ಡಿಸೆಂಬರ್ 3, ಕೂಡುಗದ್ದೆ ಗ್ರಾಮಕ್ಕೆ ಮೂಲಭೂತ ಸೌಲಭ್ಯ ಆಗ್ರಹಿಸಿ ಸಿದ್ದಾಪುರ ಗ್ರಾಪಂ ಮುಂದೆ ಪ್ರತಿಭಟನೆ
ಕೊಡಗು

ಡಿಸೆಂಬರ್ 3, ಕೂಡುಗದ್ದೆ ಗ್ರಾಮಕ್ಕೆ ಮೂಲಭೂತ ಸೌಲಭ್ಯ ಆಗ್ರಹಿಸಿ ಸಿದ್ದಾಪುರ ಗ್ರಾಪಂ ಮುಂದೆ ಪ್ರತಿಭಟನೆ

November 26, 2018

ಸಿದ್ದಾಪುರ: ಸ್ಥಳೀಯ ಗ್ರಾಮ ಪಂಚಾಯತಿ ಮೂಲಭೂತ ಸೌಲಭ್ಯ ಗಳನ್ನು ಒದಗಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿ ಡಿ. 3 ರಂದು ಗ್ರಾಮ ಪಂಚಾಯತಿ ಎದುರು ಸಿಪಿಎಂ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸುವುದಾಗಿ ಪಕ್ಷದ ಕೂಡುಗದ್ದೆ ಶಾಖೆಯ ಕಾರ್ಯ ದರ್ಶಿ ಅನಿಲ್ ಕುಟ್ಟಪ್ಪ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮ ಪಂಚಾಯತಿ ವ್ಯಾಪ್ತಿಯ ನದಿ ದಡದಲ್ಲಿರುವ ಹಲವು ಮನೆಗಳು ಬಿರುಕು ಬಿಟ್ಟಿದ್ದು, ಕೂಡಲೇ ಅವರನ್ನು ಸ್ಥಳಾಂತರಿಸಬೇಕಾಗಿದೆ. ಗ್ರಾಮ ಪಂಚಾ ಯತಿ ವ್ಯಾಪ್ತಿಯಲ್ಲಿ ಸಾಕಷ್ಟು ಪೈಸಾರಿ ಜಾಗಗಳಿದ್ದು, ನದಿ ದಡದ ನಿವಾಸಿಗಳಿಗೆ ಸೂಕ್ತ ನಿವೇಶನ ಒದಗಿಸಬೇಕು. ಕೂಡುಗದ್ದೆ ಭಾಗದ ಎಲ್ಲಾ ರಸ್ತೆಗಳು ಹಾಳಾಗಿದ್ದು, ವಾಹನ ಸಂಚಾರಕ್ಕೆ ತೊಡಕುಂಟಾಗಿದೆ. ಕುಡಿಯುವ ನೀರಿನ ಸಮಸ್ಯೆ ಇದ್ದು ಗ್ರಾಮ ಪಂಚಾಯಿತಿ ಗ್ರಾಮವನ್ನು ಕಡೆಗಣಿಸಿದೆ
ಕಕ್ಕಟ್ಟುಕಾಡು ಗ್ರಾಮಕ್ಕೆ ತೆರಳಲು ರಸ್ತೆ ಸಂಪರ್ಕ ಇಲ್ಲದೆ ಜನರು ಪರದಾಡು ವಂತಾಗಿದೆ ಗ್ರಾಮ ಪಂಚಾಯತಿ ಆಡ ಳಿತ ಮಂಡಳಿ ರಸ್ತೆ ಸಮಸ್ಯೆ ಬಗೆಹರಿಸ ಬೇಕೆಂದು ಒತ್ತಾಯಿಸಿದರು.

ಅತ್ಯಧಿಕ ಆದಾಯ ಇರುವ ಗ್ರಾಮ ಪಂಚಾಯತಿಯ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಪಕ್ಷದ ಜನವಿರೋಧಿ ನಿಲುವಿ ನಿಂದಾಗಿ ಜನರು ಮೂಲಭೂತ ಸೌಲಭ್ಯ ದಿಂದ ವಂಚಿತರಾಗಿದ್ದು, ವಿವಿಧ ಬೇಡಿಕೆಗ ಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿಭ ಟನೆ ನಡೆಸುವುದಾಗಿ ತಿಳಿಸಿದರು. ಪತ್ರಿಕಾ ಗೋಷ್ಠಿಯಲ್ಲಿ ಕೂಡುಗದ್ದೆ ಗ್ರಾಮ ಸಮಿತಿ ಸದಸ್ಯರಾದ ಮೊಯಿದು, ವಾಸು, ಪಕ್ಷದ ಮುಖಂಡ ಸಿ.ಯು ಮುಸ್ತಫ ಇತರರಿದ್ದರು.

Translate »