ಚಂದನ್ ಶೆಟ್ಟಿ ದಂಪತಿ ವೈದ್ಯಕೀಯ  ತಪಾಸಣೆಗೆ ಎನ್‍ಎಸ್‍ಯುಐ ಆಗ್ರಹ
ಮೈಸೂರು

ಚಂದನ್ ಶೆಟ್ಟಿ ದಂಪತಿ ವೈದ್ಯಕೀಯ ತಪಾಸಣೆಗೆ ಎನ್‍ಎಸ್‍ಯುಐ ಆಗ್ರಹ

March 13, 2020

ಮೈಸೂರು, ಮಾ.12(ಎಸ್‍ಬಿಡಿ)- ವಿದೇಶಕ್ಕೆ ತೆರಳಿರುವ ರ್ಯಾಪರ್ ಚಂದನ್‍ಶೆಟ್ಟಿ ಹಾಗೂ ನಿವೇದಿತಾಗೌಡ ಅವರನ್ನೂ ಕಡ್ಡಾಯವಾಗಿ ವೈದ್ಯಕೀಯ ತಪಾಸಣೆಗೆ ಒಳಪಡಿಸುವಂತೆ ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ (ಎನ್‍ಎಸ್‍ಯುಐ) ಮೈಸೂರು ಘಟಕದ ವತಿಯಿಂದ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಲಾಗಿದೆ.

ಎಲ್ಲೆಡೆ ಕೊರೊನಾ ಭೀತಿಯಿದೆ. ಆದರೆ ಮೈಸೂರಿನಲ್ಲಿ ಈವರೆಗೆ ಯಾವುದೇ ಪ್ರಕ ರಣ ಪತ್ತೆಯಾಗಿಲ್ಲ. ಆದರೂ ಹೊರಗಿ ನಿಂದ ಬರುವವರ ಬಗ್ಗೆ ಎಚ್ಚರ ವಹಿಸ ಬೇಕಿದೆ. ಹಾಗೆಯೇ ವಿವಾಹದ ಬಳಿಕ ಯೂರೋಪ್‍ಗೆ ತೆರಳಿರುವ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಮೈಸೂರಿಗೆ ಆಗಮಿಸಿದ ಸಂದರ್ಭದಲ್ಲಿ ಸೆಲೆಬ್ರಿಟಿಗಳು ಎಂಬ ಕಾರಣದಿಂದ ಅವರನ್ನು ತಪಾಸಣೆಗೆ ಒಳಪಡಿಸದೆ ನಿರ್ಲಕ್ಷಿಸಬಾರದು ಎಂದು ಮನವಿ ಮಾಡಿದ್ದಾರೆ. ಎನ್‍ಎಸ್‍ಯುಐ ಮೈಸೂರು ಘಟಕದ ಅಧ್ಯಕ್ಷ ರಫೀಕ್ ಮತ್ತಿತರರು ನೀಡಿದ ಮನವಿಯನ್ನು ಜಿಲ್ಲಾಧಿಕಾರಿ ಕಚೇರಿ ತಹಶೀಲ್ದಾರ್ ಸ್ವೀಕರಿಸಿದ್ದಾರೆ.

 

Translate »