ಮೈಸೂರು ದೇಶದ ಮೊದಲ ಸ್ವಚ್ಛ ನಗರವಾಗಿ ಹೊರಹೊಮ್ಮಲು ನಾಗರಿಕರ ಸಹಕಾರ ಅತ್ಯಗತ್ಯ
ಮೈಸೂರು

ಮೈಸೂರು ದೇಶದ ಮೊದಲ ಸ್ವಚ್ಛ ನಗರವಾಗಿ ಹೊರಹೊಮ್ಮಲು ನಾಗರಿಕರ ಸಹಕಾರ ಅತ್ಯಗತ್ಯ

January 3, 2020

ಮೈಸೂರು,ಜ.2(ಪಿಎಂ)-ಸ್ವಚ್ಛ ಸರ್ವೇಕ್ಷಣ್ 2020ರ ಸಮೀಕ್ಷಾ ಕಾರ್ಯ ಆರಂಭವಾಗಿರುವ ಹಿನ್ನೆಲೆಯಲ್ಲಿ ಮೈಸೂರು ದೇಶದ ಮೊದಲ ಸ್ವಚ್ಛ ನಗರವಾಗಿ ಹೊರ ಹೊಮ್ಮಲು ನಾಗರಿಕರು ಹಾಗೂ ಸಂಘ-ಸಂಸ್ಥೆಗಳ ಸಹಭಾಗಿತ್ವ ಅತ್ಯಗತ್ಯ ಎಂದು ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಗುರುದತ್ ಹೆಗಡೆ ತಿಳಿಸಿದರು.

ಮೈಸೂರಿನ ತಮ್ಮ ಗೃಹ ಕಚೇರಿಯಲ್ಲಿ ಸ್ವಚ್ಛ ಸರ್ವೇಕ್ಷಣ್ 2020ರ ಸಮೀಕ್ಷಾ ಕಾರ್ಯದ ಹಿನ್ನೆಲೆ ಯಲ್ಲಿ ನಗರಪಾಲಿಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಿಟಿಜನ್ ಅಲರ್ಟ್ ಟೀಮ್ ಸದಸ್ಯರು ಹಾಗೂ ಇತರೆ ಗಣ್ಯರೊಂದಿಗೆ ಗುರುವಾರ ಚರ್ಚಿ ಸಿದ ನಂತರ ಅವರು ಮಾತನಾಡಿದರು.

ರಾಷ್ಟ್ರಮಟ್ಟದ ಈ ಅಭಿಯಾನದಲ್ಲಿ ಮೈಸೂರು ದೇಶದ ಸ್ವಚ್ಛ ನಗರ ಪಟ್ಟಿಯಲ್ಲಿ ಮೊದಲನೇ ಸ್ಥಾನಕ್ಕೆ ತರುವ ಮಹತ್ವದ ಸವಾಲು ನಮ್ಮ ಮುಂದಿದೆ. ಈ ಹಿನ್ನೆಲೆಯಲ್ಲಿ ಪಾಲಿಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಲಹೆಗಳನ್ನು ನೀಡಲು ಅವಕಾಶವಿದೆ. ಜೊತೆಗೆ ನಗರದ ಶಾಲಾ-ಕಾಲೇಜು, ಸಂಘ-ಸಂಸ್ಥೆಗಳು, ಯೋಗ ಸಂಸ್ಥೆಗಳ ಮೂಲಕ ಸಾರ್ವಜನಿಕರಿಗೆ ಜಾಗೃತಿ ಮೂಡಿ ಸುವ ಕಾರ್ಯಕ್ರಮಗಳನ್ನು ಆಯೋಜಿಸುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು.

ಪ್ರತಿ ಬಾರಿಯಂತೆ ಸ್ವಚ್ಛ ನಗರದ ಸಮೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಲು ಪಾಲಿಕೆಯ ಜವಾಬ್ದಾರಿ ಗಳಾದ ತ್ಯಾಜ್ಯ ನಿರ್ವಹಣೆ, ಶೌಚಾಲಯಗಳ ನಿರ್ಮಾಣ ಮೊದಲಾದವುಗಳ ಸಂಬಂಧ ಶೇ.75 ರಷ್ಟು ಅಂಕಗಳಿದ್ದರೆ, ಶೇ.25ರಷ್ಟು ಅಂಕಗಳು ನಾಗರಿ ಕರ ಪ್ರತಿಕ್ರಿಯೆಗೆ ಮೀಸಲಾಗಿರುತ್ತದೆ. ಈ ನಿಟ್ಟಿನಲ್ಲಿ ನಾಗರಿಕರು ತಮ್ಮ ಸಂಪೂರ್ಣ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಸಾರ್ವಜನಿಕರು ನಗರದ ಸ್ವಚ್ಛತೆ ಕುರಿತಂತೆ ಸ್ವಚ್ಛ ಭಾರತ್ ಆ್ಯಪ್ ಹಾಗೂ 1969ಗೆ ಕರೆ ಮಾಡಿ ತಮ್ಮ ಪ್ರತಿಕ್ರಿಯೆ ನೀಡಬೇಕಿದೆ. ಮೈಸೂ ರಿನ ನಾಗರಿಕರು ಉತ್ಸುಕರಾಗಿ ಭಾಗವಹಿಸುವ ನಿಟ್ಟಿ ನಲ್ಲಿ ಜಾಗೃತಿ ಮೂಡಿಸಲು ಅಗತ್ಯವಿರುವ ಕಾರ್ಯ ಕ್ರಮಗಳನ್ನು ರೂಪಿಸಬೇಕಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳ ಮೂಲಕ ಪೆÇೀಷಕರಿಗೆ ಜಾಗೃತಿ ಮೂಡಿಸುವುದು ಹಾಗೂ ಚಲನಚಿತ್ರ ಮಂದಿರಗಳಲ್ಲಿ ಜಾಗೃತಿ ಕಾರ್ಯಕ್ರಮ ಏರ್ಪಡಿಸುವುದು ಸೇರಿದಂತೆ ಇತರೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ ಎಂದರು.

ಸಿಟಿಜನ್ ಅಲರ್ಟ್ ಟೀಮ್‍ನ ಕರ್ನಲ್ ರವಿ, ಮುರುಳಿ, ಜಿಎಸ್‍ಎಸ್ ಯೋಗ ಪೌಂಡೇಶನ್ ಅಧ್ಯಕ್ಷ ಶ್ರೀಹರಿ, ಪತಾಂಜಲಿ ಯೋಗ ಸಂಸ್ಥೆಯ ಶಶಿ ಕುಮಾರ್, ಕ್ರೆಡಾಯ್ ಸಂಸ್ಥೆಯ ಅಧ್ಯಕ್ಷ ಸುಬ್ರಹ್ಮಣ್ಯ, ಉಪಾಧ್ಯಕ್ಷ ಎನ್.ಎಸ್.ಮುರುಳಿಧರ್, ಜಿಲ್ಲಾ ಪತ್ರ ಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾ ಯಕ ನಿರ್ದೇಶಕ ಆರ್.ರಾಜು, ಪಾಲಿಕೆ ಆರೋಗ್ಯಾಧಿ ಕಾರಿ ಡಾ.ನಾಗರಾಜು, ಪರಿಸರ ಇಂಜಿನಿಯರ್‍ಗಳಾದ ಮೈತ್ರಿ, ಪೂರ್ಣಿಮಾ ಮತ್ತಿತರರು ಪಾಲ್ಗೊಂಡಿದ್ದರು.

Translate »