ಜೀತ ಪದ್ಧತಿ ವಿರುದ್ಧ ಸುಮೊಟೊ ಪ್ರಕರಣ ದಾಖಲಿಸಬಹುದು
ಮೈಸೂರು

ಜೀತ ಪದ್ಧತಿ ವಿರುದ್ಧ ಸುಮೊಟೊ ಪ್ರಕರಣ ದಾಖಲಿಸಬಹುದು

January 3, 2020

ಜೀತದಾಳು ಪದ್ಧತಿ ನಿರ್ಮೂಲನೆ ಕುರಿತು ಅಧಿಕಾರಿಗಳಿಗೆ ತರಬೇತಿ

ಮೈಸೂರು,ಜ.2(ಪಿಎಂ)- ಜೀತ ಪದ್ಧತಿ ನಿರ್ಮೂಲನೆಗಾಗಿ ದೂರು ಬಂದರಷ್ಟೇ ಕ್ರಮ ಕೈಗೊಳ್ಳಬೇಕೆಂದಿಲ್ಲ. ಸುಮೊಟೊ (ಸ್ವಯಂ) ದೂರು ದಾಖಲಿಸಿಕೊಳ್ಳುವ ಅವಕಾಶವನ್ನೂ ಕಾನೂನು ಅಧಿಕಾರಿ ಗಳಿಗೆ ನೀಡಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದರು.

ಮೈಸೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆ ಗಳ ಪ್ರಾಧಿಕಾರ ಹಾಗೂ ಜಿಲ್ಲಾ ಪಂಚಾ ಯಿತಿ ಜಂಟಿ ಆಶ್ರಯದಲ್ಲಿ ಜೀತದಾಳು ಪದ್ಧತಿ (ರದ್ದತಿ) ಕಾಯ್ದೆ 1976ರ ಕುರಿತು ಕ್ಷೇತ್ರ ಮಟ್ಟದ ಅಧಿಕಾರಿಗಳಿಗೆ ಗುರುವಾರ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾ ಗಾರದ ಉದ್ಘಾಟನಾ ಸಮಾರಂಭದ ಅಧ್ಯ ಕ್ಷತೆ ವಹಿಸಿ ಅವರು ಮಾತನಾಡಿದರು.

ನಮ್ಮ ಸಮಾಜದಲ್ಲಿ ಇಂದು ಜೀತ ಪದ್ಧತಿ ತೀರಾ ಕಡಿಮೆಯಾಗಿರಬಹುದು. ಆದರೆ ಆಗಾಗ್ಗೆ ಅಲ್ಲಲ್ಲಿ ಕಾಣಿಸಿಕೊಳ್ಳು ವುದು ತಪ್ಪಿಲ್ಲ. ಮೈಸೂರು ಜಿಲ್ಲೆಗೆ ಸಂಬಂ ಧಿಸಿದಂತೆ ಹುಣಸೂರು ಉಪವಿಭಾಗದಲ್ಲಿ ಈ ರೀತಿ ಸನ್ನಿವೇಶಗಳು ಕಂಡುಬಂದಿರು ವುದು ಈಗಾಗಲೇ ನಮ್ಮ ಮುಂದಿವೆ. ಹುಣ ಸೂರು, ಹೆಚ್.ಡಿ.ಕೋಟೆ ಹಾಗೂ ಪಿರಿಯಾ ಪಟ್ಟಣ ತಾಲೂಕುಗಳಲ್ಲಿ ಇಂತಹ ಬೆಳವಣಿಗೆ ಆಗಿರುವುದನ್ನು ಕಾಣಬಹುದು. ಎಷ್ಟೇ ಕ್ರಮ ಕೈಗೊಂಡರೂ ಈ ಅನಿಷ್ಟ ಪದ್ಧತಿ ಮರು ಕಳಿಸುವುದು ಏಕೆಂದು ಚಿಂತನೆ ನಡೆಸಿ ಮುಂದುವರೆಯಬೇಕಿದ್ದು, ಅಧಿಕಾರಿಗಳು ಸ್ವಯಂ ಪ್ರೇರಿತರಾಗಿಯೂ ದೂರು ದಾಖಲಿಸಿಕೊಂಡು ಕ್ರಮ ಜರುಗಿಸಲು ಅವಕಾಶವಿದೆ ಎಂದು ತಿಳಿಸಿದರು.

