ಮಡಿಕೇರಿ: ಧಾನ್ಯಲಕ್ಷ್ಮಿಯನ್ನು ಮನೆ ತುಂಬಿಕೊಳ್ಳುವ ಕೊಡಗಿನ ಸಾಂಪ್ರ ದಾಯಿಕ ಹುತ್ತರಿ ಹಬ್ಬಕ್ಕೆ ಜಿಲ್ಲೆ ಸಜ್ಜಾಗಿದೆ ಯಾದರೂ, ಹಿಂದಿನ ಸಂಭ್ರಮ ಕಂಡು ಬರುತ್ತಿಲ್ಲ. ಕೊಡವರು, ಗೌಡ ಸಮು ದಾಯ ಮಾತ್ರವಲ್ಲದೇ ಜಿಲ್ಲೆಯ ಬಹು ತೇಕ ಎಲ್ಲಾ ಸಮುದಾಯದವರು ಹುತ್ತರಿ ಹಬ್ಬವನ್ನು ತಲತಲಾಂತರದಿಂದ ಆಚರಿಸಿ ಕೊಂಡು ಬರುತ್ತಿದ್ದರು. ಆದರೆ, ಆಗಸ್ಟ್ ತಿಂಗಳಲ್ಲಿ ಪ್ರಕೃತಿ ವಿಕೋಪ ಘಟಿಸಿದ ಬಳಿಕ ಜಿಲ್ಲೆಯ ಸಾಂಪ್ರದಾಯಿಕ ಹಬ್ಬಗಳ ಮೇಲೆ ಕಣ್ಣೀರಿನ ಕರಿ ಮೋಡ ಕವಿದಿದೆ. ಭೂ ಕುಸಿತ ಪ್ರವಾಹದಿಂದಾಗಿ ಭತ್ತದ ಗದ್ದೆಗಳೆಲ್ಲವೂ ಸರ್ವನಾಶಗೊಂಡಿದ್ದು, ಇದನ್ನೇ ನಂಬಿದ್ದ…
ಮೈಸೂರು ಕೊಡವ ಸಮಾಜ, ಕೊಡಗು ಗೌಡ ಸಮಾಜದಿಂದ ಇಂದು ಹುತ್ತರಿ ಹಬ್ಬ
November 23, 2018ಮೈಸೂರು: ಮೈಸೂರು ಕೊಡವ ಸಮಾಜ ಮತ್ತು ಕೊಡಗು ಗೌಡ ಸಮಾಜದ ಸಂಯುಕ್ತ ಆಶ್ರಯದಲ್ಲಿ ನಾಳೆ (ನ. 23) ಸಂಜೆ 5.30 ಗಂಟೆ ನಂತರ ಕುವೆಂಪುನಗರದ ಆದಿಚುಂಚನಗಿರಿ ರಸ್ತೆಯಲ್ಲಿರುವ ಶ್ರೀಕಾವೇರಿ ಶಿಕ್ಷಣ ಸಂಸ್ಥೆ ಮೈದಾನದಲ್ಲಿ ಹುತ್ತರಿ ಹಬ್ಬ ಆಚರಿಸಲಾಗುವುದು. ಇದರ ಅಂಗವಾಗಿ ಕೊಡವ ಸಾಂಪ್ರದಾಯಿಕ ನೃತ್ಯ ಪ್ರದರ್ಶನವಿದೆ. ಸಂಜೆ 7.30 ಗಂಟೆಗೆ ನೆರೆ ಕಟ್ಟುವ ಕಾರ್ಯಕ್ರಮ ನಡೆಯಲಿದೆ. ರಾತ್ರಿ 8.30ಕ್ಕೆ ಹೊಸ ಭತ್ತದ ಕೊಯ್ಲು (ಕದಿರು), 9.30ಕ್ಕೆ ತಂಬಟ್ಟು ಪ್ರಸಾದ ವಿತರಣೆ ನಡೆಯಲಿದೆ. ಕಳೆದ ವರ್ಷ ವಿಜಯನಗರದ ಸಮಾಜದ…
ನ.28, ಕಾವೇರಿ ಕಾರ್ನಿವಲ್ ಫನ್‍ಫೇರ್
