ಮೈಸೂರು: ಮೈಸೂರು ಕುವೆಂಪುನಗರದ ಡಿ.ಎಂ.ಟ್ರಸ್ಟ್ ಆಶ್ರಯದಲ್ಲಿ ಅಮೇರಿಕಾ ನಿವಾಸಿ ಮಾಳೇಟಿರ ಬಿ.ತಿಮ್ಮಯ್ಯ ಅವರ ‘ನಾವ್ಯಾರು ಕೊಡವರು’ ಕೃತಿಯ ಕನ್ನಡ ಹಾಗೂ ಇಂಗ್ಲಿಷ್ ಅವತರಣಿಕೆ ಬಿಡುಗಡೆ ಸಮಾರಂಭವು ನ.25ರ ಭಾನುವಾರ ನಡೆಯಲಿದೆ.
ಅಂದು ಸಂಜೆ 5 ಗಂಟೆಗೆ ಮೈಸೂರು ಝಾನ್ಸಿ ರಾಣಿ ಲಕ್ಷ್ಮಿಬಾಯಿ ರಸ್ತೆಯಲ್ಲಿರುವ ರೋಟರಿ ಸಭಾಂಗಣದಲ್ಲಿ ಸಮಾರಂಭ ನಡೆಯಲಿದ್ದು, ‘ಮೈಸೂರು ಮಿತ್ರ’ ಹಾಗೂ ‘ಸ್ಟಾರ್ ಆಫ್ ಮೈಸೂರು’ ದಿನಪತ್ರಿಕೆಯ ಪ್ರಧಾನ ಸಂಪಾದಕರಾದ ಕೆ.ಬಿ.ಗಣಪತಿ ಕೃತಿಗಳನ್ನು ಲೋಕಾರ್ಪಣೆ ಗೊಳಿಸಲಿದ್ದಾರೆ. ಅಧ್ಯಕ್ಷತೆಯನ್ನು ಖ್ಯಾತ ನ್ಯಾಯ ವಾದಿ ಜೆ.ಎಂ.ಅಯ್ಯಣ್ಣ ವಹಿಸಲಿದ್ದು, ಕೃತಿ ಲೇಖಕರು ಹಾಗೂ ಅಟಾರ್ನಿ ಆಫ್ ಲಾ, ಫೆಡರಲ್ ಕೋರ್ಟ್ ಆಫ್ ಅಮೇರಿಕಾದ ಎಂ.ಬಿ.ತಿಮ್ಮಯ್ಯ ಉಪಸ್ಥಿತರಿರುತ್ತಾರೆ. ಮುಖ್ಯ ಅತಿಥಿಗಳಾಗಿ ಡಿ.ಎಂ.ಟ್ರಸ್ಟ್ ಅಧ್ಯಕ್ಷ ಡಾ.ಡಿ.ತಮ್ಮಯ್ಯ, ಶಿವಮೊಗ್ಗದ ಕಮರ್ಷಿಯಲ್ ಟ್ಯಾಕ್ಸ್ ಜಂಟಿ ಆಯುಕ್ತರಾದ ಹೆಚ್.ಜಿ.ಪವಿತ್ರ ಹಾಗೂ ವೈದ್ಯವಾರ್ತ ಪ್ರಕಾಶನದ ನಿರ್ದೇಶಕ ಡಾ.ಎಂಜಿಆರ್ ಅರಸ್ ಭಾಗವಹಿಸಲಿದ್ದಾರೆ.