ಪೊನ್ನಂಪೇಟೆ: ದ್ವಿರಾಷ್ಟ್ರ ಕರಾಟೆ ಚಾಂಪಿಯನ್‍ಶಿಪ್‍ನಲ್ಲಿ ಪಾಲ್ಗೊಂಡಿದ್ದ ಕೊಡಗಿನ ಮೂವರು ಯುವ ಕರಾಟೆ ಪಟುಗಳಿಗೆ ಪ್ರಶಸ್ತಿ ಲಭಿಸಿದೆ.ಇತ್ತೀಚೆಗೆ ಕೇರಳದ ಕಲ್ಲಿಕೋಟೆ ಸಮೀ ಪದ ನಾದಪುರಂನಲ್ಲಿರುವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ 2ನೇ ಇಂಡೋ- ಶ್ರೀಲಂಕ ಮುಕ್ತ ಕರಾಟೆ ಚಾಂಪಿಯನ್‍ಶಿಪ್ ನಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಾದ ಆಲೀರ ಯು. ನಾಫೀಯಾ, ದುದ್ದಿಯಂಡ ಹೆಚ್. ಉವೈಸ್ ಮತ್ತು ದುದ್ದಿಯಂಡ ಹೆಚ್. ಮುರ್ಶಿದಾ ಅವರ ಅತ್ಯುತ್ತಮ ಸಾಧನೆಯ ಹಿನ್ನೆಲೆಯಲ್ಲಿ ಈ ಪ್ರಶಸ್ತಿ ದೊರೆತಿದೆ.
ಚಾಂಪಿಯನ್‍ಶಿಪ್‍ನ 32ರಿಂದ 35 ಕೆ.ಜಿ. ಯವರೆಗಿನ ವಿಭಾಗದಲ್ಲಿ ಆಲೀರ ನಾಫೀಯಾ ಪ್ರಥಮ ಸ್ಥಾನ ಪಡೆದರೆ, 22 ರಿಂದ 25 ಕೆ.ಜಿ.ಯವರೆಗಿನ ವಿಭಾಗದಲ್ಲಿ ದುದ್ದಿಯಂಡ ಹೆಚ್. ಮುರ್ಶಿದಾ ದ್ವಿತೀಯ ಸ್ಥಾನ ಪಡೆದು ಕೊಂಡಿದ್ದಾಳೆ. ಸ್ಪರ್ಧೆಯ 42ರಿಂದ 45 ಕೆ.ಜಿ.ಯವರೆಗಿನ ವಿಭಾಗ ದಲ್ಲಿ ದುದ್ದಿಯಂಡ ಹೆಚ್. ಉವೈಸ್ ತೃತೀಯ ಸ್ಥಾನ ಗಳಿಸಿದ್ದಾನೆ.
ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿ ರುವ ಈ ಮೂವರು ಕೊಡಗಿನ ವಿದ್ಯಾ ರ್ಥಿಗಳು, ಬೆಂಗಳೂರಿನ ಯುನಿವರ್ಸಲ್ ಮಾರ್ಷಲ್ ಆಟ್ರ್ಸ್ ಮತ್ತು ಸ್ಪೋಟ್ರ್ಸ್ ಶಾಲೆಯ ಮುಖ್ಯ ತರಬೇತುದಾರರಾದ ದುದ್ದಿಯಂಡ ಎಸ್. ಹಂಝ ಅವರ ಮಾರ್ಗದರ್ಶನಲ್ಲಿ ದ್ವಿರಾಷ್ಟ್ರ ಕರಾಟೆ ಚಾಂಪಿ ಯನ್‍ಶಿಪ್‍ನಲ್ಲಿ ಪಾಲ್ಗೊಂಡಿದ್ದರು.