ಆರ್ಜಿ ಗ್ರಾಪಂ ವ್ಯಾಪ್ತಿಯಲ್ಲಿ ಮೂಲ ಸೌಲಭ್ಯಕ್ಕೆ ಕ್ರಮ
ಕೊಡಗು

ಆರ್ಜಿ ಗ್ರಾಪಂ ವ್ಯಾಪ್ತಿಯಲ್ಲಿ ಮೂಲ ಸೌಲಭ್ಯಕ್ಕೆ ಕ್ರಮ

November 24, 2018

ವಿರಾಜಪೇಟೆ: ವಿರಾಜಪೇಟೆ ಬಳಿಯ ಆರ್ಜಿ ಗ್ರಾಪಂ ಫಲಾನುಭವಿಗಳಿಗೆ ವಿದ್ಯುತ್ ದೀಪ, ಕುಡಿಯುವ ನೀರು, ಕಟ್ಟಡ ಮತ್ತು ವಾಣಿಜ್ಯ ಪರವಾನಗಿ, ಖಾತೆ ವರ್ಗಾವಣೆ ಹಾಗೂ ನಿರಾಕ್ಷೇಪಣಾ ಪತ್ರ ಸೇರಿದಂತೆ ಮೂಲ ಭೂತ ಸೌಲಭ್ಯಗಳಿಗೆ ಅರ್ಜಿ ನೀಡಲಾಯಿತು.

ಗ್ರಾಪಂ ಅಧ್ಯಕ್ಷೆ ಹೆಚ್.ಎನ್.ಗಾಯಿತ್ರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾ ಡಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೆ.ಎಂ. ಸತೀಶ್ ಕುಮಾರ್, ಕಳೆದ 2-3 ತಿಂಗಳಿಂದಲೂ ಸಭೆಯನ್ನು ನಡೆಸಿಲ್ಲ ಎಂದು ಪಂಚಾಯಿತಿ ಅಧ್ಯಕ್ಷೆ ಮತ್ತು ಕೆಲವು ಸದಸ್ಯರುಗಳು ತಾಪಂ ಕಾರ್ಯನಿರ್ವಹಣಾಧಿಕಾರಿ ಬಿ.ವಿ.ಜಯಣ್ಣ ಅವರಿಗೆ ದೂರು ನೀಡಿದ್ದರು. ಈ ಹಿನ್ನಲೆ ಯಲ್ಲಿ ಜಯಣ್ಣ ಅವರು ಆಗಮಿಸಿ ಕೆಲವು ತಿಂಗಳಿನಿಂದ ಪಂಚಾಯಿತಿಯಲ್ಲೇ ಬಾಕಿವುಳಿ ದಿದ್ದ 95 ಅರ್ಜಿಗಳನ್ನು ವಿಲೇವಾರಿ ಮಾಡ ಲಾಯಿತು ಎಂದರು. ಬಳಿಕ ಮಾತನಾಡಿದ ಜಯಣ್ಣ, ಪಂಚಾಯಿತಿಯಲ್ಲಿ ವೈಯಕ್ತಿಕ ದ್ವೇಷ ವನ್ನು ಬಿಟ್ಟು ಅಧ್ಯಕ್ಷರು ಮತ್ತು ಸದಸ್ಯರು ಗಳು ಹೊಂದಾಣಿಕೆಯಿಂದ ಅಭಿವೃದ್ಧಿ ಕಡೆಗೆ ಗಮನ ಹರಿಸುವಂತೆ ಹೇಳಿದರು.

