ಕೋರ್ಟ್ ಆದೇಶದಂತೆ ಕಾಂಪೌಂಡ್ ನಿರ್ಮಾಣ; ಪಾಲಿಕೆ ಅಧಿಕಾರಿಗಳ ವಿರುದ್ಧ ಸ್ಥಳೀಯರ ಆಕ್ರೋಶ
ಮೈಸೂರು

ಕೋರ್ಟ್ ಆದೇಶದಂತೆ ಕಾಂಪೌಂಡ್ ನಿರ್ಮಾಣ; ಪಾಲಿಕೆ ಅಧಿಕಾರಿಗಳ ವಿರುದ್ಧ ಸ್ಥಳೀಯರ ಆಕ್ರೋಶ

March 13, 2020

ಮೈಸೂರು, ಮಾ.12(ಪಿಎಂ)- ನ್ಯಾಯಾ ಲಯದ ಆದೇಶದಂತೆ ಗುಂಡೂರಾವ್ ನಗರದಲ್ಲಿ ಗುರುವಾರ ಕಾಂಪೌಂಡ್ ನಿರ್ಮಿ ಸುತ್ತಿದ್ದ ಪಾಲಿಕೆ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. `ಇದು ಖರಾಬು ಜಾಗ, ರಸ್ತೆಗೆ ಬಿಡ ಬೇಕು. ಕಾಂಪೌಂಡ್ ನಿರ್ಮಿಸಬಾರದು’ ಎಂದು ಮುನೇಶ್ವರ ಬಡಾವಣೆಯ ಜನರು ಆಕ್ಷೇಪ ವ್ಯಕ್ತಪಡಿಸಿದರು.

`ಇದು ಖಾಸಗಿ ಜಾಗ. ಈ ಹಿಂದೆ ಇಲ್ಲಿ ಪಾಲಿಕೆಯು ರಸ್ತೆ ನಿರ್ಮಾಣ ಮಾಡಿ ದ್ದಕ್ಕೆ ಹೈಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದ್ದು, ಕಾಂಪೌಂಡ್ ನಿರ್ಮಿಸಿಕೊಡುವಂತೆ ಆದೇಶಿಸಿದೆ. ಹೀಗಾಗಿ ಆದೇಶ ಪಾಲಿಸು ವುದು ನಮ್ಮ ಕರ್ತವ್ಯ’ ಎಂದು ಪಾಲಿಕೆ ಅಧಿಕಾರಿಗಳು ಸ್ಥಳೀಯರ ಮನವೊಲಿಸ ಲೆತ್ನಿಸಿದರೂ ಫಲ ನೀಡಲಿಲ್ಲ. ಇದರಿಂದ ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾ ವರಣ ನಿರ್ಮಾಣವಾಗಿತ್ತು.

ಕಾಂಪೌಂಡ್‍ಗೆ ಅಡಿಪಾಯಕ್ಕೆ ಗುಂಡಿ ತೆಗೆಯುವ ಕಾಮಗಾರಿ ಮುಗಿದಿದೆ. ನಾಳೆ ಕಾಮಗಾರಿ ಮುಂದುವರೆಯಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ

Translate »