ಮೈಸೂರು, ಮಾ.12(ಆರ್‍ಕೆಬಿ)- ಮೈಸೂ ರಿನ ಮಹಾರಾಣಿ ಮಹಿಳಾ ಕಲಾ ಕಾಲೇ ಜಿನ ವಿದ್ಯಾರ್ಥಿನಿಯರಲ್ಲಿಂದು ಭಾರೀ ಸಂಭ್ರಮ ಮನೆ ಮಾಡಿತ್ತು. ಕನ್ನಡ-ಸಂಸ್ಕøತಿ ಇಲಾಖೆಯು ಕಾಲೇಜಿನಲ್ಲಿ ಆಯೋಜಿ ಸಿದ್ದ ಜಾನಪದ ಜಾತ್ರೆಯಲ್ಲಿ ಬಣ್ಣ ಬಣ್ಣದ ಸೀರೆಗಳನ್ನುಟ್ಟ ವಿದ್ಯಾರ್ಥಿನಿಯರು ವಿಶೇಷ ವಾಗಿ ಅಲಂಕರಿಸಿಕೊಂಡಿದ್ದರು.
ಜಾತ್ರೆ ಅಂಗವಾಗಿ ಕಲಾತಂಡಗಳ ಮೆರವ ಣಿಗೆ ನಡೆಯಿತು. ಕಂಸಾಳೆ, ಗೊರವರ ಕುಣಿತ, ಪೂಜಾ ಕುಣಿತ, ಡೊಳ್ಳು ಕುಣಿತ, ನಗಾರಿ, ಗಾರುಡಿ ಗೊಂಬೆ, ವೀರಭದ್ರ ಕುಣಿತ, ಮಾರಿ ಕುಣಿತ, ಕೋಲಾಟ, ಕಂಸಾಳೆ, ಬುಡ ಕಟ್ಟು, ಸೋದೆದಿಮ್ಮಿ ನೃತ್ಯ ಗಳು ಆಕರ್ಷಕ ವಾಗಿದ್ದವು. ಮಹಾರಾಣಿ ಮಹಿಳಾ ಕಲಾ ಕಾಲೇಜಿನ ವಿದ್ಯಾರ್ಥಿನಿಯರ ಕಂಸಾಳೆ ನೃತ್ಯ ವಿಶೇಷ ಗಮನ ಸೆಳೆಯಿತು.
ಬಳಿಕ ಕಾಲೇಜು ಆವರಣದ ವೇದಿಕೆ ಯಲ್ಲಿ ದೀಪಿಕಾ ಮತ್ತ್ತು ತಂಡÀದಿಂದ ಜನ ಪದ ಗಾಯನ, ಚಿಕ್ಕರಾಮೇಗೌಡ, ಪುಟ್ಟ ನಂಜೇಗೌಡ, ಕರಿಗೌಡ ತಂಡದ ತತ್ವಪದ, ಯಳಂದೂರಿನ ಮಹದೇವಮ್ಮ, ಚಿಕ್ಕ ನಂಜಮ್ಮರ ಸೋಬಾನೆ ಪದ, ಸೌಭಾಗ್ಯ ಮತ್ತು ತಂಡದ ಜನಪದ ಹಾಡುಗಳು, ಚಂದ್ರಕಾಂತ ತಂಡದ ತಂಬೂರಿ ಪದ, ಜಯಮ್ಮ, ಲಕ್ಷ್ಮಮ್ಮ, ಮಹದೇವಮ್ಮ, ಮಂಚಮ್ಮ, ಗಿರಿಜಮ್ಮ, ಸಣ್ಣಮ್ಮ, ಸಿದ್ದಮ್ಮ, ನಿಂಗಮ್ಮ, ಚಿಕ್ಕ ಮಂಚಮ್ಮ, ಮಾದಮ್ಮ ತಂಡದ ಸೋಬಾನೆ ಪದ, ಮೈಸೂರಿನ ಲೋಕೇಶ್ ಮತ್ತು ತಂಡದ ಮಹದೇಶ್ವರ ಕಾವ್ಯ, ಕಿರಗ ಸೂರು ಇಂದಿರಮ್ಮ, ರಾಜಪ್ಪ ಕುಪ್ಪೆ ವೆಂಕಟ ರಾಮು, ವೈ.ಎಂ.ಪುಟ್ಟಣ್ಣಯ್ಯರಿಂದ ರಂಗಗೀತೆ, ಗೌರವ್ ಸುಧಾ ಮುರಳಿ ಮತ್ತು ತಂಡದ ಜನಪದ ನೃತ್ಯ, ಹಾಡಿ ಕಲಾ ಪ್ರತಿಷ್ಠಾನದ ಮೂಲ ಜನಪದ ಕಾವ್ಯ ಪ್ರಸ್ತುತಪಡಿಸಿದರು.
