ಪೆರೂರಿನಲ್ಲಿ ಕಾಡಾನೆ ದಾಳಿ; ಕದಿರು ತೆಗೆಯುವ ಗದ್ದೆ ನಾಶ
ಕೊಡಗು

ಪೆರೂರಿನಲ್ಲಿ ಕಾಡಾನೆ ದಾಳಿ; ಕದಿರು ತೆಗೆಯುವ ಗದ್ದೆ ನಾಶ

November 24, 2018

ನಾಪೋಕ್ಲು: ಇಲ್ಲಿಗೆ ಸಮೀಪದ ಬಲ್ಲಮಾವಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೆರೂರು ಗ್ರಾಮಕ್ಕೆ ಲಗ್ಗೆ ಇಟ್ಟ ಕಾಡಾನೆಗಳು ಹುತ್ತರಿ ಆಚರಣೆಗೆ ಆತಂಕ ತಂದೊಡ್ಡಿವೆ.

ಹುತ್ತರಿ ಕದಿರು ತೆಗೆಯುವ ಗದ್ದೆಗೆ ಕಾಡಾನೆಗಳು ದಾಳಿ ಇಟ್ಟು ಧ್ವಂಸ ಮಾಡಿದ ಘಟನೆ ಕಳೆದ ರಾತ್ರಿ ಜರುಗಿದೆ. ಕೊಡಗಿನ ರೈತಾಪಿ ಜನರು ಧಾನ್ಯ ಲಕ್ಷ್ಮಿಯನ್ನು ಬರ ಮಾಡಿ ಕೊಳ್ಳುವ ಸಂಭ್ರಮದಲ್ಲಿದ್ದುರು. ಆದರೆ ಪೇರೂರು ಗ್ರಾಮಸ್ಥರಿಗೆ ಆತಂಕ ಎದುರಾ ಗಿದೆ. ಪೆರೂರು ಗ್ರಾಮದ ತಾಪಂಡ ಕುಟುಂಬಸ್ಥರು ತಮ್ಮ ಹಿರಿಯರ ಕಾಲದಿಂದ ಹುತ್ತರಿ ಕದಿರು ತೆಗೆಯುವ ಗದ್ದೆಗೆ ಒಂದು ದಿನ ಇರುವಂತೆ ಈ ಘಟನೆ ನಡೆದಿದ್ದು ಗ್ರಾಮಸ್ಥರು ಕಂಗಾಲಾಗಿದ್ದಾರೆ. ಇಲ್ಲಿನ ತಾಪಂಡ ಗಣೇಶ್ ಮತ್ತಿತರರು ಕಷ್ಟಪಟ್ಟು ಬೆಳೆದು ಭತ್ತ ಕೈಗೆ ಬರುವ ಅವಧಿಯಲ್ಲಿ ಬಾಯಿಗೆ ಬಾರದಂತಾಗಿದೆ. ಕಾಡಾನೆಗಳು ಈ ವ್ಯಾಪ್ತಿಯಲ್ಲಿ ಆಗಾಗ್ಗೆ ಕಾಣಿಸಿಕೊಂಡು ರೈತರು ಬೆಳೆದ ಫಸಲು ನಷ್ಟವಾಗುತ್ತಿದೆ. ಅರಣ್ಯ ಇಲಾಖೆ ಕಾಡಾನೆಗಳ ಉಪಟಳಕ್ಕೆ ಕಡಿವಾಣ ಹಾಕಬೇಕು. ನಷ್ಟಕ್ಕೊಳಗಾದ ರೈತರಿಗೆ ಪರಿಹಾರ ವಿತರಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Translate »