ಜೀತ ಪದ್ಧತಿ ವಿರುದ್ಧ ಕ್ರಮ ಕೈಗೊ ಳ್ಳುವ ಸಂಬಂಧ ಅಧಿಕಾರಿಗಳು ಇಂದಿನ ತರಬೇತಿ ಕಾರ್ಯಕ್ರಮದಲ್ಲಿ ತಮ್ಮ ಎಲ್ಲಾ ಸಂದೇಹಗಳನ್ನು ಪರಿಹರಿಸಿಕೊಳ್ಳಬೇಕು. ತಾಲೂಕು ಮಟ್ಟದಲ್ಲಿ ಗ್ರಾಪಂಗಳು ಜೀತ ಪದ್ಧತಿ ನಿರ್ಮೂಲನೆಗೆ ಹೆಚ್ಚು ನಿಗಾ ವಹಿ ಸುವ ಜವಾಬ್ದಾರಿ ನಿರ್ವಹಿಸಬೇಕು. ಪ್ರಕರಣ ಗಳು ಗಮನಕ್ಕೆ ಬಂದ ಕೂಡಲೇ ತಾಲೂಕು ಹಾಗೂ ಜಿಲ್ಲಾ ಮಟ್ಟದ ಜಾಗೃತ ಸಮಿತಿಗೆ ಮಾಹಿತಿ ನೀಡಬೇಕು. ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಲೆಕ್ಕಿಗರು ಸೇರಿದಂತೆ ಅನೇಕ ಸಿಬ್ಬಂದಿ ಕ್ಷೇತ್ರದಲ್ಲಿ ಹೆಚ್ಚು ಕರ್ತವ್ಯ ನಿರ್ವಹಿಸುತ್ತಾರೆ. ಇವರಿಂದ ಮಾಹಿತಿ ಕಲೆ ಹಾಕಲು ಅವಕಾಶಗಳಿವೆ ಎಂದರು.

