ಮಂತ್ರಾಲಯವನ್ನು ಕರ್ನಾಟಕಕ್ಕೆ ಸೇರಿಸಿ: ಆಂಧ್ರ ಸಿಎಂಗೆ ಟಿಡಿಪಿ ಮಾಜಿ ಶಾಸಕ ಮನವಿ
ಮೈಸೂರು

ಮಂತ್ರಾಲಯವನ್ನು ಕರ್ನಾಟಕಕ್ಕೆ ಸೇರಿಸಿ: ಆಂಧ್ರ ಸಿಎಂಗೆ ಟಿಡಿಪಿ ಮಾಜಿ ಶಾಸಕ ಮನವಿ

January 3, 2020

ಬೆಂಗಳೂರು, ಜ.2- ಮಂತ್ರಾಲಯವನ್ನು ಕರ್ನಾಟಕಕ್ಕೆ ಸೇರಿಸಿ ಎಂಬ ಒತ್ತಾಯ ಆಂಧ್ರಪ್ರದೇಶದಲ್ಲಿಯೇ ಕೇಳಿಬರುತ್ತಿದೆ.

ಟಿಡಿಪಿ(ತೆಲುಗು ದೇಶಂ ಪಕ್ಷದ) ಮಾಜಿ ಶಾಸಕ ತಿಕ್ಕಾರೆಡ್ಡಿ ಈ ಒತ್ತಾಯ ಮಾಡಿದ್ದಾರೆ. ಸಿಎಂ ಜಗನ್ ಮೋಹನ್ ರೆಡ್ಡಿ ನೇತೃತ್ವ ಸರ್ಕಾರದ ಗಮನ ಸೆಳೆದಿದ್ದಾರೆ. ನಮ್ಮ ಆಚರಣೆ, ಸಂಸ್ಕೃತಿ ಎಲ್ಲವೂ ಕೂಡ ಕನ್ನಡದಲ್ಲಿಯೇ ಇವೆ. ಹೀಗಾಗಿ ನಮ್ಮ ಕರ್ನೂಲ್ ಜಿಲ್ಲೆಯನ್ನು ಕರ್ನಾಟಕಕ್ಕೆ ಸೇರಿಸಿ, ವಿಶಾಖಪಟ್ಟಣಂಗೆ ಸೇರಿಸಬೇಡಿ. ಹಾಗೊಮ್ಮೆ ಸೇರಿಸಿದರೆ ತುಂಬಾ ಕಷ್ಟವಾಗುತ್ತದೆ ಎಂದು ಆಗ್ರಹಿಸಿದ್ದಾರೆ. ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರೂ ಇದ್ದಾರೆ. ಹೀಗಾಗಿ ಈ ಭೌಗೋಳಿಕ ಪ್ರದೇಶವನ್ನು ಕರ್ನಾಟಕಕ್ಕೆ ಸೇರಿಸುವುದೇ ನ್ಯಾಯ ಎಂದು ಜಗನ್‍ಮೋಹನ್ ರೆಡ್ಡಿ ಅವರಿಗೆ ತಿಕ್ಕಾ ರೆಡ್ಡಿ ಒತ್ತಾಯಿಸಿದ್ದಾರೆ.

Translate »