ಅಂಬಿಗೆ ಗಣ್ಯರ ಕಂಬನಿ
ಮೈಸೂರು

ಅಂಬಿಗೆ ಗಣ್ಯರ ಕಂಬನಿ

November 26, 2018

ಅಂಬರೀಶ್ ಅವರ ನಿಧನ ನನಗೆ ಬಹಳ ನೋವುಂಟು ಮಾಡಿದೆ. ನನಗೆ ಮಾತ್ರವಲ್ಲದೇ ರಾಜ್ಯದ ಜನತೆಗೂ ಈ ಅಕಾಲಿಕ ಸಾವು ನೋವು ತಂದಿದೆ. ಅಂಬರೀಶ್ ಓರ್ವ ಸ್ನೇಹಜೀವಿ. ಅವರಿಗೆ ಇದ್ದಷ್ಟು ಸ್ನೇಹಿತರು ಬೇರೆ ಯಾರಿಗೂ ಇರಲು ಸಾಧ್ಯವಿಲ್ಲ. ಅವರು ನನಗೆ 1973 ರಿಂದಲೂ ಸ್ನೇಹಿತರು. ಅವರು ಮತ್ತು ನಾನು ಪರಸ್ಪರ ಗೌರವಿಸುತ್ತಿದ್ದೆವು. ಅಂಬರೀಶ್ ಚಿತ್ರರಂಗದ ದಿಗ್ಗಜರಲ್ಲಿ ಒಬ್ಬರು. ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಚಿತ್ರರಂಗದಲ್ಲಿ ಅವರು ಟ್ರಬಲ್ ಶೂಟರ್ ಆಗಿದ್ದರು. ಯಾವುದೇ ಸಮಸ್ಯೆ ಇದ್ದರೂ ಅವರ ಮುಖಂ ಡತ್ವದಲ್ಲೇ ಇತ್ಯರ್ಥವಾಗುತ್ತಿತ್ತು. ಚಿತ್ರರಂಗದವರೂ ಕೂಡ ಅವರ ಮಾತಿಗೆ ಬೆಲೆ ಕೊಡು ತ್ತಿದ್ದರು. ರಾಜಕಾರಣದಲ್ಲಿ ಅವರು ಸಜ್ಜನರಾಗಿದ್ದು, ಜನಪರ ಕಾಳಜಿಯನ್ನು ಹೊಂದಿದ್ದರು. ನನ್ನ ಸಂಪುಟದಲ್ಲಿ ವಸತಿ ಸಚಿವರಾಗಿ ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ಇವರ ನಿಧನ ದಿಂದಾಗಿ ಚಿತ್ರರಂಗ ಮತ್ತು ರಾಜಕೀಯ ಕ್ಷೇತ್ರಕ್ಕೆ ಅಪಾರ ನಷ್ಟವುಂಟಾಗಿದೆ.
– ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ

ನನ್ನ ಶ್ರೇಷ್ಠ ಸಹೋದರ ಅಂಬರೀಶ್ ನಮ್ಮನ್ನು ಅಗಲಿದ್ದಾರೆ. ಚಿತ್ರರಂಗ, ರಾಜಕೀಯ ಕ್ಷೇತ್ರದಲ್ಲಿ ಅವರು ಅಜಾತಶತ್ರುವಾಗಿದ್ದರು. ಪಕ್ಷ, ಜಾತಿ, ಧರ್ಮ ಭೇದ ಬಿಟ್ಟು ಎಲ್ಲಾ ವರ್ಗ ದವರೊಂದಿಗೂ ಅವರು ಆತ್ಮೀಯ ಸಂಬಂಧ ಹೊಂದಿದ್ದರು. ನಾನು ವಿದ್ಯಾರ್ಥಿ ನಾಯಕ ನಾಗಿದ್ದಾಗಲೇ ನನಗೆ ಅವರು ಸ್ನೇಹಿತರಾಗಿದ್ದರು. ನಾನು ಸಚಿವರಾಗಿದ್ದಾಗಲೂ ಕೂಡ ವಿಧಾನಸೌಧದಲ್ಲೇ ಎಲ್ಲರೆದುರು ಏಕ ವಚನದಲ್ಲಿ ಮಾತನಾಡುತ್ತಿದ್ದರು. ಪ್ರೀತಿಯಿಂದ ಬಯ್ಯು ತ್ತಿದ್ದರು. ಕಾವೇರಿ ವಿಚಾರದಲ್ಲಿ ಕೇಂದ್ರ ಸಚಿವ ಸ್ಥಾನವನ್ನು ತ್ಯಾಗ ಮಾಡಿದ ಇತಿಹಾಸ ಅವರ ಹೆಸರಲ್ಲಿದೆ. ಆರೋಗ್ಯದ ಕಡೆಗೆ ಅವರು ಇನ್ನೂ ಹೆಚ್ಚು ಗಮನ ಹರಿಸಬೇಕಾಗಿತ್ತು. ಎಲ್ಲಾ ಭಾಷೆಯವರ ಸ್ನೇಹವನ್ನೂ ಗಿಟ್ಟಿಸಿಕೊಂಡಿದ್ದ ಸ್ನೇಹಜೀವಿ. ಅಂಬರೀಶ್ ಅಗಲಿಕೆ ಅಪಾರ ದುಃಖವನ್ನುಂಟು ಮಾಡಿದೆ. -ಡಿ.ಕೆ.ಶಿವಕುಮಾರ್, ಜಲ ಸಂಪನ್ಮೂಲ ಸಚಿವರು
ಅಂಬರೀಶ್ ಪುಟ್ಟಣ್ಣ ಕಣಗಾಲ್ ಅವರ ಶಿಷ್ಯರಾಗಿದ್ದರು. ನೇರ ಮಾತಿನ ಹೃದಯವಂತ. ಅವರ ನಿಧನದಿಂದ ತಬ್ಬಲಿಯಾಗಿರುವುದು ಚಿತ್ರರಂಗ ಮಾತ್ರವಲ್ಲ, ಕನ್ನಡ ಸಾಂಸ್ಕøತಿಕ ರಂಗವೂ ತಬ್ಬಲಿಯಾಗಿದೆ. ನಾವು ಒಬ್ಬ ಮೇರು ಕಲಾವಿದನನ್ನು ಕಳೆದುಕೊಂಡಿದ್ದೇವೆ.
– ಟಿ.ಎನ್.ಸೀತಾರಾಂ, ನಿರ್ದೇಶಕ