ಯಾವುದೇ ರಾಜ್ಯ, ಭಾಷೆ ಇಲ್ಲವೇ ವಿದೇಶಿ ವ್ಯಕ್ತಿಯಾಗಿದ್ದರೂ ಶೋಷಣೆ ಮೂಲಕ ದುಡಿಸಿಕೊಳ್ಳುವುದು ಜೀತ ಪದ್ಧತಿ ಯಾಗಲಿದೆ. ಇದರ ವಿರುದ್ಧ ಕಾನೂನಿ ನಡಿ ಕ್ರಮ ಕೈಗೊಳ್ಳಬಹುದು. ಜೀತ ಪದ್ಧತಿಯಿಂದ ಮುಕ್ತಿಗೊಳಿಸಿದ ಸಂತ್ರಸ್ತ ರಿಗೆ ಸಹಾಯಧನ ಕಲ್ಪಿಸಿ, ಪುನರ್‍ವಸತಿ ಕಲ್ಪಿಸುವಲ್ಲಿಯೂ ಅಧಿಕಾರಿಗಳು ಬದ್ಧತೆ ಯಿಂದ ಕಾರ್ಯ ನಿರ್ವಹಿಸಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರೂ ಆದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿ ಕಾರದ ಅಧ್ಯಕ್ಷ ಎಸ್.ಕೆ.ಒಂಟಿಗೋಡಿ ಮಾತ ನಾಡಿ, ಈ ಹಿಂದೆ ವ್ಯಾಪಕವಾಗಿದ್ದ ಜೀತ ಪದ್ಧತಿ ಕಾನೂನು ಕ್ರಮಗಳಿಂದ ಕಡಿಮೆ ಯಾಗಿದೆ. ತಹಸೀಲ್ದಾರ್ ಹಾಗೂ ತಾಪಂ ಇಓಗಳು ಪರಿಣಾಮಕಾರಿಯಾಗಿ ಇದರ ವಿರುದ್ಧ ಕಾರ್ಯನಿರ್ವಹಿಸಿದರೆ ಸಂಪೂರ್ಣ ನಿರ್ಮೂಲನೆ ಸಾಧ್ಯವಿದೆ. ಸ್ಥಳ ಪರಿಶೀಲನೆ ಯಂತಹ ಕರ್ತವ್ಯದ ವೇಳೆ ಈ ಬಗ್ಗೆಯೂ ವಿಚಾರಣೆ ಮಾಡುವ ವಿಧಾನದ ಮೂಲಕ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬಹುದು ಎಂದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿ ಕಾರದ ಸದಸ್ಯ ಕಾರ್ಯದರ್ಶಿಗಳೂ ಆದ ಸಿವಿಲ್ ನ್ಯಾಯಾಧೀಶ ಬಿ.ಪಿ.ದೇವಮಾನೆ ಮಾತನಾಡಿ, ದೇಶದ ಸಂವಿಧಾನದ 23ನೇ ಕಾಲಂನ ಇಚ್ಚೆಗೆ ಅನುಗುಣವಾಗಿ ಜೀತ ಪದ್ಧತಿ ರದ್ದತಿ ಕಾನೂನು-1976 ಜಾರಿಗೊಂಡಿದೆ. ಶೋಷಣೆ ವಿರುದ್ಧದ ಹಕ್ಕನ್ನು 23ನೇ ಕಲಂ ನೀಡಿದೆ. ಒಂದು ಕಾಲದಲ್ಲಿ ಜೀತದಾಳು ಎಂದರೆ ಅತೀವ ವಾದ ಶೋಷಣೆಗೆ ಗುರಿ ಮಾಡಲಾಗು ತ್ತಿತ್ತು. ವ್ಯಕ್ತಿಯೊಬ್ಬ ಮಾಡಿದ ಸಾಲಕ್ಕಾಗಿ ಆತನ ಮಕ್ಕಳು ಹಾಗೂ ಮೊಮ್ಮಕ್ಕಳು ಬಡ್ಡಿ ತೀರಿಸಲು ದುಡಿಯಬೇಕಿತ್ತು. ಇಂತಹ ಶೋಷಣೆ ನಿರ್ಮೂಲನೆಗೆ ಈ ಕಾನೂನು ಜಾರಿಗೊಳಿಸಲಾಗಿದೆ ಎಂದು ವಿವರಿಸಿದರು.

ಈ ಪ್ರಕರಣದ ಅಪರಾಧಿಗೆ 3 ವರ್ಷ ಗಳ ಜೈಲು ಹಾಗೂ 2 ಸಾವಿರ ರೂ. ದಂಡ ವಿಧಿಸಲು ಅವಕಾಶವಿದೆ. ಅಧಿಕಾರಿಗಳು ಈ ಕಾನೂನಿನ ಮೂಲ ಉದ್ದೇಶವನ್ನು ಸರಿ ಯಾಗಿ ಅರ್ಥೈಸಿಕೊಳ್ಳಬೇಕು. ಸಂಬಂಧಿಸಿದ ಇಲಾಖಾಧಿಕಾರಿಗಳು ಸಮನ್ವಯದಿಂದ ಕರ್ತವ್ಯ ನಿರ್ವಹಿಸಿದರೆ ಕಾನೂನಿನ ಅನುಷ್ಠಾನ ಪರಿಣಾಮಕಾರಿಯಾಗಿ ಆಗಲಿದೆ ಎಂದರು.

ಜಿಲ್ಲೆಯ ತಾಲೂಕುಗಳ ತಹಸೀಲ್ದಾರ್ ಗಳು, ತಾಪಂ ಇಓಗಳು, ಗ್ರಾಪಂ ಪಿಡಿಓ ಗಳು ಹಾಗೂ ಜೀವಿಕ ಸದಸ್ಯರು ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಜಿಪಂ ಸಿಇಓ ಕೆ.ಜ್ಯೋತಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸ್ನೇಹ, ಜೀವಿಕ ಸಂಯೋಜಕ ಕಿರಣ್ ಕಮಲ್ ಪ್ರಸಾದ್, ಜಿಪಂ ಉಪಕಾರ್ಯದರ್ಶಿ (ಅಭಿವೃದ್ಧಿ) ಡಾ.ಎಂ. ಕೃಷ್ಣರಾಜು ಮತ್ತಿತರರು ಹಾಜರಿದ್ದರು.

Translate »