ಪ್ರಾಣಿಗಳಿಗಾಗಿ ಮೈಸೂರಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ
ಮೈಸೂರು

ಪ್ರಾಣಿಗಳಿಗಾಗಿ ಮೈಸೂರಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ

March 13, 2020

ಮೈಸೂರು, ಮಾ.12- ಮನುಷ್ಯ ತನ್ನ ಆರೋಗ್ಯದಂತೆಯೇ ಪ್ರಾಣಿಗಳ ಸುರಕ್ಷತೆ ಹಾಗೂ ಆರೋಗ್ಯದ ಮೇಲೆ ಹೆಚ್ಚು ಕಾಳಜಿ ವಹಿಸುತ್ತಿದ್ದಾನೆ.

ಪ್ರಾಣಿ, ಪಕ್ಷಿಗಳ ಬಗ್ಗೆ ನಿಸರ್ಗಪ್ರಿಯ ರಂತೂ ಇನ್ನೂ ಹೆಚ್ಚು ಆಸಕ್ತಿ ತೋರು ವುದುಂಟು. ಇತ್ತೀಚಿನ ದಿನಗಳಲ್ಲಿ ಪ್ರಾಣಿ ಗಳ ವೈದ್ಯಕೀಯ ಸೇವಾ ಕಾರ್ಯ ವಿಸ್ತಾರ ವಾಗಿರುವುದರಿಂದ ಅವುಗಳ ಚಿಕಿತ್ಸೆ, ಪೋಷಣೆ ಹಾಗೂ ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾ ರವೂ ಸಹ ಪಶುಸಂಗೋಪನಾ ಇಲಾಖೆ ಮೂಲಕ ಪಶು ಆಸ್ಪತ್ರೆಗಳನ್ನು ಅಗತ್ಯ ಮೂಲಭೂತ ಸೌಕರ್ಯಗಳೊಂದಿಗೆ ಉನ್ನತೀಕರಿಸಿ ಹೈಟೆಕ್ ಸ್ಪರ್ಶ ನೀಡುತ್ತಿದೆ.

ಮೈಸೂರು ನಗರದ ಹೃದಯ ಭಾಗದ ಧನ್ವಂತರಿ ರಸ್ತೆಯಲ್ಲಿರುವ ಪಶುಪಾಲನಾ ಮತ್ತು ಪಶುಸಂಗೋಪನಾ ಇಲಾಖೆ ಕಚೇರಿ ಆವರಣದಲ್ಲಿ ಪ್ರಾಣಿ-ಪಕ್ಷಿಗಳಿಗಾಗಿ ಮಲ್ಟಿ ಸ್ಪೆಷಾಲಿಟಿ ಹೈಟೆಕ್ ಆಸ್ಪತ್ರೆ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ.

ಸುಮಾರು 80 ಚದರಡಿ ವಿಸ್ತಾರ ದಲ್ಲಿ ತಲೆ ಎತ್ತಿರುವ 2.5 ಕೋಟಿ ರೂ. ವೆಚ್ಚದ ಹೈಟೆಕ್ ಆಸ್ಪತ್ರೆಗೆ 70 ಲಕ್ಷ ರೂ. ಮೌಲ್ಯದ ಎಕ್ಸ್‍ರೇ, ಸ್ಕ್ಯಾನಿಂಗ್ ಮೆಷಿನ್, ಆಪರೇಷನ್ ಥಿಯೇಟರ್ ಉಪಕರಣ ಗಳನ್ನು ಇನ್ನೊಂದು ತಿಂಗಳಲ್ಲಿ ಅಳವಡಿ ಸಲಾಗುವುದು ಎಂದು ಪಶುಪಾಲನಾ ಇಲಾಖೆ ಅಸಿಸ್ಟೆಂಟ್ ಡೈರೆಕ್ಟರ್ ಡಾ. ಎಸ್.ಸಿ.ಸುರೇಶ್ ತಿಳಿಸಿದ್ದಾರೆ.

