ರೈತರಿಗೆ ಸಾಲ ನೀಡದೆ ಕಿರುಕುಳ ಆರೋಪ ಕರ್ನಾಟಕ ಬ್ಯಾಂಕ್ ಮುಂದೆ ರೈತರ ಪ್ರತಿಭಟನೆ
ಹಾಸನ

ರೈತರಿಗೆ ಸಾಲ ನೀಡದೆ ಕಿರುಕುಳ ಆರೋಪ ಕರ್ನಾಟಕ ಬ್ಯಾಂಕ್ ಮುಂದೆ ರೈತರ ಪ್ರತಿಭಟನೆ

November 18, 2018

ಅರಸೀಕೆರೆ: ತಾಲೂಕಿನಲ್ಲಿ ರೈತರು ಕೃಷಿ ಮತ್ತು ಕೃಷಿ ಅವಲಂಬಿತ ಉದ್ಯೋಗ ಗಳನ್ನು ಮಾಡಲು ಬ್ಯಾಂಕ್ ವ್ಯವಸ್ಥಾಪಕರು ಸಾಲವನ್ನು ನೀಡದೆ ಉದ್ದೇಶಪೂರ್ವಕ ವಾಗಿ ಕಿರುಕುಳ ನೀಡುತ್ತಿದ್ದಾರೆಂದು ಆರೋ ಪಿಸಿ ತಾಲೂಕು ರೈತ ಸಂಘದ ನೇತೃತ್ವ ದಲ್ಲಿ ನೂರಾರು ರೈತರು ನಗರದ ಕರ್ನಾಟಕ ಬ್ಯಾಂಕ್ ಮುಂಭಾಗ ಪ್ರತಿಭಟನೆ ನಡೆಸಿದರು.

ನಗರದ ಚೆಸ್ಕಾಂ ಕಚೇರಿ ಮುಂಭಾಗ ದಲ್ಲಿರುವ ಕರ್ನಾಟಕ ಬ್ಯಾಂಕ್ ಮುಂಭಾಗ ಜಮಾಯಿಸಿದ್ದ ನೂರಾರು ರೈತರನ್ನು ಉದ್ದೇಶಿಸಿ ರೈತ ಸಂಘದ ಮುಖಂಡ ಮೇಲೇನ ಹಳ್ಳಿ ನಾಗರಾಜು ಮಾತನಾಡಿ, ನಮ್ಮ ಸಂಘದ ಕಾರ್ಯದರ್ಶಿ ಅಣ್ಣಾಯಕನ ಹಳ್ಳಿ ಶಿವಮೂರ್ತಿ ಹೈನುಗಾರಿಕೆ ಮಾಡಲು ಸೂಕ್ತ ದಾಖಲೆಗಳನ್ನು ನೀಡಿ ಸಾಲಕ್ಕಾಗಿ ಅರ್ಜಿಯನ್ನು ಸಲ್ಲಿಸಿದ್ದರು. ರೈತರು ಸಾಲ ವನ್ನು ಪಡೆಯಲು ಸೂಕ್ತ ದಾಖಲಾತಿ ಗಳನ್ನು ಬ್ಯಾಂಕಿಗೆ ನೀಡಿದ್ದರೂ ವ್ಯವಸ್ಥಾ ಪಕ ದಿಲೀಪ್ ಅವರು ಸಾಲ ನೀಡದೆ ರೈತರನ್ನು ಸತಾಯಿಸುತ್ತಿದ್ದಾರೆ.

ಹಾಲಿನ ಡೈರಿ ಪ್ರಾರಂಭಿಸಲು ಬ್ಯಾಂಕ್ ಸಾಲ ನೀಡುತ್ತದ್ದೆಂದು ತಿಳಿದು ಶೆಡ್ ಗಳನ್ನು ನಿರ್ಮಿಸಲು ಕೈಸಾಲ ಮಾಡ ಲಾಗಿದೆ. ಅಲ್ಲದೇ ಇತರೆ ದಾಖಲಾತಿಗಳಿ ಗಾಗಿ ಹಣ ವೆಚ್ಚವಾಗಿದ್ದು ಇಂದು ಸಾಲ ಕೊಡುವುದಿಲ್ಲವೆಂದು ಕಾರಣಗಳನ್ನು ಸೃಷ್ಟಿಸಿ ಕಿರುಕುಳ ನೀಡುತ್ತಿದ್ದಾರೆ. ನಮ್ಮ ಸಂಘದ ಕಾರ್ಯದರ್ಶಿಯವರ ಪಾಡು ಈ ರೀತಿಯಾದರೆ ಇನ್ನುಳಿದ ರೈತರ ಪಾಡೇನು ಎಂದು ಪ್ರಶ್ನಿಸಿದರು.