ಜಾನಪದ ಕಲೆಗೆ ತಾತ್ಸಾರ: ನಂತರ ವೇದಿಕೆ ಕಾರ್ಯಕ್ರಮಕ್ಕೆ ಮೈಸೂರು ಜಿಪಂ ಅಧ್ಯಕ್ಷೆ ಪರಿಮಳಾ ಶ್ಯಾಮ್ ಚಾಲನೆ ನೀಡಿದರು. ಅಕ್ಷರಜ್ಞಾನ ಇಲ್ಲದ ಅನೇಕರು ತಲ ತಲಾಂತರದಿಂದ ಉಳಿಸಿ, ಬೆಳೆಸಿಕೊಂಡು ಬಂದಿರುವ ಜಾನಪದ ಕಲೆ ಇಂದು ಜನರ ತಾತ್ಸಾರಕ್ಕೆ ಒಳಗಾಗಿದೆ. ನಶಿಸು ತ್ತಿರುವ ಜಾನಪದ ಕಲಾ ಪ್ರಕಾರಗಳನ್ನು ಉಳಿಸಿಕೊಳ್ಳಬೇಕಿದೆ ಎಂದರು.
ಬಳಿಕ ಸನ್ಮಾನ ಸ್ವೀಕರಿಸಿ ಮಾತನಾಡಿದ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ವಿ.ವಸಂತಕುಮಾರ್, ಜಾನಪದ ಎಂಬುದು ಒಂದು ಜೀವನ ವಿಧಾನ. ಹೊಲ ಉಳು ವಾಗ, ಕಳೆ ಕೀಳುವಾಗ, ರಾಗಿ ಬೀಸುವಾಗ ಬಂದ ಹಾಡುಗಳು ಜಾನಪದ ಹಾಡುಗಳಾಗಿ ಹೊರಹೊಮ್ಮಿವೆ. ಜಾನಪದ ಜಾತ್ರೆ ಕೇವಲ ವೇದಿಕೆಗೆ ಸೀಮಿತವಾಗದೆ ಬದುಕಿನ ಭಾಗ ವಾಗಬೇಕು. ಇವುಗಳನ್ನು ಉಳಿಸಿಕೊಳ್ಳು ವುದು ನಮ್ಮ ಕರ್ತವ್ಯವಾಗಬೇಕು ಎಂದರು.
ಇದೇ ಸಂದರ್ಭ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ದೊಡ್ಡಗವಿ ಬಸಪ್ಪ, ಮಹೇಶ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಹಿರಿಯ ಜಾನಪದ ಕಲಾವಿದರಾದ ಕಿರಗ ಸೂರು ರಾಜಪ್ಪ, ವೈ.ಎಂ.ಪುಟ್ಟಣ್ಣಯ್ಯ, ಇಂದಿರಮ್ಮ, ಕಾಲೇಜು ಪ್ರಾಂಶುಪಾಲ ಬಿ.ಟಿ. ವಿಜಯ್, ಕಾಲೇಜು ಸಾಂಸ್ಕøತಿಕ ವೇದಿಕೆಯ ಪುಟ್ಟರಾಜು, ಪ್ರೊ.ಮಹದೇವಯ್ಯ, ಪ್ರೊ.ಮನೋನ್ಮಣಿ, ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಪಲ್ಲವಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಹೆಚ್. ಚನ್ನಪ್ಪ ಇನ್ನಿತರರಿದ್ದರು.