗಪಟ್ಟಣ, ಪಾಂಡವ ಪುರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಅಂಬರೀಶ್ ನಿಧನಕ್ಕೆ ಜಿಲ್ಲೆಯ ಜನರು ಹಾಗೂ ಅಂಬಿ ಅಭಿಮಾನಿಗಳು ಅಂಬರೀಶ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಶ್ರದ್ಧಾಂ ಜಲಿ ಸಲ್ಲಿಸಿರುವ ಬಗ್ಗೆ ವರದಿಯಾಗಿದೆ. ಕೆ.ಆರ್.ಪೇಟೆ: ರೆಬೆಲ್‍ಸ್ಟಾರ್ ಅಂಬರೀಶ್ ನಿಧನಕ್ಕೆ ಪಟ್ಟಣ ಹಾಗೂ…

1 2
Translate »