November 23, 2018ವಿರಾಜಪೇಟೆ: ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ, ವ್ಯವಹಾರ ಚಾತುರ್ಯ, ಸಂವ ಹನ, ಕೌಶಲ ಹಾಗೂ ಕಲಾತ್ಮಕ ಅಭಿವ್ಯಕ್ತಿಯನ್ನು ರೂಪಿಸುವ ನಿಟ್ಟಿನಲ್ಲಿ ವಿರಾಜಪೇಟೆ ಕಾವೇರಿ ಪದವಿ ಪೂರ್ವ ಕಾಲೇಜು ಹಾಗೂ ಗೋಣಿಕೊಪ್ಪಲು ಕಾವೇರಿ ಎಜುಕೇಶನ್ ಸೊಸೈಟಿಯ ಸಹಯೋಗದೊಂದಿಗೆ ನ.28 ರಂದು ಪೂರ್ವಾಹ್ನ 10 ಗಂಟೆಯಿಂದ ಸಂಜೆ 4 ಗಂಟೆವರೆಗೆ ”ಕಾವೇರಿ ಕಾರ್ನಿವಲ್ ಫನ್‍ಫೇರ್-2018” ಎಂಬ ವಿಭಿನ್ನ ಪರಿಕಲ್ಪನೆಯ ಕಲಾ ಮತ್ತು ವೈನೋದಿಕ ಉತ್ಸವವನ್ನು ವಿರಾಜಪೇಟೆ ಕಾವೇರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪ್ರಾಂಶುಪಾಲ ಎನ್.ಎಂ.ನಾಣಯ್ಯ ತಿಳಿಸಿದರು. ವಿರಾಜಪೇಟೆಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ…
ವಿರಾಜಪೇಟೆಯಲ್ಲಿ ಅಪ್ಪಚ್ಚಕವಿ ಜನ್ಮ ದಿನಾಚರಣೆ
November 23, 2018ವಿರಾಜಪೇಟೆ: ಕೊಡಗಿನ ಆದಿಕವಿ ಹರದಾಸ ಅಪ್ಪನೆರವಂಡ ಅಪ್ಪಚ್ಚಕವಿಯ 150ನೇ ಹುಟ್ಟುಹಬ್ಬ ಹಾಗೂ 75ನೇ ಪುಣ್ಯ ಸ್ಮರಣೆಯ ಅಂಗವಾಗಿ ವಿರಾಜಪೇಟೆ ಪಟ್ಟ ಣದ ದೊಡ್ಡಟ್ಟಿ ಚೌಕಿಯಲ್ಲಿರುವ ಹರದಾಸ ಅಪ್ಪಚ್ಚ ಕವಿಯ ಪ್ರತಿಮೆಗೆ ಅರಮೇರಿ ಕಳಂ ಚೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರು ಮಾಲಾರ್ಪಣೆ ಮಾಡಿದರು. ಕರ್ನಾಟಕ ಕೊಡವ ಸಾಹಿತ್ಯ ಅಕಾ ಡೆಮಿ, ತೂಕ್ ಬೊಳಕ್ ಕಲೆ ಕ್ರೀಡೆ ಸಾಹಿತ್ಯ ಅಕಾಡೆಮಿ, ನ್ಯಾಷನಲ್ ಅಕಾಡೆಮಿ ಆಂಗ್ಲ ಮಾಧ್ಯಮ ಶಾಲೆಯ ಸಂಯುಕ್ತ ಆಶ್ರಯ ದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮ ದಲ್ಲಿ ಅಪ್ಪಚ್ಚ ಕವಿ…
ಕೊಡಗಿನ ನೆರೆ ಸಂತ್ರಸ್ತರಿಗೆ ಗೋವಾ ಉದ್ಯಮಿಯಿಂದ 100 ಮನೆ ನಿರ್ಮಾಣ
