ಗಾಯನದ ರಸದೌತಣದೊಂದಿಗೆ ಮಾಗಿ ಉತ್ಸವಕ್ಕೆ ತೆರೆ
ಮೈಸೂರು

ಗಾಯನದ ರಸದೌತಣದೊಂದಿಗೆ ಮಾಗಿ ಉತ್ಸವಕ್ಕೆ ತೆರೆ

January 3, 2020

ಮೈಸೂರು,ಜ.2(ವೈಡಿಎಸ್)-ಮುಸ್ಸಂಜೆ ಯಲ್ಲಿ ಅರಮನೆಯ ಝಗಮಗಿಸುವ ಬೆಳಕಿನಲ್ಲಿ ಯುವ ಗಾಯಕ ಶ್ರೀಹರ್ಷ ಅವರ ದೇವರಸ್ತುತಿ, ಜಾನಪದ, ಭಾವ ಗೀತೆಗಳ ರಸದೌತಣದೊಂದಿಗೆ 10 ದಿನ ಗಳ ಮಾಗಿ ಉತ್ಸವಕ್ಕೆ ಗುರುವಾರ ಯಶಸ್ವಿ ತೆರೆಬಿದ್ದಿತು.

ಮಾಗಿ ಉತ್ಸವದ ಅಂಗವಾಗಿ ಮೈಸೂರು ಅರಮನೆ ಆವರಣದಲ್ಲಿ ಆಯೋಜಿಸಿದ್ದ ಫಲಪುಷ್ಪ ಪ್ರದರ್ಶನದ ಕೊನೆಯ ದಿನ ವಾದ ಗುರುವಾರ, `ಹರ್ಷಧ್ವನಿ ಸಂಗೀತ ಸಂಜೆ’ಯಲ್ಲಿ ಗಾಯಕರಾದ ಶ್ರೀಹರ್ಷ, ಸುರಕ್ಷಾದಾಸ್, ಅಖಿಲಾ ಪಜುಮಣು, ಶರದಿ ಪಾಟೀಲ್ ಗಾಯನ ಪ್ರೇಕ್ಷಕರ ಮನತಣಿಸಿತು.

ಮೊದಲಿಗೆ ಶ್ರೀಹರ್ಷ ಅವರು ಸಂಸ್ಥಾನ ಗೀತೆ `ಕಾಯೋಶ್ರೀಗೌರಿ ಕರುಣಾ ಲಹರಿ’ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ದರು. ನಂತರ ಸುರಕ್ಷಾದಾಸ್ ಮತ್ತು ಅಖಿಲಾ ಪಜುಮಣು ನಾಡಿನ ಅಧಿದೇವತೆ ಕುರಿತ `ಶ್ರೀ ಚಾಮುಂಡೇಶ್ವರಿ ಅಮ್ಮ ಶ್ರೀ ಚಾಮುಂ ಡೇಶ್ವರಿ’ ಗೀತೆಯನ್ನು ಸುಶ್ರಾವ್ಯವಾಗಿ ಹಾಡಿದರು.

ನಂತರ ಶ್ರೀಹರ್ಷ ಶ್ರೀ ಜಯಚಾಮ ರಾಜೇಂದ್ರ ಒಡೆಯರ್ ರಚನೆಯ `ಬ್ರಹ್ಮಾಂಡ ವಲಯೇ ಮಾಯೆ’, ಶರದಿ ಪಾಟೀಲ್ `ಮುಚ್ಚುಮರೆ ಇಲ್ಲದೆ ನಿನ್ನಮುಂದೆ ಎಲ್ಲ ವನು ಬಿಚ್ಚಿಡುವೆ’, ಅಖಿಲಾ ಪಜುಮಣು `ಶ್ರೀ ಗಣರಾಯ ಪಾರ್ವತಿ ತನಯ ಶರಣು ಶರಣು ನಿಮಗೆ’ ಹಾಡುಗಳನ್ನು ಸುಮಧುರವಾಗಿ ಹಾಡಿದರು. ಶ್ರೀಹರ್ಷ ಟಿ.ಪಿ.ಕೈಲಾಸಂ ರಚನೆಯ `ನಾನು ಹುಟ್ಟಿದ್ದು ವಡ್ರಳ್ಳಿ, ಬೆಳೆದಿದ್ದು ಬ್ಯಾಡ್ರಳ್ಳಿ’ ಗೀತೆಗೆ ಪ್ರೇಕ್ಷಕರು ಕುಣಿದು ಕುಪ್ಪಳಿಸಿದರು.

