ಸೋಮವಾರಪೇಟೆ: ಇಲ್ಲಿನ ಜೇಸಿ ಸಂಸ್ಥೆಯ 2018ರ ಸಪ್ತಾಹದ ಕಾರ್ಯಕ್ರ ಮದ ಮೂರನೆ ದಿನ ವಿದ್ಯಾರ್ಥಿಗಳಿಗೆ ಹಲವು ಕಾರ್ಯಕ್ರಮಗಳು ನಡೆದವು. ಬೆಳಿಗ್ಗೆ 4ರಿಂದ 7 ಹಾಗೂ 8ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ನಂಜಮ್ಮ ಸಮು ದಾಯ ಭವನದಲ್ಲಿ ಜಾನಪದ ಲೋಕದ ಚಿತ್ರ ಬಿಡಿಸುವ ಸ್ಪರ್ಧೆ ಮತ್ತು ನಂತರ ಬರ ವಣಿಗೆ ಸ್ಪರ್ಧೆ ನಡೆಯಿತು. ಸಂಜೆ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಗ್ರೂಪ್ ಡ್ಯಾನ್ಸ್ ಸ್ಪರ್ಧೆ ನಡೆಯಿತು. ಈ ಸಂದರ್ಭ ಸಂಸ್ಥೆಯ ಅಧ್ಯಕ್ಷ ಕೆ.ಎ. ಪ್ರಕಾಶ್, ಕಾರ್ಯದರ್ಶಿ ಎಂ.ಎ….
ಚರಂಡಿ ಕಾಮಗಾರಿ ಕಳಪೆ ಆರೋಪ; ಶಾಸಕರು ಪರಿಶೀಲನೆ
November 19, 2018ಕುಶಾಲನಗರ: ಕುಶಾಲನಗರ ಗುಂಡೂರಾವ್ ಬಡಾವಣೆಯಲ್ಲಿ ಅಂದಾಜು ಸುಮಾರು ರೂ. 7 ಕೋಟಿ ವೆಚ್ಚದಲ್ಲಿ ಬಡಾವಣೆಯ ರಸ್ತೆ ಚರಂಡಿ ಮತ್ತಿತರ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿ ತುಂಬಾ ಕಳಪೆ ಮಟ್ಟದಿಂದ ನಡೆಯುತ್ತಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಇಂದು ಬೆಳಗ್ಗೆ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ದರು. ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಇಂಜಿನಿಯರ್ ಶ್ರೀದೇವಿ ಅವರನ್ನು ಶಾಸಕರು ತರಾಟೆಗೆ ತೆಗೆದು ಕೊಂಡರು ಮತ್ತು ಈ ಕಾಮಗಾರಿಯ ವಿವರ ನೀಡುವಂತೆ ಸೂಚಿಸಿದರು. ನಂತರ…
ಹಳ್ಳಿಗಟ್ಟುನಲ್ಲಿ ವಿಶೇಷ ಉಪನ್ಯಾಸ
November 19, 2018ಗೋಣಿಕೊಪ್ಪಲು: ಹಳ್ಳಿಗಟ್ಟು ಕೂರ್ಗ್ ಇನ್ಸಿಟ್ಯೂಟ್ ಆಫ್ ಪಿಯು ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಆಯೋಜಿಸಲಾಗಿದ್ದ ವಿಶೇಷ ಉಪನ್ಯಾಸ ಕಾರ್ಯ ಕ್ರಮದಲ್ಲಿ ಜಾನಪದ ಹಾಗೂ ಭಾವಗೀತೆ ಸ್ಪರ್ಧೆ ನಡೆಯಿತು. ಜಾನಪದ ಸಮೂಹಗಾಯನ ಸ್ಪರ್ಧೆಯಲ್ಲಿ ಚೈತ್ರ ಮತ್ತು ತಂಡ ಪ್ರಥಮ, ರಿನ್ಯ ಮತ್ತು ತಂಡ ದ್ವಿತೀಯ, ಭಾವಗೀತೆ ಸ್ಪರ್ಧೆಯಲ್ಲಿ ಶೃದ್ಧಾಶಾಸ್ತ್ರಿ (ಪ್ರ), ಅಪರ್ಣ ಭಾರಧ್ವಾಜ್ (ದ್ವಿ) ಬಹುಮಾನ ಪಡೆದುಕೊಂಡರು. ಮುಖ್ಯ ಅತಿಥಿಯಾಗಿ ಜಿಲ್ಲಾ ವಾಣಿಜ್ಯ ಮಂಡಳಿ ಅಧ್ಯಕ್ಷ ಬಿ.