ದುಖಃದಲ್ಲೂ ಅಪ್ಪನಂತೆಯೇ ಮಾನವೀಯತೆ ಮೆರೆದ ಅಭಿಷೇಕ್..!
ಮೈಸೂರು

ದುಖಃದಲ್ಲೂ ಅಪ್ಪನಂತೆಯೇ ಮಾನವೀಯತೆ ಮೆರೆದ ಅಭಿಷೇಕ್..!

November 26, 2018

ಮಂಡ್ಯ:  ನಟ ಅಂಬರೀಶ್ ಅಂತಿಮಯಾತ್ರೆ ಹಲವು ವಿಶೇಷತೆಗಳಿಗೂ ಸಾಕ್ಷಿಯಾಯಿತು. ಅಪ್ಪನಂತೆ ಮಗನೂ ಸಹ ವಿಕಲಾಂಗನೋರ್ವನಿಗೆ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದರೆ, ಭದ್ರತೆಯ ನಡುವೆಯೂ ಹೆಲಿಕಾಪ್ಟರ್‍ನತ್ತ ನುಗ್ಗಲೆತ್ನಿಸಿದ ವ್ಯಕ್ತಿಯೋರ್ವನಿಗೆ ಪೊಲೀಸರು ಗೂಸಾ ಕೊಟ್ಟ ಘಟನೆಯೂ ಜರುಗಿತು.

ದುಖಃದಲ್ಲೂ ವಿಕಲಚೇತನನಿಗೆ ಹೆಲ್ಪ್..!? : ನಟ ಅಂಬರೀಶ್ ಇನ್ನು ನೆನಪು ಮಾತ್ರ. ಸಿನಿಮಾ, ರಾಜಕೀಯ ಸೇರಿದಂತೆ ಇನ್ನಿತರ ಕ್ಷೇತ್ರಗಳಲ್ಲಿ ಅವರು ಅವರದ್ದೇ ಛಾಪು ಮೂಡಿಸಿದ್ದರು. ಸ್ಟೈಲ್, ಮಾತು, ಸ್ನೇಹ, ಮಾನವೀಯತೆಗೆ ಅಂಬರೀಶ್ ಇನ್ನೊಂದು ಹೆಸರಾಗಿದ್ದರು. ಅಭಿಮಾನಿಗಳು ಅವರಿಗೆ ಕಲಿಯುಗದ ಕರ್ಣ ಅನ್ನೋ ಬಿರುದು ನೀಡಿದ್ದರು. ಈಗ ಅವರ ಮಗ ಅಭಿಷೇಕ್ ಕೂಡಾ ಮಾನವೀಯತೆ ಮೆರೆದಿದ್ದಾರೆ.

ಇಂದು ಸಂಜೆ ಅಂಬರೀಶ್ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆಂದು ನಗರದ ಸರ್‍ಎಂವಿ ಕ್ರೀಡಾಂಗಣದಲ್ಲಿ ಅವಕಾಶ ಮಾಡಿಕೊಡಲಾಗಿತ್ತು. ಸಾವಿರಾರು ಅಭಿಮಾನಿಗಳು ಒಮ್ಮೆಯೇ ಕ್ರೀಡಾಂಗಣದ ಒಳಗೆ ನುಗ್ಗಿ ಬಂದ್ರು. ಈ ವೇಳೆ, ನೂಕು ನುಗ್ಗಲು ಏರ್ಪಟ್ಟಿದೆ. ನೆಚ್ಚಿನ ನಟನನ್ನು ನೋಡಲು ವಿಶೇಷ ಚೇತನ ಒಬ್ಬರು ಆಗಮಿಸಿದ್ದರು. ಆದ್ರೆ ನೂಕುನುಗ್ಗಲು ಉಂಟಾದ  ಹಿನ್ನೆಲೆ, ತನಗೆ ಅಂಬರೀಶ್ ಪಾರ್ಥಿವ ಶರೀರದ ದರ್ಶನ ಸಿಗೋದಿಲ್ಲ ಅಂತಾ ವಾಪಸ್ ಆಗುತ್ತಿದ್ರು. ಇದನ್ನು ಗಮನಿಸಿದ ಅಭಿಷೇಕ್ ಅಂಬರೀಶ್, ವಿಶೇಷ ಚೇತನನ್ನು ಕರೆದು ಪಾರ್ಥಿವ ಶರೀರದ ದರ್ಶನ ಮಾಡಿಸಿದ್ದರು.

