ಜಿಲ್ಲಾದ್ಯಂತ ಅಂಬಿ 12ನೇ ದಿನದ ಕಾರ್ಯ ಆಚರಣೆ
ಮಂಡ್ಯ

ಜಿಲ್ಲಾದ್ಯಂತ ಅಂಬಿ 12ನೇ ದಿನದ ಕಾರ್ಯ ಆಚರಣೆ

December 6, 2018

ಮಂಡ್ಯ: ದಿವಂಗತ ಮಾಜಿ ಸಚಿವ ರೆಬಲ್ ಸ್ಟಾರ್ ಅಂಬರಿಶ್ ಅವರ 12ನೇ ದಿನದ ಪುಣ್ಯ ತಿಥಿಯನ್ನು ಅಂಬರೀಶ್ ಅಭಿಮಾನಿಗಳು ಜಿಲ್ಲಾದ್ಯಂತ ಬುಧವಾರ ಆಚರಿಸಿದರು.

ಮಂಡ್ಯ, ಮದ್ದೂರು, ಪಾಂಡವಪುರ, ಶ್ರೀರಂಗಪಟ್ಟಣ ತಾಲೂಕು ಕೇಂದ್ರಗಳು ಮಾತ್ರವಲ್ಲದೆ ಹಳ್ಳಿ ಹಳ್ಳಿಗಳಲ್ಲಿಯೂ ಅಂಬ ರೀಶ್ ತಿಥಿ ಕಾರ್ಯದ ವಿಧಿ ವಿಧಾನಗಳನ್ನು ಆಚರಿಸುವ ಮೂಲಕ ಅನ್ನದಾನ ನಡೆಸಿರುವ ಬಗ್ಗೆ ವರದಿಯಾಗಿದೆ.
ಮಂಡ್ಯ ತಾಲೂಕಿನ ಉಪ್ಪುರುಕನ ಹಳ್ಳಿ ಯಲ್ಲಿ ಬಿಜೆಪಿ ಶಿವಕುಮಾರಾಧ್ಯ ಮತ್ತು ಪಕ್ಷಾತೀತವಾಗಿ ಅಂಬಿ ಅಭಿಮಾನಿಗಳು ಅಂಬರೀಶ್ ಭಾವಚಿತ್ರವನ್ನಿಟ್ಟು ತಿಥಿ ಕಾರ್ಯ ಮಾಡಿರುವ ಅಭಿಮಾನಿಗಳು. ಸಂಪ್ರದಾಯ ದಂತೆ ಅಂಬರೀಶ್‍ಗೆ ಪ್ರಿಯ ಆಹಾರ, ಕುಡಿ ಯುತ್ತಿದ್ದ ಮದ್ಯಗಳು, ತಿಂಡಿ ತಿನಿಸುಗಳನ್ನು ಫೋಟೋ ಬಳಿ ಇಟ್ಟು, ಪೂಜೆ ಸಲ್ಲಿಸಿ ನಂತರ ಅನ್ನಸಂತರ್ಪಣೆ ಮಾಡಿದರು.
ಮದ್ದೂರು ತಾಲೂಕಿನ ಮಾದರಹಳ್ಳಿ ಸಮೀಪದ ಶಿಂಗಟಗೆರೆಯಲ್ಲಿ ಅಂಬಿ ಪುಣ್ಯ ತಿಥಿ ಕಾರ್ಯವನ್ನು ನೆರವೇರಿಸಲಾಯಿತು. ಮಧ್ಯಾಹ್ನ 12 ಗಂಟೆಗೆ ಅಂಬಿ ಇಷ್ಟದ ತಿನಿಸುಗಳನ್ನು ಎಡೆ ಹಾಕಿ ತಿಥಿ ಕಾರ್ಯ ಮಾಡಿದ ಅಂಬಿ ಅಭಿಮಾನಿಗಳು. ಅನ್ನಸಂತ ರ್ಪಣೆಯನ್ನು ಏರ್ಪಡಿಸಿದ್ದರು.

