ಹಾಸನ: ಸದೃಢ ನಾಗರಿಕ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ನ್ಯಾಯಾಂಗದ ಅವಶ್ಯಕತೆ ಇದೆ. ಈ ನಿಟ್ಟಿ ನಲ್ಲಿ ವಕೀಲರು ಹಾಗೂ ನ್ಯಾಯಾಧೀಶರೆ ಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಎಂದು ಕರ್ನಾಟಕ ಉಚ್ಛ ನ್ಯಾಯಾಲಯದ ಹೆಚ್ಚುವರಿ ನ್ಯಾಯಮೂರ್ತಿ ಹೆಚ್.ಪಿ. ಸಂದೇಶ್ ಅವರು ತಿಳಿಸಿದ್ದಾರೆ.
ಜಿಲ್ಲಾ ವಕೀಲರ ಸಂಘದಲ್ಲಿ ಇಂದು ಏರ್ಪ ಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ತವರು ಮನೆಗೆ ಬಂದಿರುವುದು ತುಂಬಾ ಸಂತೋಷ ವಾಗಿದೆ. ಜಿಲ್ಲೆಯಲ್ಲಿ ವೃತ್ತಿ ಜೀವನ ಆರಂಭಿಸಿ ದಾಗ ಹಿರಿಯ ಮತ್ತು ಕಿರಿಯ ವಕೀಲರು ನೀಡಿದ ಮಾರ್ಗದರ್ಶನ ಮತ್ತು ಸಲಹೆ ಗಳಿಂದ ಈ ಸ್ಥಾನ ಅಲಂಕರಿಸಿದ್ದೇನೆ. ನೀವು ತೋರಿಸಿದ ಪ್ರೀತಿಗೆ ಚಿರಋಣಿ ಆಗಿದ್ದೇನೆ ಎಂದರು.
ಪ್ರತಿಯೊಬ್ಬ ವ್ಯಕ್ತಿಗೆ ತಮ್ಮ ಮೇಲೆ ಆತ್ಮ ವಿಶ್ವಾಸ ಜೊತೆಗೆ ಆತ್ಮಸ್ಥೈರ್ಯ, ಶ್ರಮ, ಶ್ರದ್ಧೆ, ನಿರ್ಭಯತೆ ಇರಬೇಕು ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ ಎಂದ ಅವರು ಸ್ವಾಮಿ ವಿವೇಕಾನಂದರು ಬದುಕಿದ್ದು ಕೇವಲ 39 ವರ್ಷಗಳಾದರೂ ಅವರ ಚಿಂತನೆಗಳು ಅಜರಾಮರವಾಗಿ ಉಳಿದಿವೆ. ನಾನು ಸ್ವಾಮಿ ವಿವೇಕಾನಂದರ ಪುಸ್ತಕ ಗಳನ್ನು ಓದಿ ಅವುಗಳನ್ನು ಅಳವಡಿಸಿ ಕೊಂಡಿದ್ದೇನೆ ಎಂದರು.
