ಮೈಸೂರು ಅರಮನೆಗೆ ಪ್ರವಾಸಿಗರ ಸಂಖ್ಯೆ ಇಳಿಮುಖ
ಮೈಸೂರು

ಮೈಸೂರು ಅರಮನೆಗೆ ಪ್ರವಾಸಿಗರ ಸಂಖ್ಯೆ ಇಳಿಮುಖ

March 13, 2020

ಮಾರ್ಚ್‍ನ 12 ದಿನದಲ್ಲಿ 10 ಸಾವಿರದಷ್ಟು ಕಡಿತ
ಮೈಸೂರು,ಮಾ.12(ಎಸ್‍ಬಿಡಿ)- ಪ್ರವಾಸಿಗರ ಸೂಜಿಗಲ್ಲಿನಂತೆ ಸೆಳೆಯುವ ಮೈಸೂರು ಅರಮನೆಗೂ ಕೊರೊನಾ ಬಿಸಿ ತಟ್ಟಿದೆ. ಹಲವು ದೇಶಗಳಲ್ಲಿ ಕೊರೊನಾ ವ್ಯಾಪಿಸುತ್ತಿರುವ ಹಿನ್ನೆಲೆ ಯಲ್ಲಿ ಪ್ರವಾಸೋದ್ಯಮದ ಮೇಲೆ ಬಾರೀ ಹೊಡೆತ ಬಿದ್ದಿದೆ. ಮೈಸೂರು ಅರಮನೆಗೆ ಭೇಟಿ ನೀಡುವ ಪ್ರವಾಸಿ ಗರ ಸಂಖ್ಯೆ ಕ್ಷೀಣಿಸಿರುವುದು ಕೊರೊನಾ ಪರಿಣಾಮಕ್ಕೆ ಸಾಕ್ಷಿ. ಭಾರತಕ್ಕೂ ಕೊರೊನಾ ವ್ಯಾಪಿಸು ತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಬರುವವರ ಸಂಖ್ಯೆಯಲ್ಲೂ ಇಳಿಮುಖವಾಗಿದೆ. ಪ್ರಸಕ್ತ ಮಾ.1ರಿಂದ 12ರವರೆಗೆ 66,225 ಭಾರತೀಯರು, 2083 ವಿದೇಶಿಯರು ಸೇರಿದಂತೆ ಒಟ್ಟು 68,308 ಪ್ರವಾಸಿಗರು ಮೈಸೂರು ಅರಮನೆಗೆ ಭೇಟಿ ನೀಡಿದ್ದಾರೆ. 2019ರ ಈ 12 ದಿನಗಳಲ್ಲಿ 78,108 ಹಾಗೂ 2018ರಲ್ಲಿ 79,067 ಪ್ರವಾಸಿ ಗರು ಭೇಟಿ ನೀಡಿದ್ದರು. ಹಿಂದಿನ 2 ವರ್ಷಗಳಿಗೆ ಹೋಲಿಸಿದರೆ ಈ ಬಾರಿ 12 ದಿನದಲ್ಲಿ 10 ಸಾವಿರ ಪ್ರವಾಸಿಗರು ಕಡಿಮೆಯಾಗಿದ್ದಾರೆ. ವಿದೇಶಿ ಪ್ರವಾಸಿಗರ ಸಂಖ್ಯೆಯಲ್ಲೂ ಬಾರೀ ಇಳಿಮುಖವಾಗಿದೆ. ಕಳೆದೆರಡು ತಿಂಗಳ ಅಂಕಿಅಂಶ ಗಮನಿಸಿದರೆ ಹಿಂದಿನ ವರ್ಷಗಳಿ ಗಿಂತಲೂ ಹೆಚ್ಚಿದೆ. ಪ್ರಸಕ್ತ ವರ್ಷದ ಜನವರಿಯಲ್ಲಿ 3,48,070 ಹಾಗೂ ಫೆಬ್ರವರಿಯಲ್ಲಿ 2,15,456 ಪ್ರವಾಸಿಗರು ಅರಮನೆಗೆ ಭೇಟಿ ನೀಡಿದ್ದಾರೆ. 2019ರ ಜನವರಿಯಲ್ಲಿ 3,43,217, ಫೆಬ್ರವರಿಯಲ್ಲಿ 2,05598 ಹಾಗೂ 2018ರ ಜನವರಿಯಲ್ಲಿ 3,44,569, ಫೆಬ್ರವರಿಯಲ್ಲಿ 1,95,616 ಪ್ರವಾಸಿಗರು ಬಂದಿದ್ದರು. ಮೈಸೂರು ಮೃಗಾಲಯ, ಚಾಮುಂಡಿ ಬೆಟ್ಟ ಸೇರಿದಂತೆ ಎಲ್ಲಾ ಪ್ರವಾಸಿ ಸ್ಥಳಗಳಲ್ಲೂ ಪ್ರವಾಸಿಗರು ಕಡಿಮೆಯಾಗಿದ್ದಾರೆ. ಕೊರೊನಾ ಭೀತಿ ಕಡಿಮೆಯಾಗುವವರೆಗೂ ಪರಿಸ್ಥಿತಿ ಹೀಗೇ ಮುಂದುವರೆಯುವ ಸಾಧ್ಯತೆ ಇದೆ.

 

Translate »