ಕೋಡೇಸ್ ರಂ, 100 ಪೇಪರ್ ಮದ್ಯದ ಬಾಟಲ್,ಹೆಚ್‍ಆರ್‍ಡಿ ಬ್ರಾಂಡ್‍ಮದ್ಯ, ಇಸ್ಪಿಟ್ ಕಾರ್ಡ್, ಸಿಗರೇಟ್ ಪ್ಯಾಕ್ ಸೇರಿ ದಂತೆ ತಿಂಡಿ ತಿನಿಸುಗಳನ್ನು ಎಡೆಯಲ್ಲಿ ಇಡ ಲಾಗಿತ್ತು. ಗ್ರಾಮದಲ್ಲಿ ಅರಸುಗಳು ಇರುವು ದರಿಂದ ಸಸ್ಯಹಾರ ಅಡುಗೆಯನ್ನೂ ಮಾಡ ಲಾಗಿತ್ತು. ಪೂಜೆಯ ವೇಳೆ ಶಶಿಕುಮಾರ್ ಎಂಬವರು ಮುಡಿ ಕೊಟ್ಟರು.

ಮದ್ದೂರು ತಾಲೂಕಿನ ತೈಲೂರು ಗ್ರಾಮ ದಲ್ಲಿ ಅನ್ನದಾನ, ಗೀತನಮನ ಕಾರ್ಯ ಕ್ರಮವನ್ನು ಏರ್ಪಡಿಸಲಾಗಿತ್ತು. ಶ್ರೀರಂಗ ಪಟ್ಟಣ ತಾಲೂಕಿನ, ಬಲ್ಲೇನಹಳ್ಳಿ ಗ್ರಾಮ ದಲ್ಲಿ ಅಂಬಿಗೆ ಪ್ರಿಯವಾದ ನಾಟಿ ಕೋಳಿ, ಮುದ್ದೆ ಮಾಡಿಸಿ ತಿಥಿ ಕಾರ್ಯ ನಡೆಸಲಾ ಯಿತು. ಈ ವೇಳೆ ಅಂಬಿ ಮೇಲಿನ ಅಭಿಮಾನ ಕ್ಕಾಗಿ ತಲೆ ಬೋಳಿಸಿಕೊಂಡು, ಸಾವಿರಾರು ಜನರಿಗೆ ಅನ್ನದಾನ ಮಾಡಲಾಯಿತು.
ಗೆಜ್ಜಲಗೆರೆ ಗ್ರಾಮದಲ್ಲಿ ಡಿ.6 ರಂದು ಬೃಹತ್ ಅನ್ನದಾನ ಮಾಡುವ ಮೂಲಕ ಗ್ರಾಮಸ್ಥರು ಶಾಸ್ತ್ರೋಕ್ತವಾಗಿ ತಿಥಿಕಾರ್ಯ ನೆರವೇರಿಸಲಿದ್ದಾರೆ. ಅಲ್ಲದೇ ಅಂಬಿ ಚಿತಾಭಸ್ಮ ತಂದು ಪೂಜೆ ಸಲ್ಲಿಸಿ ಸುಮಾರು 5 ಸಾವಿರ ಜನರಿಗೆ ಮಟನ್ ಊಟದ ವ್ಯವಸ್ಥೆ ಮಾಡಲಿದ್ದಾರೆ. ಈ ವೇಳೆ ಗೀತನಮನ, ರಕ್ತದಾನ ಹೀಗೆ ಹಲವು ಕಾರ್ಯಕ್ರಮಗಳನ್ನು ಗ್ರಾಮಸ್ಥರು ಹಮ್ಮಿಕೊಂಡಿದ್ದಾರೆ. ಮನೆ ಮನೆಗೆ, ತೆರಳಿ ತಿಥಿ ಕಾರ್ಡ್ ಹಂಚಿ, ಡಿ.6 ರಂದು ತಿಥಿ ಕಾರ್ಯಕ್ರಮಕ್ಕೆ ಬರುವಂತೆ ಮನವಿ ಮಾಡುತ್ತಿರುವುದು ಕಂಡು ಬಂತು.

Translate »