ಎನ್.ಪ್ರಕಾಶ್ ಪಾಲ್ಗೊಂಡು ಬಹುಮಾನ ವಿತರಿಸಿದರು. ಕೂರ್ಗ್ ಇನ್ಸಿಟ್ಯೂಟ್ ಆಫ್ ಪಿಯು ಕಾಲೇಜು…
ಇಂದಿನಿಂದ ಮಡಿಕೇರಿಯಲ್ಲಿ ಆಧಾರ್ ಅದಾಲತ್
November 19, 2018ಮಡಿಕೇರಿ: ಜಿಲ್ಲಾಡಳಿತ ಹಾಗೂ ಬೆಂಗಳೂರಿನ ಇ-ಆಡಳಿತ ಕೇಂದ್ರದ ಸಹ ಯೋಗದೊಂದಿಗೆ ನ.19 ರಿಂದ 24 ರವರೆಗೆ ನಗರದ ನಗರಸಭಾ ಕಟ್ಟಡದ ಆವರಣದಲ್ಲಿ ಆಧಾರ್ ಅದಾಲತ್ ಕಾರ್ಯಕ್ರಮ ಆಯೋಜಿಸಲಾಗಿದೆ. ಸರ್ಕಾರದ ಸೌಲಭ್ಯ ಪಡೆಯಲು ಆಧಾರ್ ಸಂಖ್ಯೆ ಅತ್ಯಂತ ಪ್ರಯೋಜನಕಾರಿಯಾಗಿ ರುವ ಹಿನ್ನಲೆಯಲ್ಲಿ ಆಧಾರ್ ನೋಂದಣಿ ಮಹತ್ವ ಪಡೆದಿದೆ. ಜಿಲ್ಲೆಯ ನಾಗರಿಕರಿಗೆ ಅನುಕೂಲ ಮಾಡುವ ನಿಟ್ಟಿನಲ್ಲಿ ಆಧಾರ್ ತಿದ್ದುಪಡಿ, ಅಪಡೇಷನ್, ಹೊಸ ನೋಂದಣಿ ಹಾಗೂ ಆಧಾರ್‍ಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರು ಪಡಿತರ ಚೀಟಿ, ಬ್ಯಾಂಕ್ ಪಾಸ್‍ಪುಸ್ತಕ,…
ವಿರಾಜಪೇಟೆ ತಾಲೂಕು ಪಂಚಾಯಿತಿ ಪ್ರಗತಿ ಪರಿಶೀಲನೆ
November 19, 2018ಗೋಣಿಕೊಪ್ಪಲು: ತುರ್ತು ಸಭೆಗೆ ಆಹ್ವಾನಿಸಿ ಗೈರು ಹಾಜರಾಗಿದ್ದ ವಿರಾಜ ಪೇಟೆ ತಾಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿ ಜಯಣ್ಣ ಅವರನ್ನು ವಿರಾಜಪೇಟೆ ತಾಲೂಕು ಪಂಚಾಯ್ತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ತರಾಟೆಗೆ ತೆಗೆ ದುಕೊಂಡ ಘಟನೆ ನಡೆಯಿತು. ಪೊನ್ನಂಪೇಟೆ ಸಾಮಥ್ರ್ಯಸೌಧದಲ್ಲಿ ತಾಲೂಕು ಪಂಚಾಯ್ತಿ ಅಧ್ಯಕ್ಷೆ ಬೊಳ್ಳಚಂಡ ಸ್ಮಿತಾ ಪ್ರಕಾಶ್ ಅಧ್ಯಕ್ಷತೆಯಲ್ಲಿ ಆಯೋ ಜಿಸಿದ್ದ ಸಭೆಯಲ್ಲಿ ಉಪಾಧ್ಯಕ್ಷ ನೆಲ್ಲೀರ ಚಲನ್ ತರಾಟೆಗೆ ತೆಗೆದುಕೊಂಡರು. ನವೆಂಬರ್ ಮೊದಲ ವಾರದಲ್ಲಿ ಕರೆ ದಿದ್ದ ಸಭೆಗೆ ಜನಪ್ರತಿನಿಧಿ, ಅಧಿಕಾರಿಗಳನ್ನು ಆಹ್ವಾನಿಸಿ, ಇಓ ಗೈರಾಗಿರುವ ಬಗ್ಗೆ ಪ್ರಶ್ನಿ…
ಕೊಡಗು ಸಂತ್ರಸ್ತರಿಗೆ ನೆರವು