November 22, 2018ಮಡಿಕೇರಿ: ಕಳೆದ ಆಗಸ್ಟ್ ನಲ್ಲಿ ಕೊಡಗಿನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಲ್ಲಿ ಮನೆ ಕಳೆದು ಕೊಂಡ ಕುಟುಂಬಗಳಿಗೆ 100 ಸುಸಜ್ಜಿತ ಮನೆಗಳನ್ನು ನಿರ್ಮಿಸಿ ಕೊಡಲು ಗೋವಾದ ಟಿಟೋಸ್ ಟಿ-ಷರ್ಟ್ ಕಂಪೆನಿ ಮಾಲೀಕ ಸಂದೇಶ್ ಮಾರ್ಟೀಸ್ ಮುಂದೆ ಬಂದಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು. ನಗರದ ಸುದರ್ಶನ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೊಡಗು- ಮೈಸೂರು ಸಂಸದ ಪ್ರತಾಪ್ ಸಿಂಹ, ಕೊಡಗಿನ ನೆರೆ ಸಂತ್ರಸ್ತರಿಗೆ ರಾಷ್ಟ್ರವ್ಯಾಪಿ ತಾತ್ಕಾಲಿಕ ನೆರವು ದೊರೆತಿದೆ. ನಿರ್ವ ಸತಿಕರಾದ ಕುಟುಂಬಗಳಿಗೆ ಶಾಶ್ವತ ಸೂರು ಕಲ್ಪಿಸುವ…
ಒತ್ತುವರಿ ಜಮೀನು ತೆರವುಗೊಳಿಸಲು ನೋಟಿಸ್ ಜಾರಿ
November 22, 2018ಕಂಗಾಲಾದ ಹೈಸೊಡ್ಲೂರು ಭಾಗದ ಕಾಫಿ ಬೆಳೆಗಾರರು ಸಂಕೇತ್ ಪೂವಯ್ಯ ನೇತೃತ್ವದಲ್ಲಿ ಅರಣ್ಯಾಧಿಕಾರಿಗಳ ಭೇಟಿ ವಿರಾಜಪೇಟೆ: ಕೊಡಗಿನ ರೈತರು, ಕಾಫಿ ಬೆಳೆಗಾರರು, ಕಾರ್ಮಿಕರು ಬೆಳೆದ ಬೆಳೆಗೆ ಬೆಲೆಯಿಲ್ಲದೆ ಕಂಗಾಲಾ ಗಿರುವ ಸಮಯದಲ್ಲಿ ಇದೀಗ ಸ್ವಾತಂತ್ರ್ಯ ಪೂರ್ವದಿಂದಲೂ ಕಾಫಿ ತೋಟಗಳನ್ನು ಮಾಡಿಕೊಂಡು ಬದುಕು ಸಾಗಿಸುತ್ತಿದ್ದ ಕಾಫಿ ಬೆಳೆಗಾರರಿಗೆ ಅರಣ್ಯ ಇಲಾಖಾ ಧಿಕಾರಿಗಳ ವಕ್ರದೃಷ್ಠಿ ಬೀರಿದ್ದು, ಒತ್ತುವರಿ ಮಾಡಿಕೊಂಡಿರುವ ಜಮೀನುಗಳನ್ನು ತೆರವುಗೊಳಿಸಲು ಇಲಾಖಾಧಿಕಾರಿಗಳು ನೋಟಿಸು ಜಾರಿ ಮಾಡಿದ್ದಾರೆ. ನೋಟಿಸ್ ನಿಂದ ವಿಚಲಿತರಾದ ಹುದಿಕೇರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹೈಸೊಡ್ಲೂರು ಸುತ್ತ ಮುತ್ತ…