ಈ ಸಂದರ್ಭ ಉಪಾಧ್ಯಕ್ಷ ಬಿ.ಎಂ.ರಮೇಶ್ ಗಿರಿ ಮಾತನಾಡಿ, ಪಂಚಾಯಿತಿಯ ವ್ಯಾಪ್ತಿ ಯಲ್ಲಿರುವ ಅನ್ವರ್ ಉಲ್ ಹುದಾ ಸೆಂಟರ್ ಮತ್ತು ಪೆರುಂಬಾಡಿಯಲ್ಲಿರುವ ಕೂರ್ಗ್ ಗೇಟ್ ಹೋಟೆಲ್‍ಗೆ ಪಿಡಿಒ ಅವರು ಪಂಚಾ ಯಿತಿ ಸದಸ್ಯರ ಗಮನಕ್ಕೆ ತಾರದೆ ನಿರಾಕ್ಷೇ ಪಣಾ ಪತ್ರ ನೀಡಿರುವುದಲ್ಲದೆ, ಮನ ಬಂದಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ದೂರಿದರು. ಇದಕ್ಕೆ ಉತ್ತರಿಸಿದ ಕಾರ್ಯ ನಿರ್ವಹಣಾಧಿ ಕಾರಿ ಈ ಎರಡು ವಿಚಾರಗಳು ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಳಿ ಇದ್ದು ಅದರ ಪರಿಶೀಲನೆ ಆದೇಶ ಬರುವವರೆಗೂ ಯಥಾ ಸ್ಥಿತಿ ಕಾಯ್ದುಕೊಳ್ಳುವಂತೆ ತಿಳಿಸಿದರು.

ಸಭೆಗೆ ಅತಿಥಿಯಾಗಿ ಆಗಮಿಸಿದ್ದ ಜಿಪಂ ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ ಮಾತ ನಾಡಿ, ಪಂಚಾಯಿತಿ ಅಧ್ಯಕ್ಷರು ಮತ್ತು ಸದ ಸ್ಯರುಗಳ ಹೊಂದಾಣಿಕೆ ಇಲ್ಲದಿದ್ದರೆ ಯಾವುದೇ ಅಭಿವೃದ್ಧಿ ಕೆಲಸಗಳು ಸಾಧ್ಯವಿಲ್ಲ. ಚುನಾ ವಣೆ ಸಂದರ್ಭ ಜನರಿಗೆ ನೀಡಿದ ಭರವಸೆ ಯನ್ನು ಪೂರೈಸುವುದು ನಿಮ್ಮ ಕರ್ತವ್ಯ. ಅದ ರಿಂದ ಸದಸ್ಯರುಗಳು ಹೊಂದಾಣಿಕೆಯಿಂದ ಕೆಲಸ ಮಾಡಬೇಕಾಗಿದೆ ಎಂದರು.

ಸಭೆಯಲ್ಲಿ ಉಪಸ್ಥಿತರಿದ್ದ ತಾಪಂ ಸದಸ್ಯ ಬಿ.ಎಂ.ಗಣೇಶ್ ಮಾತನಾಡಿ, ಸರಕಾರದಿಂದ ಪಂಚಾಯಿತಿಗೆ ಬರುವ ಅನುದಾನವನ್ನು ಕುಡಿಯುವ ನೀರು, ರಸ್ತೆ, ಇತರ ಅಭಿ ವೃದ್ಧಿ ಕೆಲಸಗಳಿಗೆ ಬಳಸಿಕೊಳ್ಳುವ ಮೂಲಕ ಜನರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದು ಅದ್ಯ ಕರ್ತವ್ಯವಾಗಿದೆ ಎಂದರು.

ಸಭೆಯಲ್ಲಿ ಪಂಚಾಯಿತಿಯ ಅಭಿವದ್ಧಿ ಅಧಿಕಾರಿ ಕೆ.ಎಂ.ಸತೀಶ್ ಕುಮಾರ್, ಸದಸ್ಯರುಗಳಾದ ಟಿ.ಎನ್.ಲವಕುಮಾರ್, ಹೆಚ್.ಬಿ.ಉದಯಕುಮಾರ್, ಜಾಫರ್ ಸಾಧಿಕ್, ಟಿ.ಕೆ.ಬಶೀರ್ ಮಾತನಾಡಿದರು. ಮಹಿಳಾ ಸದಸ್ಯರುಗಳಾದ ಶ್ರೀಜಾ ಜಯನ್, ಹೆಚ್.ಬಿ.ಪಾರ್ವತಿ, ಎನ್.ಎನ್. ಫಾತಿಮಾ, ಇತರರು ಉಪಸ್ಥಿತರಿದ್ದರು.

Translate »