Construction of Multi Specialty Hospital in Mysore for Animals-3

ಹಿಂದಿನ ಸರ್ಕಾರದಲ್ಲಿ ಮಂಜೂರಾ ಗಿದ್ದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡ ವನ್ನು ಕರ್ನಾಟಕ ಗೃಹ ಮಂಡಳಿಯು ಕಳೆದ ಎರಡು ವರ್ಷಗಳಿಂದ ನಿರ್ಮಿ ಸುತ್ತಿದ್ದು, ಸಿವಿಲ್ ಕಾಮಗಾರಿ ಪೂರ್ಣ ಗೊಂಡಿದ್ದು, ಅತ್ಯಾಧುನಿಕ ಉಪಕರಣ ಗಳು ಬಂದ ನಂತರ 2 ತಿಂಗಳಲ್ಲಿ ಚಿಕಿತ್ಸಾ ಸೇವೆ ಆರಂಭಿಸಲು ಸಕಲ ರೀತಿಯಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ.Construction of Multi Specialty Hospital in Mysore for Animals-4

 

ಸರ್ಜರಿ, ಮೆಡಿಸಿನ್, ಗೈನಕಾಲಜಿ, ಕಾರ್ಡಿಯಾಕ್ ಕೇರ್, ಆರ್ಥೋ, ಹೊರ ರೋಗಿ, ಒಳರೋಗಿ ವಿಭಾಗ, ತುರ್ತು ಚಿಕಿತ್ಸಾ ಘಟಕ, ಸುಸಜ್ಜಿತ ಆಪರೇಷನ್ ಥಿಯೇಟರ್, ಎಕ್ಸ್‍ರೇ, ಸ್ಕ್ಯಾನಿಂಗ್ ಘಟಕ ವನ್ನು ಹೊಂದಿರುವ ಪಾಲಿಕ್ಲಿನಿಕ್‍ನಲ್ಲಿ ಮನುಷ್ಯರ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಯಂತೆಯೇ ಎಲ್ಲಾ ಸೌಲಭ್ಯಗಳನ್ನು ಒದಗಿ ಸಲಾಗಿದೆ. ದನ, ಎಮ್ಮೆ, ಕುರಿ, ಕೋಳಿ, ಮೇಕೆ, ಕುದುರೆ, ನಾಯಿ, ಕೋತಿ, ಮೊಲ, ಹಂದಿ ಇನ್ನಿತರ ಪ್ರಾಣಿ, ಪಕ್ಷಿಗಳಿಗೆ ಈ ಆಸ್ಪತ್ರೆ ಯಲ್ಲಿ ದಿನದ 24 ಗಂಟೆಯೂ ಚಿಕಿತ್ಸಾ ಸೌಲಭ್ಯ ನೀಡಲಾಗುವುದು. 24×7 ಪ್ರಯೋ ಗಾಲಯ, ಕೃತಕ ಗರ್ಭಧಾರಣೆ ಸೇರಿ ದಂತೆ ಎಲ್ಲಾ ಬಗೆಯ ಆರೋಗ್ಯ ಸೇವೆ ಇಲ್ಲಿ ಲಭ್ಯವಿರುತ್ತದೆ. ಕಿಡ್ನಿ, ಲಿವರ್, ಹಾರ್ಟ್ ಫಂಕ್ಷನಿಂಗ್ ಟೆಸ್ಟ್, ಬಿಪಿ, ಷುಗರ್, ಹೃದಯ ಬಡಿತದ ಪರೀಕ್ಷೆ, ಸಂತಾನ ಹರಣ ಶಸ್ತ್ರಚಿಕಿತ್ಸೆ, ಅಗತ್ಯವಿರುವ ಪ್ರಾಣಿ ಗಳಿಗೆ ಗರ್ಭಕೋಶ ತೆಗೆಯುವ ವ್ಯವಸ್ಥೆ ಯನ್ನು ಪಾಲಿಕ್ಲಿನಿಕ್‍ನಲ್ಲಿ ಒದಗಿಸಲಾಗಿದೆ. ಓರ್ವ ವೆಟರ್ನರಿ ಸರ್ಜನ್, ಓರ್ವ ಇನ್‍ಸ್ಪೆಕ್ಟರ್, ಟೆಕ್ನಿಷಿಯನ್‍ಗಳು, ವೈದ್ಯರು, ಟೆಕ್ನಿಕಲ್ ಸ್ಟಾಫ್ ಅನ್ನು ನಿಯೋಜನೆ ಮಾಡಲಾಗಿದ್ದು, ಉಪ ನಿರ್ದೇಶಕರು ಆಸ್ಪತ್ರೆಯ ಸಂಪೂರ್ಣ ಮೇಲ್ವಿಚಾರಣೆ ನಡೆಸುವರು.

ಎಸ್.ಟಿ.ರವಿಕುಮಾರ್

Translate »