ವ್ಯಕ್ತಿ ಕೊಲೆಗೆ ಯತ್ನಿಸಿದವನಿಗೆ 7 ವರ್ಷ ಜೈಲು
ಕೊಡಗು

ವ್ಯಕ್ತಿ ಕೊಲೆಗೆ ಯತ್ನಿಸಿದವನಿಗೆ 7 ವರ್ಷ ಜೈಲು

November 18, 2018

ಮಡಿಕೇರಿ: ವ್ಯಕ್ತಿಯೋರ್ವ ರನ್ನು ಕತ್ತಿಯಿಂದ ಕಡಿದು ಹತ್ಯೆಗೆ ಯತ್ನಿಸಿದ ಆರೋಪ ಸಾಬೀತಾದ ಹಿನ್ನೆಲೆ ಯಲ್ಲಿ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಅಪರಾಧಿಗೆ 7 ವರ್ಷಗಳ ಕಠಿಣ ಸಜೆ ವಿಧಿಸಿ ತೀರ್ಪು ನೀಡಿದೆ. ಮರಗೋಡು ಮೂಲದ ನಿವಾಸಿ ರಘು ಎಂಬಾತನೇ ಶಿಕ್ಷೆಗೆ ಒಳಗಾದ ಅಪ ರಾಧಿಯಾಗಿದ್ದಾನೆ.

ಪ್ರಕರಣ ಹಿನ್ನೆಲೆ: 2018ರ ಜನವರಿ 14 ರಂದು ಮರಗೋಡು ನಿವಾಸಿಯಾದ ಜೆ.ಎನ್. ರಮೇಶ್ ಎಂಬವರು ಕಾಫಿ ಕಣದಲ್ಲಿ ಒಣಗಲು ಹಾಕಿದ್ದ ಕಾಫಿಯನ್ನು ಕಾವಲು ಕಾಯಲು ಅತ್ತ ಕಡೆ ಹೋಗು ತ್ತಿದ್ದರು. ಈ ಸಂದರ್ಭ ರಘು ಎಂಬಾತ ಹಳೇ ವೈಷಮ್ಯದಿಂದ ಜೆ.ಎನ್. ರಮೇಶ್ ಅವರಿಗೆ ಕತ್ತಿಯಿಂದ ತಲೆಯ ಹಿಂಭಾಗಕ್ಕೆ ಬಲವಾಗಿ ಕಡಿದು ತೀವ್ರ ಗಾಯಗೊಳಿ ಸಿದ್ದ. ಈ ಕುರಿತು ಮಡಿಕೇರಿ ಗ್ರಾಮಾಂ ತರ ಪೊಲೀಸ್ ಠಾಣೆಯಲ್ಲಿ ಆರೋಪಿ ರಘು ವಿರುದ್ದ ಪ್ರಕರಣ ದಾಖಲಿಸಿ ಕೊಂಡು ನ್ಯಾಯಾಲಯಕ್ಕೆ ದೋಷಾರೋ ಪಣಾ ಪಟ್ಟಿ ಸಲ್ಲಿಸಿದ್ದರು.

ಪ್ರಕರಣವನ್ನು ವಿಚಾರಣೆ ನಡೆಸಿದ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾ ಲಯದ ನ್ಯಾಯಾಧೀಶರಾದ ಪವನೇಶ್, ಆರೋಪಿ ರಘು ಕೊಲೆ ಮಾಡುವ ಉದ್ದೇ ಶದಿಂದಲೇ ರಮೇಶ್ ಅವರ ಮೇಲೆ ಹಲ್ಲೆ ನಡೆಸಿದ್ದಾನೆಂದು ಆದೇಶ ಪ್ರಕಟಿ ಸಿದರು. ಕೊಲೆ ಮಾಡುವ ಉದ್ದೇಶದಿಂದ ಕತ್ತಿಯಿಂದ ಕೃತ್ಯ ಎಸಗಿದ ಅಪರಾಧಕ್ಕಾಗಿ 7 ವರ್ಷ ಕಠಿಣ ಸಜೆ ಮತ್ತು 7 ಸಾವಿರ ರೂ. ದಂಡ, ದಾರಿಯಲ್ಲಿ ಅಡ್ಡಗಟ್ಟಿ ಕೃತ್ಯ ಎಸಗಿದ ಅಪರಾಧಕ್ಕಾಗಿ 1 ತಿಂಗಳ ಸಜೆ ಮತ್ತು 500 ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಪಾವತಿಯಾಗುವ ದಂಡದ ಹಣದಲ್ಲಿ 7 ಸಾವಿರ ರೂ.ಗಳನ್ನು ಗಾಯಾಳು ರಮೇಶ್‍ಗೆ ಪರಿಹಾರವಾಗಿ ನೀಡುವಂತೆ ಆದೇಶದಲ್ಲಿ ತಿಳಿಸಿದ್ದಾರೆ. ಸರಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಎಂ.ಕೃಷ್ಣವೇಣಿ ವಾದ ಮಂಡಿಸಿದ್ದರು.

Translate »