ನಾಳೆ ಸಿಎನ್‍ಸಿ ಆಶ್ರಯದಲ್ಲಿ ಪುತ್ತರಿ ನಮ್ಮೆ
ಕೊಡಗು

ನಾಳೆ ಸಿಎನ್‍ಸಿ ಆಶ್ರಯದಲ್ಲಿ ಪುತ್ತರಿ ನಮ್ಮೆ

November 22, 2018

ಕುಶಾಲನಗರ: ಕೂಡವ ನ್ಯಾಷ ನಲ್ ಕೌನ್ಸಿಲ್ (ಸಿಎನ್‍ಸಿ) ಆಶ್ರಯದಲ್ಲಿ 25ನೇ ವಾರ್ಷಿಕ ಸಾರ್ವತ್ರಿಕ ಪುತ್ತರಿ ನಮ್ಮೆ ಹಬ್ಬವನ್ನು ನ.23 ರಂದು ಪೂರ್ವಾಹ್ನ 10.30 ಗಂಟೆಗೆ ಚಿಕ್ಕಬೆಟ್ಟ ಗೇರಿಯ ನಂದಿನೆರವಂಡ ಉತ್ತಪ್ಪನವರ ಭತ್ತದ ಗದ್ದೆಯಲ್ಲಿ ಸಾಂಪ್ರದಾಯಿಕ ಕದಿರು ತೆಗೆಯುವ ಶಾಸ್ತ್ರದೊಂದಿಗೆ ನಡೆಯಲಿದೆ ಎಂದು ಸಿಎನ್‍ಸಿ ಅಧ್ಯಕ್ಷ ಎನ್.ಯು. ನಾಚಪ್ಪ ಹೇಳಿದರು.
ಬುಧವಾರ ಪತ್ರಿಕಾಗೋಷ್ಢಿಯಲ್ಲಿ ಮಾತ ನಾಡಿದ ಅವರು, ನಾಡಿನ ಜನತೆಗೆ ಸಿಎನ್‍ಸಿ ಸಂಘಟನೆ ಪುತ್ತರಿ ಹಬ್ಬದ ಹಾರ್ಧಿಕ ಶುಭಾಶಯವನ್ನು ಕೋರುತ್ತದೆ. ಈ ನಾಡಿಗೆ ಮತ್ತು ಜನತೆಗೆ ಶಾಂತಿ, ನೆಮ್ಮದಿ, ಮತ್ತು ಐಶ್ವರ್ಯ ಹಾಗೂ ಸಮೃದ್ಧಿ ಒದ ಗಲಿ ಎಂದು ಹಾರೈಸುತ್ತದೆ ಎಂದರು.

ಸಿಎನ್‍ಸಿ ಸಂಘಟನೆಯು ಕೊಡವ ಬುಡ ಕಟ್ಟು ಜಗತ್ತಿನ ಸಂಸ್ಕೃತಿಯ ಪ್ರಧಾನ ಹಬ್ಬವಾದ ಪುತ್ತರಿಯನ್ನು ಕಳೆದ 24 ವರ್ಷಗಳಿಂದ ಸಾರ್ವತ್ರಿಕವಾಗಿ ಆಚರಿ ಸುತ್ತಾ ಬಂದಿದ್ದು, ಕೊಡವರ ಉನ್ನತ ಪರಂ ಪರೆ ಹಾಗೂ ಶ್ರೇಷ್ಠ ಸಂಸ್ಕೃತಿಯನ್ನು ಸಾರುವ ಧಾನ್ಯಲಕ್ಷ್ಮಿಯನ್ನು ಮನೆಯೊ ಳಗೆ ಆಹ್ವಾನಿಸುವ ಶುಭ ದಿನವಾಗಿದೆ. ಈ ಹಬ್ಬದ ವಿಶೇಷತೆ ಏನೆಂದರೆ ಭೂತಾ ಯಿಗೂ ಕೊಡವರಿಗೂ ಇರುವ ಅವಿ ನಾಭಾವ ಸಂಬಂಧದ ದಿವ್ಯದರ್ಶನ ನ.23 ರಂದು ಪೂರ್ವಾಹ್ನ 10.30 ಗಂಟೆಗೆ ಕುಶಾ ಲನಗರ ಹೋಬಳಿ ಚಿಕ್ಕಬೆಟ್ಟಗೇರಿ ಗ್ರಾಮದ ನಂದಿನೆರವಂಡ ಉತ್ತಪ್ಪನವರ ಭತ್ತದ ಗದ್ದೆಯಲ್ಲಿ ಕದಿರು ತೆಗೆಯುವ ಕೈಂಕರ್ಯ ಶ್ರದ್ಧಾ ಭಕ್ತಿಯಿಂದ ನಡೆಯಲಿದೆ. ಮೊದ ಲಿಗೆ ನೆಲ್ಲಕ್ಕಿಯಡಿಯಲ್ಲಿ ಗುರುಕಾರೋ ಣರು ಮತ್ತು ದೇವಾನುದೇವತೆಗಳಿಗೆ ಭಕ್ತಿಪೂರ್ವಕ ನಮನ ಸಲ್ಲಿಸಿ 5 ಬಗೆಯ ಮರದ ಸೊಪ್ಪುಗಳಾದ ಅರಳಿ, ಮಾವು, ಹಲಸು, ಕುಂಬಳಿ ಮತ್ತು ಗೇರು ಮರಗಳ ಎಲೆಗಳಿಂದ ನೆರೆಕಟ್ಟುವ ವಿಧಿ ಮುಗಿಸಿ, ಕುತ್ತಿ, ತೋಕ್-ಕತ್ತಿ, ದುಡಿಕೊಟ್ಟ್‍ಪಾಟ್, ತಳಿಯತಕ್ಕಿಯಾಗಿ ಮೆರವಣಿಗೆ ಹೊರಟು ಭತ್ತದ ಗದ್ದೆಯಲ್ಲಿ ಕದಿರು ತೆಗೆದು ಹಿಂದಿರುಗಿ ಬಂದು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಾದ ವಾಲಗತಾಟ್, ಪರಿಯಕಳಿ ಮತ್ತು ಬೊಳಕಾಟ್ ನಡೆಸಿ ತದನಂತರ ಗುರುಕಾರೋಣ- ದೇವಾ ನುದೇವತೆಗಳಿಗೆ ನೈವೇದ್ಯ ಅರ್ಪಿಸಿ ಕೊಡವ ಸಾಂಪ್ರಾದಾಯಿಕ ಭೋಜನ ಸವಿಯುವ ಮೂಲಕ ಶ್ರದ್ಧಾ ಭಕ್ತಿ ಸಂಭ್ರ ಮದಿಂದ ಪುತ್ತರಿಯನ್ನು ಸಿಎನ್‍ಸಿ ಆಚರಿ ಸಲಿದೆ ಎಂದು ಹೇಳಿದರು.

Translate »