ಒತ್ತುವರಿ ಜಮೀನು ತೆರವುಗೊಳಿಸಲು ನೋಟಿಸ್ ಜಾರಿ
ಕೊಡಗು

ಒತ್ತುವರಿ ಜಮೀನು ತೆರವುಗೊಳಿಸಲು ನೋಟಿಸ್ ಜಾರಿ

November 22, 2018
  • ಕಂಗಾಲಾದ ಹೈಸೊಡ್ಲೂರು ಭಾಗದ ಕಾಫಿ ಬೆಳೆಗಾರರು
  • ಸಂಕೇತ್ ಪೂವಯ್ಯ ನೇತೃತ್ವದಲ್ಲಿ ಅರಣ್ಯಾಧಿಕಾರಿಗಳ ಭೇಟಿ

ವಿರಾಜಪೇಟೆ: ಕೊಡಗಿನ ರೈತರು, ಕಾಫಿ ಬೆಳೆಗಾರರು, ಕಾರ್ಮಿಕರು ಬೆಳೆದ ಬೆಳೆಗೆ ಬೆಲೆಯಿಲ್ಲದೆ ಕಂಗಾಲಾ ಗಿರುವ ಸಮಯದಲ್ಲಿ ಇದೀಗ ಸ್ವಾತಂತ್ರ್ಯ ಪೂರ್ವದಿಂದಲೂ ಕಾಫಿ ತೋಟಗಳನ್ನು ಮಾಡಿಕೊಂಡು ಬದುಕು ಸಾಗಿಸುತ್ತಿದ್ದ ಕಾಫಿ ಬೆಳೆಗಾರರಿಗೆ ಅರಣ್ಯ ಇಲಾಖಾ ಧಿಕಾರಿಗಳ ವಕ್ರದೃಷ್ಠಿ ಬೀರಿದ್ದು, ಒತ್ತುವರಿ ಮಾಡಿಕೊಂಡಿರುವ ಜಮೀನುಗಳನ್ನು ತೆರವುಗೊಳಿಸಲು ಇಲಾಖಾಧಿಕಾರಿಗಳು ನೋಟಿಸು ಜಾರಿ ಮಾಡಿದ್ದಾರೆ. ನೋಟಿಸ್ ನಿಂದ ವಿಚಲಿತರಾದ ಹುದಿಕೇರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹೈಸೊಡ್ಲೂರು ಸುತ್ತ ಮುತ್ತ ಗ್ರಾಮದ 50ಕ್ಕೂ ಅಧಿಕ ಕಾಫಿ ಬೆಳೆಗಾರರು ಜೆಡಿಎಸ್ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯನವರನ್ನು ಭೇಟಿ ಮಾಡಿ ನ್ಯಾಯ ಒದಗಿಸಿಕೊಡುವಂತೆ ಮನವಿ ಮಾಡಿದ್ದಾರೆ.

ಸಂಕೇತ್ ಪೂವಯ್ಯನವರನ್ನು ಭೇಟಿ ಮಾಡಿದ ಹೈಸೊಡ್ಲೂರುವಿನ ಕಾಫಿ ಬೆಳೆ ಗಾರರು ಅರಣ್ಯಾಧಿಕಾರಿ ನೀಡುತ್ತಿರುವ ಕಿರುಕುಳದ ಬಗ್ಗೆ ಸುದೀರ್ಘವಾಗಿ ಚರ್ಚಿ ಸಿದರು. ನಂತರ ವಿರಾಜಪೇಟೆಯ ಡಿಎಫ್‍ಒ ಮರಿಯಾ ಕೃಷ್ಟರಾಜ್‍ರವರನ್ನು ಭೇಟಿ ಮಾಡಿದ ಸಂಕೇತ್ ಪೂವಯ್ಯ ನೇತೃತ್ವದ ತಂಡ ಅಧಿಕಾರಿಯ ಮುಂದೆ ಸಮಗ್ರ ವಿಷ ಯದ ಬಗ್ಗೆ ಚರ್ಚೆ ನಡೆಸಿ ಕಾಫಿ ಬೆಳೆಗಾ ರರಿಗೆ, ಕಾರ್ಮಿಕರಿಗೆ ತೊಂದರೆ ನೀಡ ದಂತೆ ಹಾಗೂ ಒತ್ತುವರಿ ಮಾಡಿಕೊಂಡಿ ರುವ ಜಮೀನುಗಳನ್ನು ತೆರವುಗೊಳಿಸ ದಂತೆ ಮನವಿ ಪತ್ರ ಸಲ್ಲಿಸಿದರು.

