ರೆಬೆಲ್ ಸ್ಟಾರ್ ಅಂಬರೀಶ್‍ಗೆ ಆತಿಥ್ಯ: ಇನ್ನು ನೆನಪಷ್ಟೆ!
ಮೈಸೂರು

ರೆಬೆಲ್ ಸ್ಟಾರ್ ಅಂಬರೀಶ್‍ಗೆ ಆತಿಥ್ಯ: ಇನ್ನು ನೆನಪಷ್ಟೆ!

November 26, 2018

ಮೈಸೂರು: ಒರಟು ಮಾತು, ಕೆಂಗಣ್ಣಿನಲ್ಲಿ ಗದರಿಸುತ್ತಿದ್ದ ಅಂಬ ರೀಶ್ ಗುಂಡಿಗೆಯೊಳಗಿದ್ದ ಮನಸ್ಸು ಮಾತ್ರ ಮಲ್ಲಿಗೆಯಷ್ಟೇ ಮೃದುವಾಗಿತ್ತು. ಯಾವುದನ್ನೂ ತಲೆಗೆ ಹಚ್ಚಿಕೊಳ್ಳದೆ ಎಲ್ಲರನ್ನೂ ಒಂದೇ ರೀತಿ ಕಾಣುತ್ತಿದ್ದ ಸ್ನೇಹಜೀವಿ ಅವರಾಗಿದ್ದರು. ದೇಶ-ವಿದೇಶಗಳಲ್ಲಿ ಸ್ನೇಹಸೌಧ ಕಟ್ಟಿರುವ ಅಂಬರೀಶ್, ನಡೆದು ಬಂದ ಹಾದಿಯನ್ನೂ ಎಂದೂ ಮರೆತವರಲ್ಲ. ಐಷಾರಾಮಿ ಜಗತ್ತು ಮುಂದಿದ್ದರೂ, ಹಿಂದಿನ ನಂಟನ್ನು ಕಾಪಾಡಿಕೊಂಡು ಬಂದಿದ್ದರು. ಹಾಗೆಯೇ ಮೈಸೂರಿನಲ್ಲಿ ಅಂಬರೀಶ್‍ಗೆ ಪ್ರಿಯವಾದ ಸಾಕಷ್ಟು ಸ್ಥಳಗಳಿದ್ದು, ಅಲ್ಲೆಲ್ಲಾ ಈಗ ಉಳಿದಿರುವುದು ಅಂಬಿಯ ನೆನಪು ಮಾತ್ರ.

ಮೊದಲ ಕಸ್ಟಮರ್: ಮೈಸೂರಿನ ಮಂಡಿ ಮೊಹಲ್ಲಾದಲ್ಲಿರುವ ಹನುಮಂತು ಹೋಟೆಲ್‍ಗೆ ಅಂಬರೀಶ್ ರೆಗ್ಯೂಲರ್ ಕಸ್ಟಮರ್ ಆಗಿದ್ದ ರಂತೆ. ಚಾಮರಾಜಪುರಂ ರೈಲ್ವೇ ನಿಲ್ದಾ ಣದ ಬಳಿಯಿರುವ ಟೆನ್ನಿಸ್ ಕೋರ್ಟ್ ನಲ್ಲಿ ಆಟವಾಡಿ, ನಾಲ್ಕೈದು ಗೆಳೆಯರೊಂ ದಿಗೆ ಸೈಕಲ್‍ನಲ್ಲಿ ಹನುಮಂತು ಹೋಟೆಲ್‍ಗೆ ಹೋಗುತ್ತಿದ್ದರಂತೆ. ಇನ್ನೂ ಬಾಗಿಲು ತೆಗೆಯುವ ಮುನ್ನವೇ ಜಮಾಯಿಸಿ, ಇಷ್ಟವಾದ ಖಾದ್ಯ ಸವಿಯುತ್ತಿದ್ದರಂತೆ. ಅಂಬರೀಶ್ ನಿತ್ಯವೂ ನಮ್ಮ ಹೋಟೆಲ್‍ನ ಮೊದಲ ಕಸ್ಟಮರ್ ಎಂದು ನಮ್ಮ ತಾತ ಹನುಮಂ ತಪ್ಪ ಹೇಳುತ್ತಿದ್ದರು ಎಂದು ಮಾಲೀಕ ವಿಶಾಲ್ ಸ್ಮರಿಸಿಕೊಂಡರು. ಭಾನುವಾರ ನಾಟಿ ಕೋಳಿ ಪಲಾವ್ ಹಾಗೂ ನಾಟಿ ಕೋಳಿ ಸಾರು ವಿಶೇಷವಾಗಿ ಸವಿಯುತ್ತಿದ್ದರು. ಉಳಿದ ದಿನಗಳಲ್ಲಿ ಕೈಮಾ ಉಂಡೆ, ಮಟನ್ ಪಲಾವ್ ಸೇವಿಸುತ್ತಿದ್ದರು. ಕೈಮಾ ಉಂಡೆಯನ್ನು ಬಹಳ ಇಷ್ಟಪಡುತ್ತಿದ್ದರಂತೆ. ಮೈಸೂರಿಗೆ ಬಂದಾಗಲೆಲ್ಲಾ ಹನುಮಂತು ಹೋಟೆಲ್ ಪಲಾವ್ ತಿನ್ನದೆ ಹೋಗುತ್ತಿರಲಿಲ್ಲ. ನಮ್ಮ ತಾತ ಹನುಮಂತು ಹಾಗೂ ನನ್ನ ತಂದೆ ಪರಮೇಶ್ ಅವರಿದ್ದಾಗ ಅಂಬರೀಶಣ್ಣ ಹೋಟೆಲ್‍ಗೆ ಬರುತ್ತಿದ್ದರು. ನಂತರ ಅವರು ಉಳಿದುಕೊಳ್ಳುತ್ತಿದ್ದ ಹೋಟೆಲ್‍ಗೆ ಪಾರ್ಸಲ್ ತರಿಸಿಕೊಳ್ಳುತ್ತಿದ್ದರು. ಒಮ್ಮೆ ಮಂಡ್ಯದಲ್ಲಿ ರುವ ಅವರ ಮನೆಗೂ ಪಾರ್ಸಲ್ ತೆಗೆದು ಕೊಂಡು ಹೋಗಿದ್ದೆವು. ತುಂಬಾ ಖುಷಿ ಪಟ್ಟಿ ದ್ದರು. ಕ್ರೇಜಿಸ್ಟಾರ್ ರವಿಚಂದ್ರನ್ ಅವರನ್ನು ಹೋಟೆಲ್‍ಗೆ ಪರಿಚಯಿಸಿದವರು ಅವರೇ ಎನ್ನುತ್ತಾರೆ ವಿಶಾಲ್.