ನಾಳೆ ಸಿಎನ್‍ಸಿ ಆಶ್ರಯದಲ್ಲಿ ಪುತ್ತರಿ ನಮ್ಮೆ
November 22, 2018ಕುಶಾಲನಗರ: ಕೂಡವ ನ್ಯಾಷ ನಲ್ ಕೌನ್ಸಿಲ್ (ಸಿಎನ್‍ಸಿ) ಆಶ್ರಯದಲ್ಲಿ 25ನೇ ವಾರ್ಷಿಕ ಸಾರ್ವತ್ರಿಕ ಪುತ್ತರಿ ನಮ್ಮೆ ಹಬ್ಬವನ್ನು ನ.23 ರಂದು ಪೂರ್ವಾಹ್ನ 10.30 ಗಂಟೆಗೆ ಚಿಕ್ಕಬೆಟ್ಟ ಗೇರಿಯ ನಂದಿನೆರವಂಡ ಉತ್ತಪ್ಪನವರ ಭತ್ತದ ಗದ್ದೆಯಲ್ಲಿ ಸಾಂಪ್ರದಾಯಿಕ ಕದಿರು ತೆಗೆಯುವ ಶಾಸ್ತ್ರದೊಂದಿಗೆ ನಡೆಯಲಿದೆ ಎಂದು ಸಿಎನ್‍ಸಿ ಅಧ್ಯಕ್ಷ ಎನ್.ಯು. ನಾಚಪ್ಪ ಹೇಳಿದರು. ಬುಧವಾರ ಪತ್ರಿಕಾಗೋಷ್ಢಿಯಲ್ಲಿ ಮಾತ ನಾಡಿದ ಅವರು, ನಾಡಿನ ಜನತೆಗೆ ಸಿಎನ್‍ಸಿ ಸಂಘಟನೆ ಪುತ್ತರಿ ಹಬ್ಬದ ಹಾರ್ಧಿಕ ಶುಭಾಶಯವನ್ನು ಕೋರುತ್ತದೆ. ಈ ನಾಡಿಗೆ ಮತ್ತು ಜನತೆಗೆ ಶಾಂತಿ, ನೆಮ್ಮದಿ,…
ಕಾಣೆಯಾಗಿದ್ದ ವಿದ್ಯಾರ್ಥಿಯ ಶವ ಪತ್ತೆ
November 22, 2018ಕುಶಾಲನಗರ: ಮಂಗಳವಾರದಿಂದ ಕಾಣೆಯಾಗಿದ್ದ ವಿದ್ಯಾರ್ಥಿಯ ಶವ ಇಂದು ಇಲ್ಲಿನ ಮಾದಾಪಟ್ಟಣ ಬಳಿಯ ಕಾವೇರಿ ನದಿಯಲ್ಲಿ ದೊರೆತಿದೆ. ಮೂಲತಃ ಸಕಲೇಶಪುರದಲ್ಲಿ ಕಾರ್ತಿಕ್ ಕುಶಾಲನಗರದ ಪಾಲಿಟೆಕ್ನಿಕ್‍ನಲ್ಲಿ ಪ್ರಥಮ ವರ್ಷದ ಡಿಪ್ಲೊಮಾ ವಿದ್ಯಾರ್ಥಿ ಯಾಗಿದ್ದು, ಹಾಸ್ಟೆಲ್‍ನಲ್ಲಿ ವಾಸವಿದ್ದ ಕಾರ್ತಿಕ್ ನಿನ್ನೆಯಿಂದ ಕಾಣೆಯಾಗಿದ್ದ. ಈ ಬಗ್ಗೆ ಪ್ರಾಂಶುಪಾಲರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇಂದು ಕಾವೇರಿ ನದಿಯಲ್ಲಿ ಶವ ಪತ್ತೆಯಾಗಿದ್ದು, ಈಜಲು ತೆರಳಿದ್ದ ವೇಳೆ ಮೃತಪಟ್ಟಿರಬೇಕೆಂದು ಶಂಕಿಸಲಾಗಿದೆ. ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.