ಹಾಡಿನ ಮೂಲಕ ಕಲಿಯುಗದ ಕರ್ಣನಿಗೆ ನಮನ: ಕಣ್ಮರೆಯಾದ ಕಲಿಯುಗದ ಕರ್ಣನ ಸ್ಮರಣಾರ್ಥ ಯರಹಳ್ಳಿ ಪುಟ್ಟಸ್ವಾಮಿ ತಂಡ ವಿಶಿಷ್ಟವಾದ ಭಜನೆ ಕಾರ್ಯಕ್ರಮ ಏಪರ್ಡಿಸಿತ್ತು. ಅಂಬಿ ಅಗಲಿದ ಸುದ್ದಿ ತಿಳಿದಾಕ್ಷಣ ಅಭಿಮಾನಿ ಬಳಗ ಆಸ್ಪತ್ರೆಯನ್ನು ಸುತ್ತುವರೆದಿತ್ತು. ಅವರನ್ನು ಕೊನೆ ಸಾರಿ ನೋಡೋಕೆ ಹಾತೊರೆಯುತ್ತಿತ್ತು. ಅಲ್ಲದೇ ಅಭಿಮಾನಿಗಳು ಮಂಡ್ಯದ ಗಂಡಿನ ಕೊನೆ ದರ್ಶನ, ಅಂತ್ಯಕ್ರಿಯೆ ಮಂಡ್ಯದಲ್ಲೇ ಆಗಬೇಕು ಎಂದು ಮೊರೆಯಿಟ್ಟರು.

ವ್ಯಕ್ತಿಗೆ ಪೊಲೀಸರಿಂದ ಗೂಸಾ: ಈ ಮಧ್ಯೆ ಭದ್ರತೆಯನ್ನು ಬೇಧಿಸಿ ಹೆಲಿಕಾಪ್ಟರ್‍ನತ್ತ ನುಗ್ಗಿ ಓಡಿಬಂದ ಅಭಿಮಾನಿಯೊಬ್ಬನಿಗೆ ಪೊಲೀಸರು ಕಪಾಳಮೋಕ್ಷ ಮಾಡಿದ ಘಟನೆಯೂ ನಡೆಯಿತು.

ಲಘು ಲಾಠಿ ಪ್ರಹಾರ

ಮಂಡ್ಯ: ನಗರದ ಸರ್. ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂ ಗಣದಲ್ಲಿ ಅಂಬರೀಶ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ವೇಳೆ ನೂಕುನುಗ್ಗಲು ಉಂಟಾಗಿ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಆಗಾಗ ಲಘು ಲಾಠಿ ಪ್ರಹಾರ ನಡೆಸಿದರು. ಭಾನುವಾರ ಸಂಜೆ 5 ಗಂಟೆಯಿಂದ ಅಂಬರೀಶ್ ಅವರ ಪಾರ್ಥಿವ ಶರೀರದ ಸಾರ್ವಜನಿಕ ದರ್ಶನಕ್ಕೆ ಜಿಲ್ಲಾಡಳಿತದಿಂದ ವ್ಯವಸ್ಥೆ ಮಾಡ ಲಾಗಿದ್ದು, ಜಿಲ್ಲೆಯ ವಿವಿಧೆಡೆಯಿಂದ ಲಕ್ಷಾಂತರ ಜನರು ಕ್ರೀಡಾಂಗಣ ದತ್ತ ಬರುತ್ತಿದ್ದು, ಜನರನ್ನು ನಿಯಂತ್ರಿಸಲು ಪೊಲೀಸರು ಹರ ಸಾಹಸಪಡುತ್ತಿದ್ದಾರೆ. ರಾತ್ರಿ 11.30 ಆದರೂ, ಜನ ಸಂದಣಿ ಮತ್ತಷ್ಟು ಹೆಚ್ಚಳವಾಗಿದೆ. ಈ ವೇಳೆ ಕೆಲ ವರು ಗಣ್ಯರ ಪ್ರವೇಶ ದ್ವಾರದಲ್ಲಿ ತೆರಳಲು ಮುಂದಾಗಿದ್ದಾರೆ. ಇದ ರಿಂದ ಕೆಲಕಾಲ ಗೊಂದಲದ ವಾತಾ ವರಣ ಉಂಟಾಗಿ ಅಭಿಮಾನಿ ಗಳನ್ನು ನಿಯಂತ್ರಿಸಲು ಪೊಲೀ ಸರು ಲಘು ಲಾಠಿ ಪ್ರಹಾರ ನಡೆಸಿದರು.

Translate »