ಮೈಸೂರು: ಕನ್ನಡದ ಹಿರಿಯ ಮೇರು ನಟರಾದ ಮಾಜಿ ಸಚಿವ ಅಂಬರೀಶ್ ಅವರ ನಿಧನದ ಹಿನ್ನೆಲೆಯಲ್ಲಿ ಇಂದಿನಿಂದ ಮೂರು ದಿನಗಳವರೆಗೆ ಮೈಸೂರು ಅರಮನೆ ವಿದ್ಯುದ್ದೀಪಾಲಂಕಾರವನ್ನು ರದ್ದುಪಡಿಸಲಾಗಿದೆ ಎಂದು ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್. ಸುಬ್ರಹ್ಮಣ್ಯ ‘ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ.
ರಾಜ್ಯ ಸರ್ಕಾರ 3 ದಿನ ಶೋಕಾಚರಣೆ ಘೋಷಿಸಿರುವುದರಿಂದ ನವೆಂಬರ್ 27ರವರೆಗೆ ಮೈಸೂರು ಅರಮನೆಗೆ ದೀಪಾಲಂಕಾರ ಇರುವುದಿಲ್ಲ. ಆದರೆ ಅರಮನೆಗೆ ಪ್ರವಾಸಿಗರ ವೀಕ್ಷಣೆಗೆ ಪ್ರವೇಶ ಎಂದಿನಂತಿರುತ್ತದೆ. ಅದರಲ್ಲಿ ಯಾವುದೇ ವ್ಯತ್ಯಾಸವಿಲ್ಲ ಎಂದು ಸುಬ್ರಹ್ಮಣ್ಯ ತಿಳಿಸಿದರು.
ಬೆಂಗಳೂರು ಅರಮನೆ ವೀಕ್ಷಣೆ ರದ್ದು: ಅಂಬರೀಶ್ ಅವರ ನಿಧನದ ಹಿನ್ನೆಲೆ ಯಲ್ಲಿ ಬೆಂಗಳೂರು ಅರಮನೆ ವೀಕ್ಷಣೆಗೆ ಇಂದಿನಿಂದ ಎರಡು ದಿನ ಪ್ರವೇಶ ರದ್ದುಪಡಿಸಲಾಗಿದೆ ಎಂದು ರಾಜಮಾತೆ ಪ್ರಮೋದಾದೇವಿ ಒಡೆಯರ್ ತಿಳಿಸಿದ್ದಾರೆ.