Close to the Mysore Winter Festival-1

ಇದೇ ಸಂದರ್ಭದಲ್ಲಿ ಫಲಪುಷ್ಪ ಪ್ರದ ರ್ಶನ ಆಯೋಜಿಸಲು ಸಹಕರಿಸಿದ ಅಧಿಕಾರಿ ಗಳಾದ ಜಯಂತ್, ವೆಂಕಟೇಶ್, ರಮೇಶ್ ಹಾಗೂ ಬೊಂಬೆಗಳನ್ನು ಪ್ರದರ್ಶಿಸಿದ್ದ ಕಲಾವಿದರುಗಳನ್ನು ಸನ್ಮಾನಿಸಲಾಯಿತು. ಇದೇ ವೇಳೆ ಚುಕ್ಕಿಟಾಕೀಸ್ ತÀಂಡದವರು ಸ್ವಚ್ಛತೆ ಕುರಿತು ನಾಟಕ ಪ್ರದರ್ಶಿಸಿದರು.

ಫಲಪುಷ್ಪ ಪ್ರದರ್ಶನ: 10 ದಿನಗಳ ಫಲಪುಷ್ಪ ಪ್ರದರ್ಶನಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದ್ದು, 4 ಲಕ್ಷಕ್ಕೂ ಅಧಿಕ ಮಂದಿ ಭೇಟಿ ನೀಡಿದ್ದಾರೆ. ಹೂವಿನಿಂದ ಮಾಡಿದ ಆನೆ ಗಾಡಿ. ಭಾರತದ ವಾಯು ಸೇನಾ, ಭೂಸೇನಾ ಹಾಗೂ ನೌಕಾ ಸೇನೆಗಳ ಮಾದರಿ. ಬೆಂಗ ಳೂರು ಅರಮನೆ, ಮೈಸೂರು ಹಳೆಯ ಮರದ ಅರಮನೆ. ಉಪಗ್ರಹ ಚಂದ್ರ ಯಾನ-2. ಧ್ಯಾನದ ಭಂಗಿಯಲ್ಲಿ ವಿವೇಕಾ ನಂದರು. ನಡೆದಾಡುವ ದೇವರು ಡಾ.ಶಿವಕುಮಾರ ಸ್ವಾಮೀಜಿ, ಸಿಂಹಾ ಸನದ ಮೇಲೆ ಕುಳಿತಿರುವ ಶ್ರೀ ಜಯ ಚಾಮರಾಜ ಒಡೆಯರ್ ಆಕೃತಿಗಳು ಹೆಚ್ಚು ಆಕರ್ಷಿತವಾಗಿದ್ದವು.

ಬಿಲ್ವಪತ್ರೆ ಮತ್ತು ನಿಂಬೆಹಣ್ಣಿನಿಂದ ನಿರ್ಮಿಸಿದ ಅರಮನೆ ತ್ರಿನೇಶ್ವರ ಶಿವ ಲಿಂಗ, ಕೃಷ್ಣರಾಜ ಒಡೆಯರ್ ರಥದಲ್ಲಿ ಸಾಗುತ್ತಿರುವಂತೆ ಹೂವಿನಿಂದ ನಿರ್ಮಿ ಸಿದ ಕಲಾಕೃತಿಗಳು ಸಾರ್ವಜನಿಕರ ಕಣ್ಮನ ಸೆಳೆದವು. ಸಾಂಪ್ರದಾಯಿಕ ಬೊಂಬೆ ಪ್ರದ ರ್ಶನ, ಶಿವಲೀಲಾಮೃತ, ಶ್ರೀರಾಮ ದರ್ಶನಂ ಮತ್ತು ಭಾರತೀಯ ಗುರು ಪರಂಪರೆ ಗೊಂಬೆಗಳ ಪ್ರದರ್ಶನವನ್ನು ವೀಕ್ಷಿಸಿದರು.

ಗಿಜಿಗುಡುತ್ತಿದ್ದ ಆವರಣ: ಫಲಪುಷ್ಪ ಪ್ರದರ್ಶನದ ಕೊನೆಯ ದಿನ ಭಾರೀ ಪ್ರಮಾಣ ದಲ್ಲಿ ಪ್ರವಾಸಿಗರು, ಸ್ಥಳೀಯರು ಆಗಮಿಸಿ ದ್ದರಿಂದ ಆವರಣ ಗಿಜಿಗುಡುತ್ತಿತ್ತು.

Translate »