ಹೆಣ್ಣಾನೆಗೆ ಕಲ್ಲೆಸೆದಿದ್ದ ವಿಡಿಯೊ ವೈರಲ್!
ಮೈಸೂರು

ಹೆಣ್ಣಾನೆಗೆ ಕಲ್ಲೆಸೆದಿದ್ದ ವಿಡಿಯೊ ವೈರಲ್!

March 13, 2020

ಮೈಸೂರು, ಮಾ.12- ರೈಲ್ವೆ ಬ್ಯಾರಿಕೇಡ್ ದಾಟಲು ಬಂದ ಹೆಣ್ಣಾನೆಯೊಂದರತ್ತ ಅರಣ್ಯ ಇಲಾಖೆ ಸಿಬ್ಬಂದಿ ಕಲ್ಲು ತೂರುತ್ತಿರುವ ಫೋಟೊಗಳು ಫೈರಿಂಗ್ ಪ್ರಸಂಗದ ಬೆನ್ನಲ್ಲೇ ವೈರಲ್ ಆಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಮತ್ತೊಮ್ಮೆ ಟೀಕೆಗೆ ಗುರಿಯಾಗಿದ್ದಾರೆ.

ರೈಲ್ವೆ ಬ್ಯಾರಿಕೇಡ್ ಸಮೀಪ ಬಂದು ನಿಂತಿರುವ ಹೆಣ್ಣಾನೆಯತ್ತ ನಾಲ್ಕೈದು ಸಿಬ್ಬಂದಿ ಕಲ್ಲು ತೂರುತ್ತಿದ್ದಾರೆ. ಒಬ್ಬರ ಬಳಿ ಬಂದೂಕು ಇದೆಯಾದರೂ, ಅವರೂ ಸಹ ಕಲ್ಲು ಎಸೆಯುತ್ತಿದ್ದಾರೆ. ಬುಧವಾರವಷ್ಟೇ ಹೆಡಿಯಾಲ ವಲಯದ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದ ವನ್ಯಜೀವಿ ಪ್ರೇಮಿಗಳು ಇಂದು ಕಲ್ಲು ತೂರಿದ ವೀರರನ್ನು ಜಾಡಿಸಿದ್ದಾರೆ. ಈ ಘಟನೆ ನಡೆದಿರುವುದು ವರ್ಷದ ಹಿಂದೆ ಎಂದು ಕೆಲವರು ಕಾಮೆಂಟ್ ಮಾಡಿದ್ದರೆ, ಮತ್ತೆ ಕೆಲವರು ಅದು ತಮಿಳುನಾಡಿನ ಘಟನೆ ಎಂದಿದ್ದಾರೆ. ಬಹುತೇಕ ಮಂದಿ ನಾಗರಹೊಳೆ ಕಾಡಂಚಿನ ಘಟನೆ ಎಂದಿದ್ದಾರೆ. ಆನೆಯನ್ನು ಅಪಾಯಕ್ಕೆ ಎಡೆಮಾಡದೆ ಉಪಾಯ ವಾಗಿ ಕಾಡಿಗಟ್ಟುವ ಬದಲು, ಕಲ್ಲೆ ಸೆದು ರೊಚ್ಚಿಗೇಳಿಸುವ ಮೂಲಕ ಅಪಾಯ ಮೈಮೇಲೆ ಎಳೆದುಕೊಳ್ಳು ತ್ತಿದ್ದಾರೆ ಎಂದು ಸಾಮಾಜಿಕ ಜಾಲ ತಾಣದಲ್ಲಿ ಕೆಲವರು ಟೀಕಿಸಿದ್ದಾರೆ.

ಆನೆ ನಿಂತಿರುವ ಸ್ಥಳದಿಂದ 15-20 ಮೀ. ಮುಂದೆ ಬಂದಿದ್ದರೆ ಸರಾಗ ವಾಗಿ ಸಿಬ್ಬಂದಿ ಮೇಲೆರಗಬಹು ದಾಗಿತ್ತು. ಅಲ್ಲಿ ಬ್ಯಾರಿಕೇಡ್‍ನ ಒಂದು ಕಂಬಿ ಕಳಚಿಬಿದ್ದಿದೆ. ಈ ಹಿನ್ನೆಲೆಯಲ್ಲಿ ಆನೆಯನ್ನು ಹಿಮ್ಮೆಟ್ಟಿಸಲು ಹಾಗೂ ಕಾಡಂಚಿನ ಗ್ರಾಮಗಳ ಹೊಲದಲ್ಲಿ ಕೆಲಸ ಮಾಡುವ ರೈತರ ಹಿತಕಾಯಲು ಅರಣ್ಯ ಇಲಾಖೆ ಸಿಬ್ಬಂದಿ ಆನೆಗೆ ಕಲ್ಲೆಸೆದು ಹೆದರಿಸಿರಬಹುದು ಎಂದು ಕೆಲವರು ಸಮರ್ಥಿಸಿಕೊಂಡಿದ್ದಾರೆ

Translate »