ಮಡಿಕೇರಿಯಲ್ಲಿ ಮುಂದುವರೆದ ಎಸಿಬಿ ಬೇಟೆ: ಚೆಸ್ಕಾಂ ಸಹಾಯಕ ಕಾರ್ಯಪಾಲಕ ಅಭಿಯಂತರ ಎಸಿಬಿ ಬಲೆಗೆ
November 21, 2018ಮಡಿಕೇರಿ: ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಭ್ರಷ್ಟಾಚಾರ ವಿಗ್ರಹ ದಳ ಬೇಟೆ ಮುಂದುವರಿಸಿದ್ದು, ಚೆಸ್ಕಾಂ ಇಲಾಖೆಯ ಮಡಿಕೇರಿ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರನ್ನು ಲಂಚ ಪಡೆಯುತ್ತಿದ್ದ ಆರೋಪದಲ್ಲಿ ಬಂಧಿಸಿದೆ. ಆ ಮೂಲಕ ಚೆಸ್ಕಾಂ ಇಲಾಖೆಗೂ ಎಸಿಬಿ ಅಧಿಕಾರಿ ಗಳು ಶಾಕ್ ನೀಡಿದ್ದಾರೆ. ಭ್ರಷ್ಟಾಚಾರ ನಿಗ್ರಹ ದಳದ ಉಪ ಅಧೀಕ್ಷಕ ಪೂರ್ಣ ಚಂದ್ರ ತೇಜಸ್ವಿ, ವೃತ್ತ ನಿರೀಕ್ಷಕ ಶೇಖರ್ ನೇತೃತ್ವದಲ್ಲಿ ದಾಳಿ ಸಂಘಟಿಸಿದ ಎಸಿಬಿ ಅಧಿಕಾರಿಗಳು ಚೆಸ್ಕಾಂ ಅಭಿಯಂತರ ಆಜಾದ್ ಅಲಿ ಶೌಕತ್ ಅಲಿ ದೊಡ್ಡಮನಿ ಯನ್ನು…
ಸುಂಟಿಕೊಪ್ಪದಲ್ಲಿ ಬೆಳಗಿನ ವೇಳೆ ಬಸ್ ಸೌಲಭ್ಯಕ್ಕೆ ಮನವಿ
November 21, 2018ಸುಂಟಿಕೊಪ್ಪ: ಶಾಲಾ ಕಾಲೇಜು ಮಕ್ಕಳಿಗೆ, ಸಾರ್ವಜನಿಕರಿಗೆ ಬೆಳಗಿನ ವೇಳೆ ಸಕಾಲದಲ್ಲಿ ಸರಕಾರಿ ಬಸ್ ಸಿಗದೆ ತೊಂದರೆಯಾಗುತ್ತಿದೆ ಎಂದು ನೊಂದ ಸಾರ್ವಜನಿಕರು, ವಿದ್ಯಾರ್ಥಿಗಳು ತಿಳಿಸಿದ್ದಾರೆ. ಸುಂಟಿಕೊಪ್ಪದಿಂದ ಬೆಳಿಗ್ಗೆ 8 ರಿಂದ 9.30 ಗಂಟೆಯವರೆಗೆ ಕೆಎಸ್‍ಆರ್‍ಟಿಸಿ ಸೆಟಲ್ ಬಸ್ಸುಗಳು ಸಮಯಕ್ಕೆ ಸರಿಯಾಗಿ ಬಾರದೆ ಶಾಲಾ ಕಾಲೇಜು ಮಕ್ಕಳು, ಸರಕಾರಿ ಕಛೇರಿಗೆ ತೆರಳುವ ನಿತ್ಯ ಪ್ರಯಾಣಿಸುವ ಮಂದಿಗೆ ತೊಂದರೆಯಾಗುತ್ತಿದೆ. ಬಂದ ಬಸ್ಸಿನಲ್ಲಿ ನೂಕುನುಗ್ಗಲಿನಿಂದ ಪ್ರಯಾಣಿಸಬೇಕಾದ ಸಂಕಷ್ಟ ಎದುರಾಗಿದೆ. ಜಿಲ್ಲಾ ಕೇಂದ್ರ ಸ್ಥಾನವಾದ ಮಡಿಕೇರಿಗೆ ಸುಂಟಿಕೊಪ್ಪ ಸುತ್ತ ಮುತ್ತಲ್ಲ ಗ್ರಾಮಗಳಾದ ಭೂತನಕಾಡು, ಮತ್ತಿಕಾಡು,…