ಅಂಬರೀಶ್ ಅವರದು ಸ್ನೇಹಕ್ಕೆ ಮಾರು ಹೋಗುವ ಜೀವ. ಹುಲಿಯ ಗುಣ ಹುಲಿ ಯಲ್ಲಿರು ತ್ತದೆ, ಸಿಂಹದ ಗುಣ ಸಿಂಹದಲ್ಲಿರುತ್ತದೆ. ಅವು ರೂಪದಲ್ಲಿ ಭಯ ಹುಟ್ಟಿಸುವ ಹಾಗಿರುತ್ತದೆ. ಸ್ವಲ್ಪ ದೂರದಿಂದ ನೋಡಿದಾಗ ಸುಂದರವಾಗಿ ಕಾಣುತ್ತದೆ. ಅಂಬರೀಶ್ ಕೂಡ ಅಂತಹ ಸೌಂದರ್ಯವನ್ನು ತನ್ನೊಳಗಿಟ್ಟುಕೊಂಡಿದ್ದ ಸ್ನೇಹಜೀವಿ. ಅವರ ಮಾತು ಒರಟಾಗಿದ್ದರೂ ಮೃದು ಮನಸ್ಸಿನ ಹೃದಯವಂತ. – ಶಿವರಾಂ, ಹಿರಿಯ ನಟ

ಸಿನಿಮಾ ಮತ್ತು ರಾಜಕೀಯ ರಂಗದಲ್ಲಿ ಯಶಸ್ಸು ಕಂಡ ಗೆಳೆಯ ಅಂಬರೀಶ್. ನಮ್ಮದು 30 ವರ್ಷಗಳ ಗೆಳೆತನ. ಅವರ ಮಾತು ಕಠಿಣವಾದರೂ, ಮಲ್ಲಿಗೆ ಹೂವಿನಂತಹ ಹೃದಯವಂತ. ಅಂಬರೀಶ್ ಕನ್ನಡ ಜನರ ಮನ ಗೆದ್ದ ವ್ಯಕ್ತಿ. ವಿಶೇಷವಾಗಿ ಮಂಡ್ಯ, ಮೈಸೂರು ಜನರ ಮನೆ ಮಗನಾಗಿದ್ದ ಗೆಳೆಯ. ಅಂಬರೀಶ್‍ಗೆ ಅಂಬರೀಶ್ ಅವರೇ ಸಾಟಿ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ. ಅವರ ಮಗ ಅಭಿಷೇಕ್ ಗೌಡ ಅವರಲ್ಲಿ ಮುಂದಿನ ದಿನಗಳಲ್ಲಿ ಅಂಬರೀಶ್ ಅವರನ್ನು ಕಾಣುವಂತಾಗಲಿ.
– ಬಸವರಾಜ ಬೊಮ್ಮಾಯಿ, ಮಾಜಿ ಸಚಿವ

ಅಂಬರೀಶ್ ಅವರನ್ನು ಕಳೆದುಕೊಂಡು ನಾಡು ಬಡವಾಗಿದೆ. ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ತಕ್ಷಣ ತಡ ಮಾಡದೇ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ಬಿಸಾಕಿದ ಸ್ವಾಭಿಮಾನಿ ಅವರು. ವಿಷ್ಣುವರ್ಧನ್ ನಂತರ ಒಬ್ಬ ಉತ್ತಮ ಕಲಾವಿದರನ್ನು ಕಳೆದುಕೊಂಡು ನಾಡು ಬಡವಾಗಿದೆ. ಇಂತಹ ಕಲಾವಿದ ಮತ್ತೊಮ್ಮೆ ಹುಟ್ಟಿ ಬರಲಿ. ಅವರು ಇಲ್ಲವಾಗಿರುವು ದನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಭಗವಂತ ಅವರ ಕುಟುಂಬಕ್ಕೆ ನೀಡಲಿ.
-ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ

Translate »