November 19, 2018ವಿರಾಜಪೇಟೆ: ಕೊಡಗು ಸಂತ್ರಸ್ತರಿಗಾಗಿ ವಿದ್ಯಾರ್ಥಿಗಳು ಇತರರಿಂದ ಸಂಗ್ರಹ ಮಾಡಿದ ರೂ. ಒಂದು ಲಕ್ಷ ಹಣವನ್ನು ಮಳೆಯಿಂದ ಆಸ್ತಿ ಮನೆ ಕಳೆದು ಕೊಂಡ 12 ನಿರಾಶ್ರಿತರಿಗೆ ನೀಡಿದ್ದಾರೆ. ವಿರಾಜಪೇಟೆಯ ಮಂಡೆಪಂಡ ಸುಜಾ ಕುಶಾಲಪ್ಪ ಅವರ ಕಿರಿಯ ಪುತ್ರ ನಿಶಾಂಕ್ ಪೊನ್ನಪ್ಪ ಅವರ ಮುಂದಾಳತ್ವದಲ್ಲಿ ಅಜ್ಜಮಾಡ ತಿಮ್ಮಯ್ಯ ಅವರ ಪುತ್ರ ಚಂಗಪ್ಪ, ಚಾರಿಮಂಡ ಕಾವೇರಪ್ಪ ಅವರ ಪುತ್ರ ಬಿದ್ದಪ್ಪ, ಕೊಲ್ಲಿರ ಭರತ್, ಗಗನ್ ಮುತ್ತಪ್ಪ, ಪಟ್ಟಡ ರಕ್ಷಿತ್ ಹಾಗೂ ಜಾನ್ಹವಿ ಅವರುಗಳು ಇತರರಿಂದ ಸಂಗ್ರಹಿಸಿದ್ದ ಒಂದು ಲಕ್ಷ ಹಣವನ್ನು ಆಸ್ತಿ…
ಕೊಡಗಿನ ನೆರೆ ಸಂತ್ರಸ್ತರ ನೆರವಿಗೆ ಕೊಡವ ಸಮಾಜಗಳ ಒಕ್ಕೂಟ ನಿರ್ಧಾರ
November 18, 2018ಮಡಿಕೇರಿ: ಇತ್ತೀಚೆಗೆ ಕೊಡಗಿನಲ್ಲಿ ಸಂಭವಿಸಿದ ಅತಿವೃಷ್ಟಿ ಹಾನಿ ಸಂತ್ರಸ್ತರಿಗೆ ಬಾಳುಗೋಡು ಕೊಡವ ಸಮಾಜಗಳ ಒಕ್ಕೂಟದ ಮೂಲಕ ಅಗತ್ಯ ನೆರ ವನ್ನು ನೀಡಲು ಒಕ್ಕೂಟದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಬಾಳುಗೋಡಿನಲ್ಲಿ ನಡೆದ ಒಕ್ಕೂಟದ ಮಾಸಿಕ ಸಭೆಯಲ್ಲಿ ಪ್ರಕೃತಿ ವಿಕೋಪ ಮತ್ತು ಮುಂದೆ ಕೈಗೊಳ್ಳಬಹುದಾದ ಪರಿಹಾರ ಕಾರ್ಯಗಳ ಕುರಿತು ಪ್ರಮುಖರು ಚರ್ಚಿಸಿದರು. ಮಡಿಕೇರಿ ಹಾಗೂ ಸೋಮವಾರ ಪೇಟೆಯಲ್ಲಿ ಸಂಭವಿಸಿದ ಮಳೆಹಾನಿ ಪ್ರದೇಶಗಳಿಗೆ ಒಕ್ಕೂಟದ ಪದಾಧಿಕಾರಿಗಳು ಇತ್ತೀಚೆಗೆ ಭೇಟಿ ನೀಡಿ ಪರಿಶೀಲನೆ ನಡೆ ಸಿದ್ದರು. ಸಂತ್ರಸ್ತರಿಗೆ ಸಾಂತ್ವನ ಹೇಳಿ ಅಭಯ ನೀಡಿದ…
ವಿಶೇಷ ಅಗತ್ಯತೆಯುಳ್ಳ ಮಕ್ಕಳಿಗೆ ವೈದ್ಯಕೀಯ ತಪಾಸಣೆ
November 18, 2018ವಿರಾಜಪೇಟೆ: ವಿಶೇಷ ಅಗತ್ಯತೆಯುಳ್ಳ ಮಕ್ಕಳ ಭವಿಷ್ಯವನ್ನು ರೂಪಿಸುವುದು ಶಿಕ್ಷಕರು ಮತ್ತು ಪೋಷಕರ ಆಧ್ಯ ಕರ್ತವ್ಯವಾಗಿದೆ ಎಂದು ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ನೆಲ್ಲಚಂಡ ಕಿರಣ್ ಕಾರ್ಯಪ್ಪ ಹೇಳಿದರು. ಕೊಡಗು ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ, ಸರ್ವಶಿಕ್ಷಣ ಅಭಿಯಾನ ಇವರ ವತಿಯಿಂದ ವಿರಾಜಪೇಟೆ ಸಾರ್ವಜನಿಕ ಆಸ್ಪತ್ರೆಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಿಶೇಷ ಅಗತ್ಯತೆಯುಳ್ಳ ಮಕ್ಕಳ ವೈದ್ಯಕೀಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತ ನಾಡಿ, ವಿಶೇಷ ಅಗತ್ಯತೆಯುಳ ಮಕ್ಕಳಿಗೆ ಸರಕಾರದಿಂದ ದೊರಕುವ ಸೌಲಭ್ಯಗಳನ್ನು ಪೋಷಕರು…
ಕೊಡಗಿನ ಎ.ಎಸ್.ಪೊನ್ನಣ್ಣ ರಾಜ್ಯ ಹೈಕೋರ್ಟ್ ಹಿರಿಯ ವಕೀಲ
November 18, 2018ಪೊನ್ನಂಪೇಟೆ: ರಾಜ್ಯ ಸರಕಾರದ ಹಾಲಿ ಪ್ರಥಮ ದರ್ಜೆ ಹೆಚ್ಚುವರಿ ಅಡ್ವೊಕೇಟ್ ಜನರಲ್ ಆಗಿರುವ ಕೊಡಗಿನ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ ಅವರನ್ನು ರಾಜ್ಯ ಹೈಕೋರ್ಟ್ ‘ಹಿರಿಯ ವಕೀಲ’ ಎಂದು ಘೋಷಿಸಿದೆ. ಈ ಕುರಿತು ಅಧಿಕೃತ ಆದೇಶ ಹೊರಡಿಸಿರುವ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಶ್ರೀಶನಂದ ಅವರು ಒಟ್ಟು 18 ಜನ ಹೈಕೋರ್ಟ್ ವಕೀಲರನ್ನು ‘ಹಿರಿಯ ವಕೀಲ’ ರನ್ನಾಗಿ ಘೋಷಿಸಿದ್ದು, ಈ ಪೈಕಿ ಎ.ಎಸ್. ಪೊನ್ನಣ್ಣ ಕೂಡ ಒಬ್ಬರಾಗಿದ್ದಾರೆ. ಕಳೆದ ಹಲವು ವರ್ಷಗಳಿಂದ ಸುಪ್ರಿಂ ಕೋರ್ಟ್ ಮತ್ತು ರಾಜ್ಯ ಹೈಕೊರ್ಟ್‍ನಲ್ಲಿ ವಕೀಲರಾಗಿ…
ವ್ಯಕ್ತಿ ಕೊಲೆಗೆ ಯತ್ನಿಸಿದವನಿಗೆ 7 ವರ್ಷ ಜೈಲು
November 18, 2018ಮಡಿಕೇರಿ: ವ್ಯಕ್ತಿಯೋರ್ವ ರನ್ನು ಕತ್ತಿಯಿಂದ ಕಡಿದು ಹತ್ಯೆಗೆ ಯತ್ನಿಸಿದ ಆರೋಪ ಸಾಬೀತಾದ ಹಿನ್ನೆಲೆ ಯಲ್ಲಿ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಅಪರಾಧಿಗೆ 7 ವರ್ಷಗಳ ಕಠಿಣ ಸಜೆ ವಿಧಿಸಿ ತೀರ್ಪು ನೀಡಿದೆ. ಮರಗೋಡು ಮೂಲದ ನಿವಾಸಿ ರಘು ಎಂಬಾತನೇ ಶಿಕ್ಷೆಗೆ ಒಳಗಾದ ಅಪ ರಾಧಿಯಾಗಿದ್ದಾನೆ. ಪ್ರಕರಣ ಹಿನ್ನೆಲೆ: 2018ರ ಜನವರಿ 14 ರಂದು ಮರಗೋಡು ನಿವಾಸಿಯಾದ ಜೆ.ಎನ್. ರಮೇಶ್ ಎಂಬವರು ಕಾಫಿ ಕಣದಲ್ಲಿ ಒಣಗಲು ಹಾಕಿದ್ದ ಕಾಫಿಯನ್ನು ಕಾವಲು ಕಾಯಲು ಅತ್ತ ಕಡೆ ಹೋಗು…










