ಸಿಎಎ, ಎನ್‍ಪಿಆರ್, ಎನ್‍ಆರ್‍ಸಿ ವಿರುದ್ಧ ಸಾಮೂಹಿಕ ನಿರಶನ
ಮೈಸೂರು

ಸಿಎಎ, ಎನ್‍ಪಿಆರ್, ಎನ್‍ಆರ್‍ಸಿ ವಿರುದ್ಧ ಸಾಮೂಹಿಕ ನಿರಶನ

March 13, 2020

ಮೈಸೂರು, ಮಾ.12(ಪಿಎಂ)-ಸಿಎಎ, ಎನ್‍ಪಿಆರ್, ಎನ್‍ಆರ್‍ಸಿ ವಿರೋಧಿಸಿ ಹಾಗೂ ಕೇಂದ್ರ ಬಿಜೆಪಿ ಸರ್ಕಾರ ಹಿಂದೂ ರಾಷ್ಟ್ರ ನಿರ್ಮಾಣದ ಹುನ್ನಾರ ನಡೆಸುತ್ತಿದೆ ಎಂದು ಆರೋಪಿಸಿ ಸಂವಿಧಾನ ರಕ್ಷಣಾ ಸಮಿತಿ ಆಶ್ರಯದಲ್ಲಿ ವಿವಿಧ ಸಂಘಟನೆ ಗಳು ಹಾಗೂ ಮುಖಂಡರು ಗುರುವಾರ ಸಾಮೂಹಿಕ ಉಪವಾಸ ನಡೆಸಿದರು.

ಧಾರ್ಮಿಕ ತಾರತಮ್ಯ ನಿಲ್ಲಿಸಿ, ಹಿಂದೂ- ಮುಸ್ಲಿಂ ಭಾಯಿ ಭಾಯಿ, ಭಾರತ ಮಾತೆ ನಮ್ಮ ತಾಯಿ, ಸಂವಿಧಾನ ಉಳಿಸಿ ಮೊದ ಲಾದ ಫಲಕಗಳನ್ನಿಡಿದು ಪ್ರತಿಭಟನಾಕಾ ರರು ಕೇಂದ್ರದ ನಡೆ ಖಂಡಿಸಿದರು.

ಎಲ್ಲರೂ ಬಳಸುವ ಉಪ್ಪಿನ ತಯಾರಿಕೆ, ಮಾರಾಟದ ಮೇಲೆ ಬ್ರಿಟಿಷ್ ಸರ್ಕಾರ ನಿಷೇಧ ಹೇರಿದಾಗ, ಗಾಂಧೀಜಿ ಇದನ್ನು ಪ್ರತಿಭಟಿಸಲು ಬಳಸಿದ ಅಸ್ತ್ರವೇ ಉಪ್ಪಿನ ಸತ್ಯಾಗ್ರಹ. ಈ ಸತ್ಯಾಗ್ರಹ ಗಾಂಧಿ ನೇತೃತ್ವ ದಲ್ಲಿ 1930ರ ಮಾ.12ರಂದು ಆರಂಭ ವಾಯಿತು. ಹೀಗಾಗಿ ಭಾರತೀಯರಾದ ನಮಗೆ ಈ ದಿನ ಮಹತ್ವದ್ದು. ಹಾಗಾ ಗಿಯೇ ಇಂದು ಕೇಂದ್ರದ ವಿರುದ್ಧ ಉಪ ವಾಸ ಸತ್ಯಾಗ್ರಹ ನಡೆಸುತ್ತಿದ್ದೇವೆ ಎಂದು ಪ್ರತಿಭಟನಾಕಾರರು ತಿಳಿಸಿದರು.

ಸಿಎಎ, ಎನ್‍ಆರ್‍ಸಿ, ಎನ್‍ಪಿಆರ್ ವಿರುದ್ಧ ರಾಷ್ಟ್ರಾದ್ಯಂತ ಪ್ರತಿಭಟನೆ ನಡೆಯುತ್ತಿವೆ. ಪ್ರತಿಭಟನೆ ಹತ್ತಿಕ್ಕಲು ಕೇಂದ್ರ ಸರ್ಕಾರ ಅನೇಕ ಹಿಂಸಾತ್ಮಕ ಮಾರ್ಗ ಬಳಸುತ್ತಿದೆ. ದೆಹಲಿ ಯಲ್ಲಿ ನಡೆದ ಹಿಂಸಾಚಾರ ಮತ್ತು ಇದ ರಲ್ಲಿ ಬಲಿಯಾದ 50ಕ್ಕೂ ಹೆಚ್ಚು ಜೀವ ಗಳು ಕೇಂದ್ರ ಸರ್ಕಾರದ ಹಿಟ್ಲರ್ ಆಡಳಿ ತಕ್ಕೆ ಸಾಕ್ಷಿ. ವಿಭಿನ್ನ ಧಾರ್ಮಿಕತೆಯ ಜನ ನೆಮ್ಮದಿಯಿಂದ ಬದುಕುತ್ತಿರುವ ಭಾರತ ದಲ್ಲಿ ಬಿಜೆಪಿ ಮತ್ತು ಸಂಘ ಪರಿವಾರದ ಸಂಘಟನೆಗಳು ನೆಮ್ಮದಿ ಕೆಡಿಸಲು ಹೊರ ಟಿವೆ ಎಂದು ಕಿಡಿಕಾರಿದರು.

ಸಾಹಿತಿ ದೇವನೂರ ಮಹಾದೇವ, ಸಮಾಜ ವಾದಿ ಪ.ಮಲ್ಲೇಶ್, ಪ್ರಗತಿಪರ ಚಿಂತಕ ರಾದ ಶಬೀರ್ ಮುಸ್ತಾಫ, ಅಭಿರುಚಿ ಗಣೇಶ್, ದಲಿತ ಸಂಘರ್ಷ ಸಮಿತಿಯ ಚೋರನ ಹಳ್ಳಿ ಶಿವಣ್ಣ, ಶಿವಕುಮಾರ್ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿದ್ದರು.

Translate »