ನಮ್ಮ ಭವಿಷ್ಯ ರೂಪಿಸಿಕೊಳ್ಳಲು ನಾವೇ ಶಿಲ್ಪಿಗಳು ಆಗಬೇಕು. ಇಂದಿನ ಯುವ ಜನಾಂಗ ಹಣದ ಬಗ್ಗೆ ಹೆಚ್ಚಿನ ವ್ಯಾಮೋಹ ಬೆಳೆಸಿ ಕೊಂಡಿದ್ದಾರೆ. ಹಣದ ಹಿಂದೆ ಹೋಗದೆ ಆಳವಾದ ಅಧ್ಯಯನ ನಡೆಸಿ ವೃತ್ತಿಯಲ್ಲಿ ಪರಿಣಿತಿ ಹೊಂದಿದಲ್ಲಿ ಯಶಸ್ಸನ್ನು ಕಾಣ ಬಹುದಾಗಿದೆ ಎಂದು ಯುವಕರಿಗೆ ಕಿವಿ ಮಾತು ಹೇಳಿದರು. ಹಕ್ಕುಚ್ಯುತಿಯಾದಾಗ ನ್ಯಾಯಾಲಯದ ಮೇಲೆ ವಿಶ್ವಾಸವಿಟ್ಟು ಬರುವವರ ನೋವಿಗೆ ಸ್ಪಂದಿಸಿ, ಕೆಲಸ ಮಾಡುವ ಮೂಲಕ ಅವರಿಗೆ ಧ್ವನಿಯಾಗಿ ಎಂದರು. ಯುವ ವಕೀಲರು ಮತ್ತು ಯುವ ನ್ಯಾಯಾಧೀಶರು ವೃತ್ತಿಪರತೆ ಬೆಳೆಸಿ ಕೊಳ್ಳಬೇಕು, ನ್ಯಾಯಾಲಯದಲ್ಲಿ ಪ್ರಕರಣ ಗಳ ಬಗ್ಗೆ ವಾದ-ವಿವಾದಗಳ ನಡೆಯುವ ಸಂದರ್ಭದಲ್ಲಿ ಯುವ ವಕೀಲರು ನ್ಯಾಯಾ ಲಯದಲ್ಲಿ ಕುಳಿತು ಗಮನ ಹರಿಸಬೇಕು ಜೊತೆಗೆ ಹೆಚ್ಚು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರಲ್ಲದೆ ಹಿರಿಯ ವಕೀಲರಿಗೆ ಗೌರವ ನೀಡುವುದನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಜಿಲ್ಲಾ ಸತ್ರ ಮತ್ತು ಪ್ರಧಾನ ನ್ಯಾಯಾಧೀಶ ರಾದ ತಿಮ್ಮಣಾಚಾರ್ ಕಾರ್ಯಕ್ರಮ ಉದ್ಘಾ ಟಿಸಿ ಮಾತನಾಡಿ, ನ್ಯಾಯಮೂರ್ತಿ ಹೆಚ್.ಪಿ.ಸಂದೇಶ್ ಅವರು ಮೃದು ಭಾಷಿ ಗಳಾಗಿದ್ದು ಎಲ್ಲರನ್ನು ಜೊತೆಯಾಗಿ ಕರೆದು ಕೊಂಡು ಹೋಗುವ ಸಾಮಥ್ರ್ಯವಿದೆ ಎಂದ ರಲ್ಲದೆ, ಶ್ರೀಯುತರಿಂದ ಒಳ್ಳೆಯ ತೀರ್ಪು ಗಳನ್ನು ನಿರೀಕ್ಷಿಸಬಹುದಾಗಿದೆ ಎಂದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ವೆಂಕ ಟೇಶ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ನ್ಯಾಯಮೂರ್ತಿಗಳಾದ ಹೆಚ್.ಪಿ.ಸಂದೇಶ್ ಸತತ ಪರಿಶ್ರಮದಿಂದ ಇಂದು ಹೈಕೋರ್ಟಿನ ನ್ಯಾಯಾಧೀಶರಾಗಿ ದ್ದಾರೆ. ಸಾಧಕರ ಆದರ್ಶಗಳನ್ನು ಮೈಗೂ ಡಿಸಿಕೊಂಡು ವೃತ್ತಿ ನಡೆಸೋಣ ಎಂದರು.
ಹೇಮಾ ಸಂದೇಶ್, ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷರಾದ ರಾಷ್ಟ್ರಪತಿ, ಖಜಾಂಚಿ ರೋಹಿತ್, ಜಂಟಿ ಕಾರ್ಯ ದರ್ಶಿ ಭಾಗ್ಯ ಉಪಸ್ಥಿತರಿದ್ದರು. ಕಾಯ ್ಕ್ರಮದಲ್ಲಿ ವಿವಿಧ ನ್ಯಾಯಾಧೀಶರು ಹಾಗೂ ಪಬ್ಲಿಕ್ ಪ್ರಾಸಿಕ್ಯೂಟರ್ ವಕೀ ಲರು ಹಾಜರಿದ್ದರು. ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಧರಣಿ ಸ್ವಾಗತಿಸಿದರು, ವಕೀಲರಾದ ಚಂದ್ರಶೇಖರ್ ನಿರೂಪಿಸಿ ದರು, ಉದಯ ಕುಮಾರ್ ವಂದಿಸಿದರು.