1941ನೇ ಇಸವಿಯಿಂದಲೂ ಹೈಸೊಡ್ಲೂರು ಭಾಗದ ಸರ್ವೆ ನಂ.1/1ರಲ್ಲಿ 50ಕ್ಕೂ ಅಧಿಕ ಕುಟುಂಬಗಳು ಅರಣ್ಯ ಭೂಮಿ ಯಲ್ಲಿ ಕಾಫಿ ತೋಟಗಳನ್ನು ಮಾಡಿ ಕೊಂಡು ಜೀವನ ಸಾಗಿಸುತ್ತಿದ್ದಾರೆ. ಈ ಭಾಗದಲ್ಲಿ ಇರುವ ಸರ್ವೆ ನಂ. ನಲ್ಲಿ 230 ಎಕರೆ ಭೂಮಿಯು ಪ್ರಸ್ತುತ ರೈತರ ಸ್ವಾಧೀ ನದಲ್ಲಿದೆ. ಕುರುಬರ ಬೋಜ, ರಾಜು, ಮರಿ ಹಾಗೂ ಇನ್ನಿತರ ಪರಿಶಿಷ್ಟರ ಕುಟುಂ ಬಗಳು ಈ ಜಾಗದಲ್ಲಿ ಮನೆ ನಿರ್ಮಿಸಿ ಕೊಂಡು ಜೀವನ ಸಾಗಿಸುತ್ತಿದ್ದಾರೆ. ಇವ ರಿಗೆ ಸರ್ಕಾರದ ವತಿಯಿಂದ ಹಕ್ಕುಪತ್ರ ಲಭಿಸಿದ್ದರೂ ತಿತಿಮತಿ ಉಪವಿಭಾಗದ ಅರ ಣ್ಯಾಧಿಕಾರಿಗಳು ದಿನಾಂಕ 15.10.2018 ರಂದು ಕುರುಬರ ಬೋಜ, ರಾಜು, ಮರಿ, ಎಂಬುವರಿಗೆ ಒತ್ತುವರಿ ಜಾಗ ವನ್ನು ತೆರವುಗೊಳಿಸುವಂತೆ ನೋಟಿಸು ಜಾರಿ ಮಾಡಿದ್ದರು. ಇದರಿಂದ ಕಂಗ ಲಾದ ಈ ಭಾಗದ ಕಾಫಿ ಬೆಳೆಗಾರರು ಒಟ್ಟಾಗಿ ಈ ಆದೇಶದ ವಿರುದ್ದ ಧ್ವನಿ ಎತ್ತಿದ್ದಾರೆ.

ಕರ್ನಾಟಕ ಅರಣ್ಯ ಕಾಯಿದೆ 1963 ನಿಯಮ 24(ಸಿ)ಯ ಪ್ರಕಾರ ದಿ. 18.02.2002ರಲ್ಲಿ ಮೊಖದ್ದಮೆ 50/2002-03ಸದರಿ ಜಾಗದಲ್ಲಿ ವಾಸವಿದ್ದ ಕುರುಬರ ಬೋಜ, ರಾಜು,ಮರಿ,ರವರ ಮೇಲೆ ಕೇಸು ದಾಖಲಿಸಿದ್ದರು. ಈ ಹಿನ್ನಲೆಯಲ್ಲಿ ಈ ಭಾಗದ ಸರ್ವೆ ನಂ1/1ನಲ್ಲಿರುವ 230 ಎಕರೆ ಜಾಗದಲ್ಲಿ ಒತ್ತು ವರಿ ಮಾಡಿಕೊಂಡು ಇರುವವರಿಗೆ ಮುಂದೆ ನೋಟಿಸು ಜಾರಿಯಾಗುವ ಸಾಧ್ಯತೆ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ಗ್ರಾಮಸ್ಥರು ಒಟ್ಟಾಗಿ ಪ್ರತಿಭಟಿಸಲು ನಿರ್ಧರಿಸಿದ್ದಾರೆ. ಈ ಹಿನ್ನಲೆಯಲ್ಲಿ ವಿರಾಜಪೇಟೆಯ ಅರಣ್ಯ ಅಧಿಕಾರಿ ಗಳನ್ನು ಭೇಟಿ ಮಾಡಿ ಸ್ವಾತಂತ್ರ್ಯ ಪೂರ್ವದಿಂದಲೂ ಒತ್ತುವರಿ ಜಮೀನಿನ ಕಾಗದ ಪತ್ರಗಳನ್ನು ಸಲ್ಲಿಸಿದರು.

Translate »