ಮೈಸೂರು: ಮಾಜಿ ಸಚಿವ, ನಟ ಅಂಬರೀಶ್ ಹಾಗೂ ಮಾಜಿ ರೈಲ್ವೆ ಸಚಿವ ಸಿ.ಕೆ. ಜಾಫರ್ ಷರೀಫ್ ಅವರ ನಿಧನದ ಹಿನ್ನೆಲೆಯಲ್ಲಿ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಅವರು ಇಬ್ಬರು ನಾಯಕರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಅಂತಿಮ ನಮನ ಸಲ್ಲಿಸಿದರು.
ಚಾಮರಾಜ ಜೋಡಿ ರಸ್ತೆಯ ಶಾಂತಲಾ ಚಿತ್ರಮಂದಿ ರದ ಸಿಗ್ನಲ್ ಬಳಿ ನಿಲ್ಲಿಸಿದ್ದ ಬೃಹತ್ ಕಟೌಟ್‍ಗೆ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಪುಷ್ಪಾರ್ಚನೆ ಮಾಡಿದರು. ಈ ವೇಳೆ ಮೈಸೂರು ಪಾಲಿಕೆ ಸದಸ್ಯ ಲೋಕೇಶ್ ಪಿಯಾ ಸೇರಿದಂತೆ ಇತರೆ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತ ರಿದ್ದು, ನಮನ ಸಲ್ಲಿಸಿದರು. ಈ ವೇಳೆ ಮಾಧ್ಯಮದವರೊಂ ದಿಗೆ ಮಾತನಾಡಿದ ಸೋಮಶೇಖರ್, ಉತ್ತಮ ಅಭಿನ ಯದ ಮೂಲಕ ಸಿನಿಮಾ ಕ್ಷೇತ್ರದಲ್ಲಿ ಒಳ್ಳೆ ಹೆಸರು ಗಳಿಸಿದ್ದ ಮಾಜಿ ಸಚಿವ ಅಂಬರೀಶ್ ಅವರು ನಮ್ಮ ನಡುವೆ ಇನ್ನಿಲ್ಲ ಎಂಬುದನ್ನು ನಂಬಲಸಾಧ್ಯ. ಅವರ ನಿಧನದಿಂದ ಕನ್ನಡ ಚಿತ್ರೋದ್ಯಮ, ಕಾಂಗ್ರೆಸ್ ಪಕ್ಷಕ್ಕೆ ಬಹಳ ನಷ್ಟವಾಗಿದೆ ಎಂದರು.
ನಟ ಅಂಬರೀಶ್ ಅವರು ಕೇಂದ್ರದಲ್ಲಿ ಸಚಿವರಾಗಿದ್ದ ವೇಳೆ ಕಾವೇರಿ ನ್ಯಾಯಾಧೀಕರಣದಲ್ಲಿ ತೀರ್ಪು ಕರ್ನಾ ಟಕದ ವಿರುದ್ಧ ಬಂದಾಗ ಇದನ್ನು ವಿರೋಧಿಸಿ, ರಾಜೀನಾಮೆ ಸಲ್ಲಿಸಿದ್ದರು. ಸಂಸದರಾಗಿ, ಶಾಸಕರಾಗಿ ಅನೇಕ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನ ಮನ್ನಣೆ ಗಳಿಸಿದ್ದ ರಲ್ಲದೆ, ಮತ್ತೊರ್ವ ಹಿರಿಯ ನಾಯಕ ಸಿ.ಕೆ.ಜಾಫರ್ ಷರೀಪ್ ಅವರು ರೈಲ್ವೆ ಸಚಿವರಾಗಿದ್ದ ವೇಳೆ ಕರ್ನಾಟಕಕ್ಕೆ ನೀಡಿ ರುವ ಕೊಡುಗೆ ಅಪಾರ ಎಂದು ನುಡಿ ನಮನ ಸಲ್ಲಿಸಿದರು.