ಖಾಸಗೀಕರಣ ವಿರುದ್ಧ ಜ.8ಕ್ಕೆ ಮುಷ್ಕರ
ಮೈಸೂರು

ಖಾಸಗೀಕರಣ ವಿರುದ್ಧ ಜ.8ಕ್ಕೆ ಮುಷ್ಕರ

January 3, 2020

ಮೈಸೂರು,ಜ.2(ಎಂಕೆ)-ಕೇಂದ್ರ ಸರ್ಕಾರದ ಖಾಸಗೀಕರಣ ನೀತಿ ವಿರುದ್ಧ ವಿವಿಧ ಕಾರ್ಮಿಕ ಸಂಘಟನೆಗಳ ವತಿ ಯಿಂದ ಜ.8 ರಂದು ರಾಷ್ಟ್ರವ್ಯಾಪಿ ಮುಷ್ಕರ ನಡೆಸಲಾಗುವುದು ಎಂದು ದಕ್ಷಿಣ ವಲಯ ವಿಮಾ ನೌಕರರ ಒಕ್ಕೂಟದ ಜಂಟಿ ಕಾರ್ಯ ದರ್ಶಿ ಕಾಮ್ರೇಡ್ ಜೆ.ಸುರೇಶ್ ಹೇಳಿದರು.

ನಗರದ ಖಾಸಗಿ ಹೊಟೇಲ್‍ನಲ್ಲಿ ಬ್ಯಾಂಕು ಗಳು ಮತ್ತು ಸಾರ್ವಜನಿಕ ವಲಯದ ವಿಮಾ ಸಂಸ್ಥೆಗಳ ಕಾರ್ಮಿಕ ಸಂಘಟನೆ ಗಳ ಜಂಟಿ ಸಮಿತಿ ವತಿಯಿಂದ ಆಯೋ ಜಿಸಿದ್ದ ಪೂರ್ವಭಾವಿ ಸಮಾವೇಶದಲ್ಲಿ ಮಾತನಾಡಿದ ಅವರು, ಕಾರ್ಮಿಕ ನೀತಿ ಯನ್ನು ದಮನಗೊಳಿಸುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಹಮ್ಮಿಕೊಂಡಿರುವ ಮುಷ್ಕರವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.

ಸಾರ್ವಜನಿಕ ವಲಯದ ಉದ್ಯಮ ಸಂಸ್ಥೆಗಳನ್ನು ಖಾಸಗೀಕರಣ ಮಾಡಲು ಸರ್ಕಾರ ಮುಂದಾಗಿದೆ. ಉತ್ಪಾದನಾ ಕ್ಷೇತ್ರ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಸಾರ್ವ ಜನಿಕರ ಉಳಿತಾಯ ಕಡಿಮೆಯಾಗಿದೆ. 45 ವರ್ಷಗಳಲ್ಲಿ ಸಂಭವಿಸಬಹುದಾಗಿದ್ದ ಆರ್ಥಿಕ ಹಿಂಜರಿತವು ಕಳೆದ 5 ವರ್ಷಗ ಳಲ್ಲಿಯೇ ಸಂಭವಿಸಿದೆ. ದೇಶದ ಭವಿಷ್ಯ ವಾದ ಯುವಕರಿಗೆ ಉದ್ಯೋಗವೇ ದೊರಕು ತ್ತಿಲ್ಲ. ಸಣ್ಣ ಸಣ್ಣ ಕಂಪನಿಗಳು ಬಾಗಿಲು ಮುಚ್ಚುತ್ತಿವೆ ಎಂದು ಕಿಡಿಕಾರಿದರು.

ಬ್ಯಾಂಕಿಂಗ್ ಸೌಲಭ್ಯಗಳು ಶ್ರೀಮಂತರಿಗೆ ಮಾತ್ರ ಮೀಸಲಾಗುತ್ತಿವೆ. ಅತ್ಯಂತ ಸಿರಿ ವಂತರಾದ 8 ಜನರ ಆಸ್ತಿಯೇ ದೇಶದ ಅರ್ಧದಷ್ಟಿದೆ. ಸ್ವದೇಶಿ ಬಂಡವಾಳಕ್ಕೆ ಹೆಚ್ಚಿನ ಒತ್ತು ನೀಡದೆ, ವಿದೇಶಿ ಬಂಡ ವಾಳಕ್ಕೆ ಆದ್ಯತೆ ನೀಡಲಾಗುತ್ತಿದೆ. ವಿಲೀನ ಗೊಳಿಸುವ ನೆಪದಲ್ಲಿ ಸಾರ್ವಜನಿಕ ವಲ ಯದ ಬ್ಯಾಂಕುಗಳನ್ನು ಖಾಸಗಿಯವರಿಗೆ ಮಾರಾಟ ಮಾಡಲು ಸರ್ಕಾರ ಮುಂದಾ ಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಎಸ್‍ಎನ್‍ಎಲ್ ಮತ್ತು ಎಲ್‍ಐಸಿ ಯನ್ನು ಖಾಸಗೀಕರಣ ಮಾಡಲು ಮುಂದಾಗಿರುವ ಕೇಂದ್ರ ಸರ್ಕಾರ ಸಾರ್ವ ಜನಿಕವಾಗಿಯೇ ದೇಶದ ಸಂಪತ್ತನ್ನು ಕೆಲ ವ್ಯಕ್ತಿಗಳಿಗೆ ಮಾರಾಟ ಮಾಡಲು ನಿಂತಿದೆ. ಎಲ್‍ಐಸಿಯು ಲಾಭದಾಯಕ ಸಂಸ್ಥೆಯಾ ಗಿದ್ದು, ಸರ್ಕಾರದ ಯೋಜನೆಗಳಿಗೂ ಸಾಲ ನೀಡಿದೆ. ಎಲ್‍ಐಸಿಯಷ್ಟು ಕೊಡುಗೆ ನೀಡಿದ ಮತ್ತೊಂದು ಕಂಪನಿ ಇಲ್ಲ ಎಂದರು.

ಕಾರ್ಮಿಕರ ಕಾನೂನುಗಳನ್ನು ತಿದ್ದುಪಡಿ ಮಾಡುವುದಾದರೆ ಒಳಿತಾಗುವಂತಿರಲಿ. ಇಲ್ಲವಾದರೆ ತಿದ್ದುಪಡಿಯೇ ಬೇಡ. ವ್ಯವಸ್ಥೆ ಬದಲಾಗಬೇಕಾದರೆ ಕಾರ್ಮಿಕ ವರ್ಗ ಹೋರಾಟ ಮಾಡಲೇಬೇಕು ಎಂದರು.

ದಕ್ಷಿಣ ವಲಯ ನೌಕರರ ಸಂಘದ ಅಧ್ಯಕ್ಷ ಉಪಾಧ್ಯಕ್ಷ ಎಸ್.ಬಿ. ಬಲರಾಂ, ಕಾರ್ಮಿಕ ಸಂಘಟನೆಗಳ ಮುಖಂಡರಾದ ಎಸ್.ಕೆ. ರಾಮು, ರಾಜು, ಮಲ್ಲೇಶ್, ನರೇಂದ್ರ ಪೈ, ಎನ್.ಮಹೇಶ್, ಎಸ್.ಎಸ್.ನಾಗೇಶ್, ವೆಂಕಟರಾಮನ್, ಗಂಗಾಧರ್ ಮತ್ತಿತರಿದ್ದರು.

Translate »