ಅಂಬರೀಶ್ ನಿಧನಕ್ಕೆ ಸುತ್ತೂರು ಶ್ರೀಗಳ ಸಂತಾಪ
ಮೈಸೂರು

ಅಂಬರೀಶ್ ನಿಧನಕ್ಕೆ ಸುತ್ತೂರು ಶ್ರೀಗಳ ಸಂತಾಪ

November 26, 2018

ಮೈಸೂರು: ಅಂಬರೀಶ್ ಅವರು ನಿಧನರಾದುದು ಅತೀವ ವಿಷಾ ದದ ಸಂಗತಿ ಎಂದು ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳು ಅತೀವ ಸಂತಾಪ ವ್ಯಕ್ತಪಡಿಸಿದ್ದಾರೆ.

ಅವರು ಹುಟ್ಟಿದ್ದು, ಬೆಳೆದದ್ದು, ವ್ಯಾಸಂಗ ಮಾಡಿದ್ದು ಎಲ್ಲಾ ಮೈಸೂರಿನಲ್ಲಿ. ಅನಂತರ `ಮಂಡ್ಯದ ಗಂಡು’ ಎಂದು ಖ್ಯಾತರಾದರು. ಸುಪ್ರಸಿದ್ಧ ಚಲನಚಿತ್ರ ನಿರ್ದೇಶಕರಾದ ಪುಟ್ಟಣ್ಣ ಕಣಗಾಲ್, ಇವರಲ್ಲಿದ್ದ ಪ್ರತಿಭೆ ಯನ್ನು ಗಮನಿಸಿ `ನಾಗರಹಾವು’ ಚಿತ್ರದಲ್ಲಿ ಪಾತ್ರ ನೀಡಿ, ರಾತ್ರೋರಾತ್ರಿ ಕರ್ನಾಟಕದ ಆಕರ್ಷಣೆಯ ಕೇಂದ್ರಬಿಂದುವನ್ನಾಗಿ ಮಾಡಿ ದರು. ಕನ್ನಡ, ತಮಿಳು, ತೆಲುಗು, ಮಲ ಯಾಳಂ, ಹಿಂದಿ ಹೀಗೆ ಹಲವಾರು ಭಾಷೆ ಗಳಲ್ಲಿ ಅಭಿನಯಿಸಿ ಪ್ರೇಕ್ಷಕರ ಹಾಗೂ ವಿರ್ಮಶಕರ ಪ್ರಶಂಸೆಗೆ ಪಾತ್ರರಾದರು.

ಮೈಸೂರಿನ ಖ್ಯಾತ ಪಿಟೀಲು ವಾದಕ ರಾದ ಟಿ.ಪಿಟೀಲು ಚೌಡಯ್ಯನವರ ಮೊಮ್ಮಗ ಎಂದ ಮೇಲೆ ಕಲೆ ಎಂಬುದು ಅವರ ಧಮನಿಗಳಲ್ಲಿ ಹರಿಯುತ್ತಿದ್ದುದು ಸಹಜವೇ. `ಅಂತ’, `ರಂಗನಾಯಕಿ’, `ಪಡುವಾರಹಳ್ಳಿ ಪಾಂಡವರು’ ಮುಂತಾದ ಚಿತ್ರಗಳು ಅವರ ಕಲಾಜೀವನದ ಪ್ರಮುಖ ಮೈಲುಗಲ್ಲು ಗಳು ಎಂದು ಶ್ರೀಗಳು ಸ್ಮರಿಸಿದ್ದಾರೆ.

ಅಂಬರೀಶ್ ಅವರು ಒಳ್ಳೆಯ ಕಲಾವಿದ ರಾಗಿದ್ದಕ್ಕಿಂತಲೂ ಮಿಗಿಲಾಗಿ ಅತ್ಯಂತ ಒಳ್ಳೆಯ ಮನುಷ್ಯರಾಗಿದ್ದರು. ಸ್ನೇಹಜೀವಿ, ಅಜಾತಶತ್ರು, ಮಾನವ ಪ್ರೇಮಿಯಾಗಿ ದ್ದರು. ಲೈಟ್‍ಬಾಯ್‍ನಿಂದ ಹಿಡಿದು ನಿರ್ದೇ ಶಕರವರೆಗೆ ಎಲ್ಲರನ್ನೂ ಒಂದೇ ರೀತಿ ಪ್ರೀತಿ -ವಾತ್ಸಲ್ಯಗಳಿಂದ ನೋಡುತ್ತಿದ್ದರು. ಸಹ ಕಲಾವಿದರ ಕಷ್ಟಗಳಿಗೆ ಸ್ಪಂದಿಸುತ್ತಿದ್ದು, `ಚಿತ್ರ ರಂಗದ ಕರ್ಣ’ ಎಂದೇ ಗುರುತಿಸಲ್ಪಟ್ಟಿ ದ್ದರು ಎಂದು ಗುಣಗಾನ ಮಾಡಿದ್ದಾರೆ.

