ಕೊಡಗಿನ ಎ.ಎಸ್.ಪೊನ್ನಣ್ಣ ರಾಜ್ಯ ಹೈಕೋರ್ಟ್ ಹಿರಿಯ ವಕೀಲ
ಕೊಡಗು

ಕೊಡಗಿನ ಎ.ಎಸ್.ಪೊನ್ನಣ್ಣ ರಾಜ್ಯ ಹೈಕೋರ್ಟ್ ಹಿರಿಯ ವಕೀಲ

November 18, 2018

ಪೊನ್ನಂಪೇಟೆ:  ರಾಜ್ಯ ಸರಕಾರದ ಹಾಲಿ ಪ್ರಥಮ ದರ್ಜೆ ಹೆಚ್ಚುವರಿ ಅಡ್ವೊಕೇಟ್ ಜನರಲ್ ಆಗಿರುವ ಕೊಡಗಿನ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ ಅವರನ್ನು ರಾಜ್ಯ ಹೈಕೋರ್ಟ್ ‘ಹಿರಿಯ ವಕೀಲ’ ಎಂದು ಘೋಷಿಸಿದೆ.

ಈ ಕುರಿತು ಅಧಿಕೃತ ಆದೇಶ ಹೊರಡಿಸಿರುವ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಶ್ರೀಶನಂದ ಅವರು ಒಟ್ಟು 18 ಜನ ಹೈಕೋರ್ಟ್ ವಕೀಲರನ್ನು ‘ಹಿರಿಯ ವಕೀಲ’ ರನ್ನಾಗಿ ಘೋಷಿಸಿದ್ದು, ಈ ಪೈಕಿ ಎ.ಎಸ್. ಪೊನ್ನಣ್ಣ ಕೂಡ ಒಬ್ಬರಾಗಿದ್ದಾರೆ.
ಕಳೆದ ಹಲವು ವರ್ಷಗಳಿಂದ ಸುಪ್ರಿಂ ಕೋರ್ಟ್ ಮತ್ತು ರಾಜ್ಯ ಹೈಕೊರ್ಟ್‍ನಲ್ಲಿ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಎ.ಎಸ್.ಪೊನ್ನಣ್ಣ ಅವರು ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರದಲ್ಲೂ ಹೆಚ್ಚುವರಿ ಅಡ್ವೊಕೇಟ್ ಜನರಲ್ ಆಗಿ ಕರ್ತವ್ಯ ನಿರ್ವಹಿಸಿದ್ದರು.

ಮಾಜಿ ಶಾಸಕರೂ ಅಗಿರುವ ಹಿರಿಯ ನ್ಯಾಯವಾದಿ ಎ.ಕೆ. ಸುಬ್ಬಯ್ಯ ಅವರ ಪುತ್ರ ರಾಗಿರುವ ಎ.ಎಸ್. ಪೊನ್ನಣ್ಣ ಅವರು ಹಿಂದೆ ವಿವಿಧ ಪ್ರಕರ ಣಗಳಲ್ಲಿ ಸರಕಾರದ ಪರವಾಗಿ ಸಮರ್ಥ ವಾದ ಮಂಡಿಸಿ ಗಮನ ಸೆಳೆದಿದ್ದರು.

Translate »