ರೈತ ಅಣ್ಣಾಯ್ಕನಹಳ್ಳಿ ಶಿವಮೂರ್ತಿ ಮಾತನಾಡಿ, ಡೈರಿ ನಿರ್ಮಾಣ ಮಾಡಲು ಬ್ಯಾಂಕಿನಲ್ಲಿ ಸಾಲ ಕೇಳಿದಾಗ ಹಲವು ದಾಖಲೆಗಳನ್ನು ಕೊಡುವಂತೆ ಕೇಳಿದರು. ಅದರಂತೆ ಎಲ್ಲಾ ದಾಖಲಾತಿಗಳನ್ನು ಒದ ಗಿಸಿಕೊಟ್ಟಿದ್ದು ಕಳೆದ ಕೆಲವು ದಿನಗಳಿಂದ ಸಾಲಕ್ಕಾಗಿ ಅಲೆದಾಡುವಂತೆ ಮಾಡಿ ಈಗ ಸಾಲ ಕೊಡಲು ಬರುವುದಿಲ್ಲ ಎಂದು ವ್ಯವಸ್ಥಾಪಕರು ಹೇಳುತ್ತಿದ್ದಾರೆ. ಇದರಿಂದ ಕೈಸಾಲ ಮಾಡಿಕೊಂಡು ಡೈರಿಗೆ ಬೇಕಾದವುಗಳನ್ನು ಸಿದ್ಧತೆ ಮಾಡಿಕೊಂಡಿ ರುವ ನಮಗೆ ಸಾಲಗಾರರ ಒತ್ತಡದಿಂದ ಏನು ಮಾಡಬೇಕೆಂದು ತೋಚುತ್ತಿಲ್ಲ. ನಮ್ಮದೇ ಆದ ಸ್ವಂತ ಸ್ಥಳದಲ್ಲಿ ನಿರ್ಮಿ ಸಲು ನಮಗೆ ಬ್ಯಾಂಕ್ ಸಾಲ ನೀಡದಿ ದ್ದರೇ ಹೇಗೆ. ನಾನು ನೀಡಿರುವ ದಾಖಲೆ ಗಳನ್ನು ಬ್ಯಾಂಕ್ ಮತ್ತೊಮ್ಮೆ ಮರು ಪರಿಶೀಲಿಸಿ ನನಗೆ ಅವಶ್ಯಕವಾಗಿರುವ ಅರ್ಥಿಕ ನೆರವನ್ನು ನೀಡಬೇಕು ಎಂದರು.

ಬ್ಯಾಂಕ್ ವ್ಯವಸ್ಥಾಪಕ ದಿಲೀಪ್ ಮಾತ ನಾಡಿ, ನಮ್ಮ ಬ್ಯಾಂಕ್ ರೈತರಿಗೆ ಪ್ರಥಮ ಸ್ಥಾನವನ್ನು ನೀಡಿ ಮೊದಲಿನಿಂದಲೂ ಕೃಷಿ ಮತ್ತು ಕೃಷಿ ಅವಲಂಬಿತ ಚಟುವಟಿಕೆ ಗಳಿಗೆ ಸಾಲವನ್ನು ನೀಡುತ್ತಾ ಬಂದಿದೆ. ಆರೋಪ ಮಾಡುತ್ತಿರುವ ರೈತನಿಗೆ ಮೊದಲು ಡೈರಿ ನಿರ್ಮಾಣಕ್ಕಾಗಿ ಅರ್ಜಿ ನೀಡುವಂತೆ ಕೇಳಿದ್ದೆವು. ಅದರಂತೆ ಅವರು ದಾಖಲಾತಿಗಳನ್ನು ನೀಡಿದ ನಂತರ ಬೇರೆ ಬ್ಯಾಂಕ್‍ಗಳಲ್ಲಿ ಸಾಲ ಪಡೆಯಲಾಗಿ ದೆಯೇ ಎಂದು ಪರಿಶೀಲಿಸುವ ಸಮಯ ದಲ್ಲಿ ಇವರು ಟ್ಯಾಕ್ಟರ್‍ಗಾಗಿ ಇತರೆ ಬ್ಯಾಂಕಿ ನಲ್ಲಿ ಸಾಲ ಪಡೆದಿದ್ದು ಬೆಳಕಿಗೆ ಬಂದಿದೆ. ಈ ಕಾರಣದಿಂದ ಸಾಲ ನೀಡಲು ಬರುವು ದಿಲ್ಲ ಎಂದು ತಿಳಿಸಿದ್ದೇವೆ ಹೊರತು ಯಾವುದೇ ದುರುದ್ದೇಶ ಪೂರಕವಾಗಿ ಸಾಲ ನೀಡುವುದನ್ನು ತಡೆಹಿಡಿದಿಲ್ಲ. ವಿದ್ಯ ಮಾನಗಳ ಬಗ್ಗೆ ಬ್ಯಾಂಕಿನ ಮೇಲಧಿಕಾರಿ ಗಳಿಗೆ ತಿಳಿಸಿದ್ದು ಅಧಿಕಾರಿಗಳು ಅನುಮತಿ ನೀಡಿದರೆ ಸಾಲ ಮಂಜೂರಾತಿ ಮಾಡು ವುದಾಗಿ ಹೇಳಿದರು. ಇದಕ್ಕೂ ಮುನ್ನ ರೈತರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮೆರ ವಣಿಗೆ ನಡೆಸಿದರು. ಪ್ರತಿಭಟನೆಯಲ್ಲಿ ಶಿವ ನಂಜಪ್ಪ, ನಿಂಗಪ್ಪ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.

Translate »