ರಾಜಕೀಯದಲ್ಲಿಯೂ ತಮ್ಮದೇ ಛಾಪು ಮೂಡಿಸಿದ್ದರು. ಶಾಸಕರಾಗಿ, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಲ್ಲಿ ಸಚಿವರಾಗಿದ್ದರು. ಕಾವೇರಿ ನದಿ ನೀರಿನ ಸಮಸ್ಯೆಯ ಸಂದರ್ಭ ದಲ್ಲಿ ರೈತರ ಪರವಾಗಿ ನಿಂತು ಸಚಿವ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿದ್ದರು. ವಿವಾದಾ ತೀತರಾಗಿ ಬದುಕಿದ ಈ ಕಲಾವಿದರಿಗೆ ಎಲ್ಲಾ ಪಕ್ಷಗಳಲ್ಲಿಯೂ ಸ್ನೇಹಿತರಿರುವುದು ಅವರ ಚಿಂತನೆಯ ವೈಶಾಲ್ಯಕ್ಕೆ ಸಾಕ್ಷಿಯಾ ಗಿದೆ. ಕರ್ನಾಟಕ ಫಿಲಂ ಚೇಂಬರ್‍ನ ಅಧ್ಯಕ್ಷ ರಾಗಿ ಅವರು ಇಡೀ ಚಿತ್ರರಂಗ ಮೆಚ್ಚುವಂತೆ ಕಾರ್ಯನಿರ್ವಹಿಸಿದರು. ಅಂಬರೀಶ್ ಅವರ ನಿಧನದಿಂದ ನಾಡು ಒಬ್ಬ ಶ್ರೇಷ್ಠ ಕಲಾವಿದ ರನ್ನು ಹಾಗೂ ನಾಡು-ನುಡಿ-ಜನತೆಯನ್ನು ತುಂಬು ಪ್ರೀತಿಯಿಂದ ಕಾಣುತ್ತಿದ್ದ ಹೃದಯ ವಂತರನ್ನು ಕಳೆದುಕೊಂಡಿದೆ. ಈ ನಿರ್ವಾತ ವನ್ನು ತುಂಬುವುದು ಕಷ್ಟ ಸಾಧ್ಯವೇ ಸರಿ. ದಿವಂಗತರ ಆತ್ಮಕ್ಕೆ ಚಿರಶಾಂತಿಯನ್ನು, ಅವರ ನಿಧನದಿಂದ ಕುಟುಂಬ ವರ್ಗದವರು, ಬಂಧು -ಬಾಂಧವರು, ಲಕ್ಷೋಪಲಕ್ಷ ಅಭಿಮಾನಿ ಗಳಿಗೆ ಆಗಿರುವ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತನು ಕರುಣಿಸಲೆಂದು ಹಾರೈಸುತ್ತೇವೆ ಎಂದು ಶ್ರೀಗಳು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಜಾಫರ್ ಷರೀಫ್ ನಿಧನಕ್ಕೆ ಸಂತಾಪ: ಕೇಂದ್ರದ ಮಾಜಿ ರೈಲ್ವೆ ಸಚಿವರಾಗಿದ್ದ ಸಿ.ಕೆ. ಜಾಫರ್ ಷರೀಫ್ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‍ನ ಮುಂಚೂಣಿ ನಾಯಕ ರಲ್ಲೊಬ್ಬರಾಗಿದ್ದರು. ಅವರ ಸಾವು ವಿಷಾ ದದ ಸಂಗತಿ ಎಂದು ಸುತ್ತೂರು ಶ್ರೀಗಳು ಸಂತಾಪ ಸೂಚಿಸಿದ್ದಾರೆ. ಮಾಜಿ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ, ಎಸ್.ನಿಜ ಲಿಂಗಪ್ಪ ನಂತಹವರ ಗರಡಿಯಲ್ಲಿ ಬೆಳೆ ದವರು. ಪಿ.ವಿ.ನರಸಿಂಹರಾವ್ ಅವರ ಸಂಪುಟದಲ್ಲಿ ರೈಲ್ವೇ ಸಚಿವರಾಗಿ ಸೇವೆ ಸಲ್ಲಿಸಿ, ಸಾಕಷ್ಟು ಜನಪ್ರಿಯ ಯೋಜನೆ ಗಳನ್ನು ಜಾರಿಗೆ ತಂದಿದ್ದರು. ತಮ್ಮ ಕೆಲಸ ದಲ್ಲಿ ಸಾಮಾಜಿಕ ಕಳಕಳಿ, ಬದ್ಧತೆಯನ್ನು ಹೊಂದಿದ್ದ ರಾಜಕೀಯ ಮುತ್ಸದ್ಧಿಗಳಾಗಿದ್ದರು. ಸ್ನೇಹಜೀವಿ, ಹೃದಯ ವೈಶಾಲ್ಯತೆ ಹೊಂದಿದ್ದ ಷರೀಫ್ ಅವರು ಉತ್ತಮ ವಾಗ್ಮಿಗಳಾಗಿ ದ್ದರು. ತಮ್ಮ ನೇರ ನಡೆ-ನುಡಿ, ವ್ಯಕ್ತಿತ್ವ ದಿಂದಲೇ ಸಾಕಷ್ಟು ಜನಪ್ರಿಯತೆ ಗಳಿಸಿ ದ್ದರು. ಇಂತಹ ಹಿರಿಯ ನಾಯಕ, ಉತ್ತಮ ಸಂಸದೀಯ ಪಟುವನ್ನು ಕಳೆದುಕೊಂಡ ನಾಡಿನ ರಾಜಕೀಯ ಕ್ಷೇತ್ರ ಬಡವಾಗಿದೆ.

ದಿವಂಗತರ ಆತ್ಮಕ್ಕೆ ಚಿರಶಾಂತಿಯನ್ನು, ಅವರ ಬಂಧು-ಬಾಂಧವರು ಹಾಗೂ ಅವರ ಹಿತೈಷಿಗಳಿಗೆ, ಅಭಿಮಾನಿಗಳಿಗೆ ಅವರ ಅಗಲಿಕೆಯ ದುಃಖವನ್ನು ಭರಿ ಸುವ ಶಕ್ತಿಯನ್ನು ಭಗವಂತನು ನೀಡ ಲೆಂದು ಹಾರೈಸುತ್ತೇವೆ ಎಂದು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

Translate »