`ಕರ್ನಾಟಕ ಸಂಗೀತ ಕಲಿಕಾ ಕ್ರಮಕ್ಕೆ ಪುರಂದರದಾಸರೇ ಮೂಲ’
ಮೈಸೂರು

`ಕರ್ನಾಟಕ ಸಂಗೀತ ಕಲಿಕಾ ಕ್ರಮಕ್ಕೆ ಪುರಂದರದಾಸರೇ ಮೂಲ’

March 13, 2020

ಮೈಸೂರು, ಮಾ.12(ಎಂಕೆ)- ಪುರಂ ದರದಾಸರು ನೀಡಿದ ಬೋಧನಾ ತಂತ್ರ ಗಳು ಮತ್ತು ವಿಧಾನಗಳಿಂದಲೇ ಕರ್ನಾ ಟಕ ಶಾಸ್ತ್ರೀಯ ಸಂಗೀತದ ಕಲಿಕಾ ಕ್ರಮ ಪ್ರಾರಂಭವಾಯಿತು. ಗಾಯಕರಿಗೆ, ಬೋಧಕ ರಿಗೆ ಸಹಾಯಕವಾಗುವ ತಾಳಗಳನ್ನು ಪುರಂದರದಾಸರು ಪರಿಚಯಿಸಿದ್ದಾರೆ ಎಂದು ಸಂಗೀತ ವಿದ್ವಾಂಸ ಪ್ರೊ. ಆರ್.ವಿಶ್ವೇಶ್ವರನ್ ಹೇಳಿದರು.

ಮೈಸೂರಿನ ಗೋಕುಲಂನಲ್ಲಿರುವ ಶ್ರೀ ಕೃಷ್ಣಗಾನ ಸಭಾದ 18ನೇ ವಾರ್ಷಿಕೋತ್ಸವ ವನ್ನು ಉದ್ಘಾಟಿಸಿದ ಅವರು, ಸಂಗೀತ ಕಲಿಕೆಗೆ ಪುರಂದರದಾಸರು ಹಾಕಿಕೊಟ್ಟ ಬೋಧನಾ ಕ್ರಮಗಳನ್ನು ಇಂದಿಗೂ ಅನುಕರಣೆ ಮಾಡಲಾಗುತ್ತಿದೆ ಎಂದರು.

ಶ್ರೀ ಕೃಷ್ಣಗಾನ ಸಭಾದ ವಾರ್ಷಿಕೋ ತ್ಸವ ತ್ಯಾಗರಾಜರು ಮತ್ತು ಪುರಂದರ ದಾಸರ ಆರಾಧನಾ ಮಹೋತ್ಸವವೂ ಆಗಿದೆ. ಇಬ್ಬರೂ ಮಹಾನುಭಾವರ ಕುರಿತು ಎಷ್ಟೇ ಕಾರ್ಯಕ್ರಮಗಳನ್ನು ನಡೆಸಿದರೂ, ಅದೆಷ್ಟೇ ಗುಣಗಾನ ಮಾಡಿದರೂ ಅದೆಲ್ಲದಕ್ಕೂ ಮಿಗಿ ಲಾದ ವ್ಯಕ್ತಿತ್ವ ಅವರದ್ದಾಗಿದೆ. ಇವರು ನೀಡಿದ ಸ್ಫೂರ್ತಿಯೇ ಇಂದಿಗೂ ಹಲವಾರು ಸಾಧ ಕರು ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗಿದೆ ಎಂದು ಬಣ್ಣಿಸಿದರು.

ಸಂಗೀತ ಸಂಸ್ಕøತಿಯ ಪ್ರತಿಬಿಂಬವಾಗಿ ರುವ ತ್ಯಾಗರಾಜ ಮತ್ತು ಪುರಂದರದಾಸರು ಕರ್ನಾಟಕ ಸಂಗೀತ ಕ್ಷೇತ್ರದಲ್ಲಿ ದೊರೆ ತದ್ದೇ ಭಾಗ್ಯ. ತ್ಯಾಗರಾಜರ ಕೃತಿಗಳು ಸಂಗ್ರಹ ರಾಮಾಯಣದಂತೆ. ರಾಮಭಕ್ತರಾಗಿದ್ದ ತ್ಯಾಗರಾಜರ ಸ್ಮರಣೆ, ಅವರ ಕೀರ್ತನೆ ಗಳನ್ನು ಹಾಡಿದರೂ ಅದು ನಮಗೆ ಸಾಧನೆ ಯಾಗುತ್ತದೆ ಎಂದು ಗುಣಗಾನ ಮಾಡಿದರು.

ಹಿಂದೂಸ್ತಾನಿ ಗಾಯಕ ಎಂ.ಎಸ್. ಭಾಸ್ಕರ್ ಮಾತನಾಡಿ, ಮೈಸೂರು ನಗರ ಕರ್ನಾಟಕ ಸಂಗೀತಕ್ಕೇ ದೊಡ್ಡ ಗೌರವ ವಾಗಿದೆ. ಮಹಾರಾಜರ ಕಾಲದಲ್ಲಿ ಸಂಗೀತ ಕ್ಷೇತ್ರಕ್ಕೆ ವಿಶೇಷ ಆದ್ಯತೆ ನೀಡುವ ಮೂಲಕ ಬಹು ಎತ್ತರಕ್ಕೆ ಬೆಳೆಸಲಾಯಿತು. ಮಹಾ ರಾಜರು ಹಲವಾರು ಸಂಗೀತ ದಿಗ್ಗಜರಿಗೆ ಆಶ್ರಯ ನೀಡಿ, ಪ್ರೋತ್ಸಾಹಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇದೇ ವೇಳೆ ಸಂಗೀತ ಕ್ಷೇತ್ರಕ್ಕೆ ಗಣ ನೀಯ ಕೊಡುಗೆ ನೀಡಿದ ಸಂಗೀತ ಕಲೆಗಳ ಸಂಘಟಕ ಸಿ.ಆರ್.ಹಿಮಾಂಶು, ಹಿಂದೂ ಸ್ತಾನಿ ಗಾಯಕ ಎಂ.ಎಸ್.ಭಾಸ್ಕರ್ ಅವ ರನ್ನು ಶ್ರೀ ಕೃಷ್ಣಗಾನಸಭಾ ವತಿಯಿಂದ ಅಭಿನಂದಿಸಲಾಯಿತು.

ಹಿಂದೂಸ್ತಾನಿ ಗಾಯನ: ಬಳಿಕ ಎಂ.ಎಸ್.ಭಾಸ್ಕರ್ ಅವರಿಂದ ಹಿಂದೂ ಸ್ತಾನಿ ಸಂಗೀತ ಗಾಯನ ನಡೆಯಿತು. ಹಾರ್ಮೋನಿಯಂನಲ್ಲಿ ಪಂಡಿತ್ ವೀರ ಭದ್ರಯ್ಯ ಹಿರೇಮಠ್, ತಬಲದಲ್ಲಿ ರಮೇಶ್ ದನ್ನೂರು ಸಹಕಾರ ನೀಡಿದರು. ಶ್ರೀ ಕೃಷ್ಣಗಾನಸಭಾ ಅಧ್ಯಕ್ಷ ಬಿ.ಎಸ್. ಶ್ರೀಧರ ರಾಜ ಅರಸ್, ರಂಜನಿ ಮತ್ತಿತರರಿದ್ದರು.

Translate »