ಕಿಂಗ್ಸ್‍ಕೋರ್ಟ್‍ನಲ್ಲಿ ಕಾಫಿ: ಕಿಂಗ್ಸ್ ಕೋರ್ಟ್ ಹೋಟೆಲ್ ಮಾಲೀಕ ವಿವೇಕ್ ಹಾಗೂ ಅಂಬರೀಶ್ ಪಕ್ಕಾ ದೋಸ್ತಿಗಳು. ಆರಂಭದಿಂದಲೂ ಕಿಂಗ್ಸ್‍ಕೋರ್ಟ್ ಹೋಟೆಲ್ ಎಂದರೆ ಅಂಬರೀಶ್‍ಗೆ ಅಚ್ಚು ಮೆಚ್ಚಾಗಿತ್ತು. ಅಂಬರೀಶ್ ಅವರಿಗಾಗಿಯೇ ಪ್ರತ್ಯೇಕ ಕೊಠಡಿಯನ್ನು ಕಾಯ್ದಿರಿಸಲಾಗಿತ್ತು.

ಮೈಸೂರಿನ ಯಾವ ಹೋಟೆಲ್‍ನಲ್ಲಿ ಉಳಿದುಕೊಂಡರೂ, ಕಿಂಗ್ಸ್‍ಕೋರ್ಟ್‍ಗೆ ಭೇಟಿ ನೀಡುವುದನ್ನು ಮರೆಯುತ್ತಿರಲಿಲ್ಲ. ಎಲ್ಲಾ ಸಿಬ್ಬಂದಿಗಳೊಂದಿಗೆ ಆತ್ಮೀಯ ವಾಗಿ ನಡೆದುಕೊಳ್ಳುತ್ತಿದ್ದರು.

ನಾನು ಸ್ಟಾರು, ಪೊಲಿಟಿಷಿಯನ್ ಎಂಬ ಅಹಂ ಕಿಂಚಿತ್ತೂ ಇರಲಿಲ್ಲ. ತುಂಬಾ ಸರಳ ಜೀವಿ. ಫಿಲ್ಟರ್ ಕಾಫಿ ಹಾಗೂ ಉಪ್ಪಿಟ್ಟು ಕೇಳಿ ಮಾಡಿಸಿಕೊಳ್ಳುತ್ತಿದ್ದರಂತೆ. ಮೈಲಾರಿ ಹೋಟೆಲ್‍ನ ಬೆಣ್ಣೆ ದೋಸೆ ಯನ್ನು ರೋಸ್ಟ್ ಮಾಡಿಸಿಕೊಂಡು ಸವಿ ಯುತ್ತಿದ್ದರು. ಮೈಸೂರಿಗೆ ಬಂದಾಗಲೆಲ್ಲಾ 20 ದೋಸೆ, ಗಟ್ಟಿಚಟ್ನಿ ಪಾರ್ಸಲ್ ತರಿಸಿ ಕೊಳ್ಳುತ್ತಿದ್ದರಂತೆ. ಮೈಸೂರಿನ ದಾಸಪ್ರಕಾಶ್ ಹೋಟಲ್‍ನ ಬಾದಾಮಿ ಹಲ್ವಾ ಬಹಳ ಇಷ್ಟವಾದ ತಿನಿಸಾಗಿತ್ತು.

Translate »